ಶ್ರೀನಿವಾಸಪುರ: ಕರೊನಾ ಭಯದಲ್ಲಿ ದಿನ ಕಳೆಯುತ್ತಿರುವಾಗಲೇ ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿಯಲ್ಲಿ ಕಾಲರಾ ಕಾಣಿಸಿಕೊಂಡು ಮತ್ತಷ್ಟು ಆತಂಕದ ಸ್ಥಿತಿ ಉಂಟಾಗಿದೆ.
ಗ್ರಾಮದ ಗೋಪಾಲಕೃಷ್ಣ ಎಂಬುವವರು ವಾರದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ವಾಸಿಯಾಗದ ಕಾರಣ ಪರೀಕ್ಷೆಗೆ ಒಳಪಡಿಸಿದಾಗ ಕಾಲರಾ ದೃಢಪಟ್ಟಿದೆ. ಸೋಮವಾರ ಮಧ್ಯರಾತ್ರಿಯೇ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಗೋಪಾಲಕೃಷ್ಣ ಅವರ ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಡಾ.ವಿಜಯ, ಆರೋಗ್ಯ ಸಿಬ್ಬಂದಿ ಹಾಗೂ ಕೋಲಾರದ ಕಾಲರಾ ಪತ್ತೆ ಹಚ್ಚುವ ತಜ್ಞರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರನ್ನು ತಪಾಸಣೆಗೆ ಒಳಪಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಆರೋಗ್ಯ ಸಿಬ್ಬಂದಿಯೊಂದಿಗೆ ಗ್ರಾಪಂ ಸಿಬ್ಬಂದಿ ಭೇಟಿ ನೀಡಿ ಗ್ರಾಮದ ಚರಂಡಿಗಳ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ.
ಪಿಡಿಒಗಳಿಗೆ ಇಒ ಆನಂದ್ ಎಚ್ಚರಿಕೆ: ಕರೊನಾ ಹಾಗೂ ಕಾಲರಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಒ ಎಸ್.ಆನಂದ್ ಮಂಗಳವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ತುರ್ತುಸಭೆ ಕರೆದು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಚರಂಡಿಗಳಲ್ಲಿರುವ ತ್ಯಾಜ್ಯ ತೆಗೆಸಬೇಕು. ಬ್ಲೀಚಿಂಗ್ ಪೌಡರ್ ಹಾಕಬೇಕು. ಅನಗತ್ಯವಾಗಿ ಚರಂಡಿಗಳಿಗೆ ತ್ಯಾಜ್ಯ ಬಿಟ್ಟರೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಗ್ರಾಮದ ಚರಂಡಿಗಳಲ್ಲಿ ತ್ಯಾಜ್ಯ ತುಂಬಿದ್ದು, ಕುಡಿಯುವ ನೀರಿನ ಪೈಪ್‌ಲೈನ್ ಮೂಲಕ ಕಲುಷಿತ ನೀರು ಸರಬರಾಜಾಗಿದೆ. ಮಂಗಳವಾರ ಬೆಳಗ್ಗೆಯಿಂದಲೇ ಆರೋಗ್ಯ ಹಾಗೂ ಗ್ರಾಪಂ ಸಿಬ್ಬಂದಿ ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಡಾ.ವಿಜಯಾ, ಟಿಎಚ್‌ಒ ಶ್ರೀನಿವಾಸಪುರ