ಜಿಲ್ಲೆ

ರಕ್ತಹಿನತೆಗೆ ಸೊಪ್ಪು, ತರಕಾರಿ ಮದ್ದು

Davangere - Desk - Mahesh Babu E

ಐಮಂಗಲ: ಹಸಿ ತರಕಾರಿ, ಸೊಪ್ಪು, ಮೊಳಕೆ ಕಾಳುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತಹಿನತೆ ತಡೆಗಟ್ಟಬಹುದು ಎಂದು ಐಮಮಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ವಿಜಯ್ ತಿಳಿಸಿದರು.

ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪೋಷಣ್ ಅಭಿಯಾನ ಹಾಗೂ ಪೌಷ್ಠಿಕ ಆಹಾರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಸೇವಿಸುವ ಆಹಾರದಲ್ಲಿ ಕಬ್ಬಿಣಾಂಶ ಕಡಿಮೆ ಇರುವುದು ಹಾಗೂ ಜಂತುಹುಳುಗಳು ದೇಹದಲ್ಲಿ ಹೆಚ್ಚಾಗಿ ದೇಹ ಸೇರಿ ಪೋಷಕಾಂಶಗಳನ್ನು ಹೀರುವುದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತೆವೆ. ಜತೆಗೆ ರಕ್ತ ಹೀನತೆ ಉಂಟಾಗುತ್ತದೆ. ಗರ್ಭಿಣಿಯರಲ್ಲಿ ಹೆಚ್ಚು ಎಂದರು.

ಆದ್ದರಿಂದ ಪ್ರಕೃತಿಯಲ್ಲಿ ದೊರೆಯುವ ಸೊಪ್ಪು, ತರಕಾರಿ, ಹಣ್ಣುಗಳಲ್ಲಿ ಒಂದೊಂದು ಜೀವ ಸತ್ವಗಳು ದೊರೆಯುತ್ತವೆ. ಅವುಗಳನ್ನು ಬಳಸುವುದರಿಂದ ಆರೋಗ್ಯ ಲಭಿಸಲಿದೆ ಎಂದು ಹೇಳಿದರು.

ಅಂಗನವಾಡಿ ಮೇಲ್ವಿಚಾರಕಿ ಶಾಂತಕುಮಾರಿ ಮಾತನಾಡಿದರು. ಪ್ರಾಚಾರ್ಯ ಡಿ.ಎಸ್.ವೇದಮೂರ್ತಿ, ಉಪನ್ಯಾಸಕರಾದ ಎಂ.ರಮೇಶ್, ರಾಘವೇಂದ್ರ, ತಿಪ್ಪೇಸ್ವಾಮಿ, ಮಂಜುನಾಥ್, ಭೀಮೇಶ್‌ನಾಯ್ಕ, ಲೀಲಾವತಿ, ಆರೋಗ್ಯ ಇಲಾಖೆಯ ಸುಧಾ, ಗೀತಾ, ರಾಜೇಶ್ವರಿ, ರಮೇಶ್, ಅಮಿತ್ ಇದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಕೇಂದ್ರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.