ಜಿಲ್ಲೆ

‘ಕಲಾರವಿಂದ’ ಪ್ರಶಸ್ತಿಗೆ ಆಯ್ಕೆ

ಪಂಕಜ ಕೆ.ಎಂ.

ಬೆಂಗಳೂರು: ಸಂಗೀತ ಕೃಪಾಕುಟೀರ ಸಂಸ್ಥೆ ನೀಡುವ ‘ಸಂಗೀತ ಕಲಾರವಿಂದ ಪ್ರಶಸ್ತಿ’ಗೆ ಕರ್ನಾಟಕ ಸಂಗೀತ ಗಾಯಕಿ ವಿದುಷಿ ಮೀನಾಕ್ಷಿ ರವಿ ಹಾಗೂ ತಬಲಾ ವಾದಕ ಪಂ. ಡಾ. ಸತೀಶ್ ಹಂಪಿಹೊಳಿ ಆಯ್ಕೆಯಾಗಿದ್ದಾರೆ.

29ರಂದು ಬೆಳಗ್ಗೆ 10.15ಕ್ಕೆ ಬನಶಂಕರಿ 2ನೇ ಹಂತದ ಹನುಮಂತನಗರದ ಸ್ವಾಮಿ ವಿವೇಕಾನಂದ ವಿದ್ಯಾ ಶಾಲೆ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗಾಯಕ ಮುದ್ದುಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿಂದುಸ್ತಾನಿ ಗಾಯಕ ಮೃತ್ಯುಂಜಯ ಶೆಟ್ಟರ್ ಅವರಿಂದ ಗಾಯನ ನಡೆಯಲಿದೆ. ಸತೀಶ್ ಹಂಪಿಹೊಳಿ (ತಬಲಾ) ಹಾಗೂ ಶಿವಕುಮಾರ್ ಮಹಾಂತ್ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ ಎಂದು ಸಂಗೀತ ಕೃಪಾ ಕುಟೀರದ ಕಾರ್ಯದರ್ಶಿ ಎನ್. ಎಸ್. ಗುಂಡುಶಾಸ್ತ್ರಿ ತಿಳಿಸಿದ್ದಾರೆ.