ಕಲಘಟಗಿ: ಆಧುನಿಕ ಜೀವನಶೈಲಿಯ ಒತ್ತಡಕ್ಕೆ ಹಾಗೂ ವ್ಯಸನಗಳಿಗೆ ಸಿಲುಕಿರುವ ಇಂದಿನ ಯುವಜನತೆ ಮಾನಸಿಕ ಕಾಯಿಲೆಗಳಿಗೆ ತುತ್ತಾಗಿ ನರಳುತ್ತಿರುವವರಿಗೆ ಯೋಗ ಮತ್ತು ಮಲ್ಲಕಂಬ ರಾಮಬಾಣವಾಗಿದೆ ಆದ್ದರಿಂದ ಇವುಗಳನ್ನು ಜೀವನಕ್ಕೆ ರೂಢಿಸಿಕೊಳ್ಳಬೇಕು ಎಂದು ಶಿರಗುಪ್ಪಿಯ ಸ್ವಾಮಿ ವಿವೇಕಾನಂದ ಯೋಗ ಮತ್ತು ಮಲ್ಲಕಂಬ ತರಬೇತಿ ಸಂಸ್ಥೆಯ ಮುಖ್ಯ ತರಬೇತುದಾರ ರಾಜುಗೌಡ ಶಿವನಗೌಡರ ಹೇಳಿದರು.
ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಿಶ್ರೀಕೋಟಿಯ ಸಿಇಎಸ್ಎಸ್ಜೆ ಪದವಿಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.
ದೇಶಿಯ ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಉಚಿತ ಯೋಗ ಮತ್ತು ಮಲ್ಲಕಂಬ ತರಬೇತಿಯನ್ನು ಸಂಸ್ಥೆಯಿಂದ ನೀಡಲಾಗುತ್ತಿದೆ ಎಂದರು.
ಪ್ರಾಚಾರ್ಯ ಎಸ್.ಎಂ. ಮರಲಿಂಗಣ್ಣವರ ಮಾತನಾಡಿ, ಯುವಕರು ದುಶ್ಚಟಗಳಿಗೆ ದಾಸರಾಗದೆ ಯೋಗ, ಧ್ಯಾನಗಳಲ್ಲಿ ಲೀನನಾದರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಶಿವಮೂರ್ತೆಪ್ಪ ಸಣ್ಣಪೂಜಾರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಹಾಲು ಒಕ್ಕೂಟದ ನಿರ್ದೇಶಕಿ ಗೀತಾ ಮರಲಿಂಗಣ್ಣವರ, ಶೇಖಪ್ಪ ಸಣ್ಣಪೂಜಾರ, ಶಂಕ್ರಪ್ಪ ದೊಡ್ಡಪೂಜಾರ, ಪರಪ್ಪ ಗಲಬಿ, ಮಲ್ಲೇಶಪ್ಪ ಬುರಡಿ, ಸಹದೇವಪ್ಪ ಪುರದಣ್ಣವರ, ಶಿವಯೋಗಯ್ಯ ವಿರಕ್ತಮಠ, ಎಸ್.ಎಂ. ಹುಕ್ಕೇರಿ, ರಾಮಪ್ಪ ಹುಲಮನಿ ಸಂಗಪ್ಪ ಬುರಡಿ, ಮಂಜುನಾಥ ಕಿಳ್ಳಿಕೇತರ, ರಾಮಪ್ಪ ಪುರದಣ್ಣವರ, ಕಲ್ಲಪ್ಪ ಸಣ್ಣಪೂಜಾರ, ಶಿಬಿರಾಧಿಕಾರಿ ಪಿ.ಟಿ. ಲಮಾಣಿ, ಸಿ.ಜಿ. ಕೋಟಿಮಠ, ಮುಂತಾದವರು ಉಪಸ್ಥಿತರಿದ್ದರು. ಶ್ರೀದೇವಿ ಪ್ರಾರ್ಥಿಸಿದರು, ಸಹ ಶಿಬಿರಾಧಿಕಾರಿ ಎಂ.ಬಿ. ಹುಲಮನಿ ಸ್ವಾಗತಿಸಿದರು, ಚಿನ್ನಮ್ಮ ಕರಡಿ, ಕಾವೇರಿ ಮಡಿವಾಳರ ನಿರ್ವಹಿಸಿದರು.