ಜಿಲ್ಲೆ

ಅಪಘಾತದಲ್ಲಿ ಇಬ್ಬರು ಸಾವು

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಕಲಘಟಗಿ: ತಾಲೂಕಿನ ಧಾರವಾಡ ಕ್ರಾಸ್ ಬಳಿ ಶುಕ್ರವಾರ ಬೆಳಗಿನ ಜಾವ ಟಾಟಾ ಗೂಡ್ಸ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ.
ಮೃತರನ್ನು ಹುಬ್ಬಳ್ಳಿಯ ನಿವೃತ್ತ ಬ್ಯಾಂಕ್ ನೌಕರ ಫ್ರಾನ್ಸಿಸ್ ಗೊನ್ಸಾಲಿಸ್ (73) ಹಾಗೂ ಖಾಸಗಿ ಕಂಪನಿ ಉದ್ಯೋಗಿ ಒಲಿವಿಯಾ ಕ್ಯಾಥರಿನ್ (36) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಫ್ರಾನ್ಸಿಸ್ ಪತ್ನಿ ಲೀನಾ, ಪುತ್ರ ಏಲೆನ್, ಮೊಮ್ಮಕ್ಕಳಾದ ಜೋರ್ಡನ್(5), ಶುವಾ (7) ಹಾಗೂ ಗೂಡ್ಸ್ ವಾಹನ ಚಾಲಕ ಗಣೇಶ ಖನ್ನಾಗೌಡ ಗಾಯಗೊಂಡಿದ್ದಾರೆ.
ಹುಬ್ಬಳ್ಳಿಯಿಂದ ಕಲಘಟಗಿಯತ್ತ ಹೊರಟಿದ್ದ ಕಾರಿಗೆ ಕಲಘಟಗಿಯಿಂದ ಹುಬ್ಬಳ್ಳಿ ಕಡೆ ಹೊರಟ್ಟಿದ್ದ ಟಾಟಾ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಕಿಮ್ಸ್ಗೆ ದಾಖಲಿಸಲಾಗಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಸಿದ್ಧಾರೂಢ ಆಲದಕಟ್ಟಿ ತನಿಖೆ ಕೈಗೊಂಡಿದ್ದಾರೆ.