ಗದಗ: ತಾಲೂಕಿನ ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ ದಿನಾಂಕ: ೨೭-೧೦-೨೦೨೪ ರಂದು ೧೫೩೧ನೇ ಶಿವಾನುಭವ ಕಾರ್ಯಕ್ರಮದಲ್ಲಿ ಪ್ರಥಮ ಸ್ವಾತಂತ್ರö್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮಾ ಭಾವಚಿತ್ರಕ್ಕೆ ನಾಡಗೀತೆ ಹಚ್ಚೇವು ನಾವು ಕನ್ನಡದ ದೀಪ ಗೀತೆಯೊಂದಿಗೆ ಪುಷ್ಪವೃಷ್ಠಿಗೈಯ್ಯಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮತಿ ರತ್ನಾ ಸಂತೋಷ ನಾಯ್ಕರ, ಮುಖ್ಯ ಅತಿಥಿಗಳಾಗಿ ಬಸವಕೇಂದ್ರದ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಗ. ಖಂಡಮ್ಮನವರ, ಅತಿಥಿಗಳಾದ ಶ್ರೀಮತಿ ಮಂಜುಳಾ ಮು. ರಾಯನಗೌಡ್ರ, ಶಿವಲೀಲಾ ಮ್ಯಾಗೇರಿಮಠ, ಲಕ್ಷö್ಮವ್ವ ಬಾರಕೇರ, ಮಂಜುಳಾ ನಿ. ನರಸಾಪೂರ, ಮಾದೇವಿ ಕನ್ನೂರ, ಸುನಂದಾ ಚಿಗರಿ, ಬಸವೆಣ್ಣೆವ್ವ ಶೆಟ್ಟರ, ಲಲಿತಾ ಹಿರೇಮಠ, ಸಂಜೋತಾ ಬಡಿಗೇರ, ಈರಮ್ಮ ಇನಾಮತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ೮೦ ವರ್ಷದ ಪೂರೈಸಿದದ ಹಿರಿಯರಾದ ಚೆನ್ನಮ್ಮಾ ಮಲಕಾಜಪ್ಪ ಇನಾಮತಿ ಮತ್ತು ಕಳಸಾಪೂರ ಗ್ರಾಮದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ ಶಿವಮ್ಮ ಚ. ಅಸುಂಡಿ ಗುಂಡು ಎಸೆತದಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ರಿಂಗ್ ಎಸೆತದಲ್ಲಿ ತೃತೀಯ ಸ್ಥಾನ ಸಾಧನೆಗೈದ ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ನಿಮಿತ್ಯ ಪುಷ್ಪವೃಷ್ಠಿ ಗೈದು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮುಖ್ಯ ಅತಿಥಿಗಳಾದ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡುತ್ತಾ ಸ್ವಾತಂತ್ರö್ಯದ ಕಿಚ್ಚುಹಚ್ಚಿದ ಭಾರತದ ಪ್ರಥಮ ಸ್ವಾತಂತ್ರö್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮಾ ಬ್ರಿಟಿಷರ ವಿರುದ್ದ ರಣಚಂಡಿಯಾಗಿ ಬೈಲಹೊಂಗಲ ಜೈಲಿನಲ್ಲಿ ಚೆನ್ನಮ್ಮಾಳನ್ನು ಬಂಧಿಸಿ ಇಡುತ್ತಾರೆ ೫ ವರ್ಷಗಳ ಕಾಲ ಬಂಧಿಯಾಗಿದ್ದ ರಾಣಿ ಚೆನ್ನಮ್ಮಾ ದೇಶದ ಸ್ವಾತಂತ್ರö್ಯಕ್ಕಾಗಿ ಅವಿಸ್ಮರಣೀಯ ಹೋರಾಟ ಮಾಡಿದರು. ಸ್ವಾತಂತ್ರö್ಯ ಭಾರತದ ಇಂದಿನ ಮಹಿಳೆಯರು ವೀರರಾಣಿ ಕಿತ್ತೂರು ಚೆನ್ನಮ್ಮಾಳ ದೇಶಕ್ಕಾಗಿ ಹೋರಾಟ ಮಾಡಿದ ನೆನಪುಗಳು ಮರೆಯದಂತೆ ಇಂದಿನ ಎಲ್ಲಾ ಮಹಿಳೆಯರು ಅವರ ಆದರ್ಶ ಜೀವನವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಳಸಾಪೂರ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ನಾಯ್ಕರ ಮಾತನಾಡಿ ಕಳಸಾಪೂರ ಗ್ರಾಮದಲ್ಲಿ ಬಸವ ಕೇಂದ್ರ ವತಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮಾ ಜಯಂತ್ಯೋತ್ಸವ ಆಚರಿಸುತ್ತಿರುವುದು ನಮ್ಮ ಗ್ರಾಮದ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಅದರಂತೆ ವೀರರಾಣಿ ಕಿತ್ತೂರು ಚೆನ್ನಮ್ಮಾಳ ಆದರ್ಶ ಜೀವನದ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇಂದಿನ ಮಹಿಳೆಯರು ದೇಶಕ್ಕಾಗಿ, ನಾಡು, ನುಡಿಗಾಗಿ ಶ್ರಮಿಸಬೇಕೆಂದು ಭಾವನಾತ್ಮಕವಾಗಿ ಮಾತನಾಡಿದರು.