ಜಿಲ್ಲೆ

ಕಲಾಲ ಸಮಾಜದಿಂದ ಸನ್ಮಾನ

Dharwada - Basavaraj Idli

ಹುಬ್ಬಳ್ಳಿ: ಸೂರ್ಯವಂಶ ಕ್ಷತ್ರಿಯ ಕಲಾಲ ಸಮಾಜದ ಮಹಿಳಾ ಮಂಡಳದ ವಾಷಿರ್ಕೋತ್ಸವದ ನಿಮಿತ್ತ ನಗರದ ಕೇಶ್ವಾಪುರ ಮಧುರಾ ಕಾಲನಿ ವಿಠ್ಠೂಬಾಯಿ ಕಲ್ಯಾಣ ಮಂಟಪದಲ್ಲಿ ಅ. 26ರಂದು ಬೆಳಗ್ಗೆ 10.30ಕ್ಕೆ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಉದ್ಯಮಿ ಬಸಯ್ಯ ಹಿರೇಮಠ,
ಉಪಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯೆ ಉಮಾ ಮುಕುಂದ, ಕಲಾಲ ಸಮಾಜದ ಲಕ್ಷ್ಮಣ ಗಂಡಗಾಳೇಕರ, ಸದಾನಂದ ಖಜುರಕರ, ಮಹಿಳಾ ಘಟಕದ ಡಾ. ಅನುರಾಧಾ ಕಲಾಲ, ವಿಶಾಲ ಜಾಧವ, ಡಾ. ರಮೇಶ ಮಹಾದೇವಪ್ಪನವರ, ಕೃಷ್ಣಾ ಗಂಡಗಾಳೇಕರ, ಹರೀಶ ಜಂಗಲಿ, ಕವಿತಾ ಗಂಡಗಾಳೇಕರ, ಇತರರನ್ನು ಸನ್ಮಾನಿಸಲಾಗುವದು.

ರಾಜ್ಯದ ವಿವಿಧೆಡೆಯ ಸೂರ್ಯವಂಶ ಕ್ಷತ್ರಿಯ ಕಲಾಲ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮಹಿಳಾ ಮಂಡಳ ಅಧ್ಯಕ್ಷೆ ಶಕುಂತಲಾ ಮಹೇಂದ್ರಕರ ಕೋರಿದ್ದಾರೆ.