ಕಲಾದಗಿ: ಮೂವತ್ತೈದು ಸದಸ್ಯರನ್ನು ಒಳಗೊಳ್ಳುವ ಮೂಲಕ ಜಿಲ್ಲೆಯಲ್ಲೇ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಯ ಸ್ಥಳೀಯ ಗ್ರಾಪಂನ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಖಾತುನಬಿ ರೋಣ, ಉಪಾಧ್ಯಕ್ಷರಾಗಿ ಫಕೀರಪ್ಪ ಮಾದರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಅವಿರೋಧವಾಗಿ ಆಯ್ಕೆ ಎಂದು ಚುನಾವಣಾಧಿಕಾರಿ ಆನಂದ ಕುಲಕರ್ಣಿ ಘೋಷಿಸಿದರು.
ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರಾದ ಎಂ.ಬಿ. ಸೌದಾಗರ, ಹಸನ್ಮಹದ ರೋಣ, ಬಂದೇನವಾಜ್ ಸೌದಾಗರ, ರಾಜೇಸಾಬ ಗೋಠೆ, ಶ್ಯಾಮ ಕಾಳೆ, ಎಂ.ಎ. ತೇಲಿ ಇತರರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.