ಜಿಲ್ಲೆ

ಕಲಾದಗಿ-ಕಾತರಕಿ ಬ್ಯಾರೇಜ್‌ಗೆ ನೀರು!

ಕಲಾದಗಿ: ಹಿಡಕಲ್ ಡ್ಯಾಂನಿಂದ ಘಟಪ್ರಭೆಗೆ ಮೂರು ದಿನಗಳ ಹಿಂದೆ ಬಿಟ್ಟ ನೀರು ಸಮೀಪದ ಕಲಾದಗಿ-ಕಾತರಕಿ ಬ್ಯಾರೇಜ್‌ಗೆ ಭಾನುವಾರ ತಲುಪಿತು.

ನಮ್ಮ ಬ್ಯಾರೇಜ್‌ಗೆ ನೀರು ಬರುವುದೆಂದೊ? ಎಂದು ಆತಂಕಗೊಂಡಿದ್ದ ಈ ಭಾಗದ ರೈತರು ಭಾನುವಾರ ಬ್ಯಾರೇಜ್‌ನತ್ತ ಹರಿದುಬರುತ್ತಿರುವ ನೀರನ್ನು ಕಂಡು ಸಂತಸಪಟ್ಟರು.

ಸೋರದ ಗೇಟ್‌ಗಳು: ಪ್ರತಿವರ್ಷ ಗೇಟ್‌ಗಳು ಸೋರಿ ಅಪಾರ ನೀರು ಪೋಲಾಗುತ್ತಿತ್ತು. ಆದರೆ, ಈ ಬಾರಿ ಬಹುತೇಕವಾಗಿ ಎಲ್ಲ ಗೇಟ್‌ಗಳನ್ನು ದುರಸ್ತಿಗೊಳಿಸಿದ್ದರಿಂದ ನೀರು ಸೋರಿಕೆಯಾಗುವುದು ನಿಂತಿದೆ. ಬೆಳಗ್ಗೆಯಿಂದ ಸಂಜೆ ಹೊತ್ತಿಗೆ ಬ್ಯಾರೇಜ್‌ನಲ್ಲಿ ನಾಲ್ಕು ಲೇಯರನಷ್ಟು ನೀರು ತುಂಬಿಕೊಂಡಿತ್ತು. ರೈತರು, ಜಾನುವಾರುಗಳು ಸದ್ಯಕ್ಕಂತು ನೀರಿನ ಅಭಾವದಿಂದ ಪಾರಾಗಲಿದ್ದಾರೆ.

EndFragment