ಜಿಲ್ಲೆ

ಇಂದಿನಿಂದ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಪ್ರತಿಷ್ಠಾಪನಾ ಕಳಸ ಸ್ಥಾಪನಾ ಮಹೋತ್ಸವ

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆ ಹೌಸಿಂಗ್ ಬೋರ್ಡ್ ಕಾಲನಿ ಶ್ರೀ ಸಂಕಷ್ಟಹರ ಸಿದ್ಧಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ನ.26ರಿಂದ 28 ರವರೆಗೆ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನ ಕಳಸ ಸ್ಥಾಪನಾ ಮಹೋತ್ಸವ ಏರ್ಪಡಿಸಲಾಗಿದೆ. 26ರಂದು ಬೆಳಗ್ಗೆ 9ಕ್ಕೆ ನಗರದ ರಂಗಯ್ಯನ ಬಾಗಿಲು ಬಸವ ಮಂಟಪದಿಂದ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿಯನ್ನು ಪೂರ್ಣ ಕುಂಭ,ಜಾನಪದ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ವಿನಾಯಕ ಸ್ವಾಮಿ ದೇವಾಲಯಕ್ಕೆ ತರಲಾಗುವುದು.

ಈ ವೇಳೆ ನಾನಾ ಧಾರ್ಮಿಕ ವಿಧಿಗಳು ನೆರವೇರಲಿದ್ದು,ಮೆರವಣಿಗೆಯನ್ನು ಸಮಾಜ ಸೇವಕ ಡಾ.ಸಿದ್ದಾರ್ಥ ಗುಂಡಾರ್ಫಿ ಉದ್ಘಾಟಿ ಸುವರು. ಸಂಜೆ 6ಕ್ಕೆ ದೇವಾಲಯದ ಬಳಿ ಐಮ್ಯಾಕ್ಸ್ ದೀಪದ ಉದ್ಘಾಟನೆ ನೆರವೇರಲಿದೆ. ಸಿದ್ದಾರ್ಥ ಗುಂಡಾರ್ಫಿ,ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್,ಕುಡಾ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ ಉಪಸ್ಥಿತರಿರುತ್ತಾರೆ.

27ರಿಂದ ಸಂಜೆಯಿಂದ 28ರಂದು ಬೆಳಗಿನ ಜಾವದವರೆಗೆ ಧಾರ್ಮಿಕ ವಿಧಿಗಳೊಂದಿಗೆ ಹೋಮದ ಪೂರ್ಣಾಹುತಿ ನೆರವೇರಲಿದೆ. ಬೆಳಗ್ಗೆ 9ಕ್ಕೆ ಜಗಳೂರು ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ‌್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮ ಸಭೆ ನಡೆಯಲಿದೆ. ಶಾಸಕ ಹಾಗೂ ಬೆನಕನ ಬಳಗದ ಅಧ್ಯಕ್ಷ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸುವರು. ಇತರೆ ಗಣ್ಯರು ಉಪಸ್ಥಿತರಿರುವರು. ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ ಇರುತ್ತದೆ. ರಾತ್ರಿ 8ಕ್ಕೆ ಕಡೇ ಕಾರ್ತಿಕ ಮಹೋತ್ಸವಿರುತ್ತದೆ.

----