ಜಿಲ್ಲೆ

ಕಾಳಿ ಉತ್ಸವದಿಂದ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ

ದಾಂಡೇಲಿ: ಉತ್ಸವಗಳ ಆಚರಣೆ ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನೆರವಾಗುತ್ತವೆ. ದಾಂಡೇಲಿಯ ಕಾಳಿ ಉತ್ಸವ ಸ್ಥಳೀಯ ಕಲಾವಿದರಿಗೆ ಪೋ›ತ್ಸಾಹಿಸುವ ನಗರದ ಹೆಮ್ಮೆಯ ಉತ್ಸವ ಆಗಿದೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಅಭಿಪ್ರಾಯಪಟ್ಟರು.

ನಗರದ ಕಾರ್ವಿುಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾಳಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಕಳೆದ 10 ವರ್ಷಗಳಿಂದ ಉತ್ಸವವನ್ನು ಆಚರಿಸುತ್ತಿರುವ ಉತ್ಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಇಲಿಯಾಜ್ ಕಾಟಿಯವರ ಪರಿಶ್ರಮ, ಸಘಟನಾ ಶಕ್ತಿ ಮೆಚ್ಚುವಂತಹುದು ಎಂದರು.

ಸಮಾಜ ಸೇವಕ ಕೆ.ಆರ್. ರಮೇಶ ಮಾತನಾಡಿ ಕಲೆಯ ಪ್ರಗತಿಗೆ ನೆರವಾಗುತ್ತಿರುವ ಈ ಉತ್ಸವ ನಗರದಲ್ಲಿ ಅಪಾರ ಜನಪ್ರೀಯತೆ ಪಡೆದಿರುವದು ಸಂತೋಷದ ವಿಷಯ ಎಂದರು.

ಇಲಿಯಾಜ್ ಕಾಟಿ ಅಧ್ಯಕ್ಷತೆ ವಹಿಸಿದ್ದರು. ಫಾಸ್ಟರ್ ಫೆಲೋಶಿಪ್ ಟ್ರಸ್ಟಿನ ನಿರ್ದೇಶಕ ಕ್ರೀಸ್ಟೋಫರ್, ಜನತಾ ವಿದ್ಯಲಯದ ಪ್ರಾಂಶುಪಾಲ ಅಮೃತ ರಾಮರಥ, ದಾದಾಪೀರ ನದಿಮುಲ್ಲಾ, ನಗರಸಭಾ ಸದಸ್ಯ ಅನಿಲ ನಾಯ್ಕರ್ ಇತರರು ಉಪಸ್ಥಿತರಿದ್ದರು. ರವಿ ಮಾಳಕರಿ ನಿರೂಪಿಸಿದರು.