ಕಿಕ್ಕೇರಿಯ ಉಪ್ಪರಿಗೆ ಬಸವಣ್ಣ ರಂಗಮಂಟಪದ ಕಳಸವನ್ನು ಶುಕ್ರವಾರ ಪ್ರತಿಷ್ಠಾಪನೆ ಮಾಡಲಾಯಿತು. ಕೆ.ಎಸ್.ಶಿವರಾಮೇಗೌಡ, ರಾಯಲ್ ನಾಗರಾಜು, ಮಧುಕರ್, ನಾಗಣ್ಣ, ಕೆ.ಎನ್. ಪುಟ್ಟೇಗೌಡ, ಉಮೇಶ್, ಸತ್ಯ, ಮುರುಳಿ, ನಾಗೇಶಾಚಾರ್, ಗುಂಡ ಇದ್ದರು.  
ಜಿಲ್ಲೆ

ರಂಗಮಂಟಪದಲ್ಲಿ ಕಳಸ ಪ್ರತಿಷ್ಠಾಪನೆ

ಕಿಕ್ಕೇರಿ: ಇಲ್ಲಿನ ಉಪ್ಪರಿಗೆ ಬಸವಣ್ಣ ರಂಗಮಂಟಪದಲ್ಲಿ ಶುಕ್ರವಾರ ನೂತನ ಕಳಸ ಪ್ರತಿಷ್ಠಾಪನೆ ಮಾಡಲಾಯಿತು.

ರಂಗಸ್ಥಳದ ಖುರ್ಜುವಿನ ಗೋಪುರಕ್ಕೆ ಅಳವಡಿಸಲಾಗಿದ್ದ ಕಳಸ ಬಣ್ಣ ಬಳಿಯುವಾಗ ಕಾರ್ಮಿಕರು ಬೀಳಿಸಿದ್ದರು. ಪರಿಣಾಮ ಕಳಸ ಭಿನ್ನವಾಗಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಳಸವನ್ನು ಅಳವಡಿಸಲಾಯಿತು.

ಪ್ರತಿಷ್ಠಾಪನೆಗೂ ಮುನ್ನ ಉಪ್ಪರಿಗೆ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಳಸಕ್ಕೆ ಹೂವಿನ ಅಲಂಕಾರ ಮಾಡಿ, ಅರಿಶಿಣ, ಕುಂಕುಮ ಲೇಪಿಸಿ ಆರತಿ ಬೆಳಗಲಾಯಿತು. ನಂತರ ಪ್ರಮುಖ ಬೀದಿಯಲ್ಲಿ ಕಳಸವನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಿ ಅಂತಿಮವಾಗಿ ಕಳಸವನ್ನು ರಂಗಸ್ಥಳದ ಖುರ್ಜುವಿನಲ್ಲಿ ಪ್ರತಿಷ್ಠಾಪಿಸಲಾಯಿತು.

ಸ್ಥಳೀಯರಾದ ಕೆ.ಎಸ್.ಶಿವರಾಮೇಗೌಡ, ರಾಯಲ್ ನಾಗರಾಜು, ಮಧುಕರ್, ನಾಗಣ್ಣ, ಕೆ.ಎನ್. ಪುಟ್ಟೇಗೌಡ, ಉಮೇಶ್, ಸತ್ಯ, ಮುರುಳಿ, ನಾಗೇಶಾಚಾರ್, ಗುಂಡ, ಸುರೇಶ್ ಮತ್ತಿತರರಿದ್ದರು.