ಕಲಾದಗಿ: ಸಮೀಪದ ಗದ್ದನಕೇರಿ ಕ್ರಾಸ್‌ನಲ್ಲಿರುವ ವೆಂಕಟೇಶ್ವರ ಸೂಪರ್ ಮಾರ್ಕೆಟ್ ಹಾಗೂ ಇನ್ನಷ್ಟು ಕಡೆ ಬುಧವಾರ ನಸುಕಿನ ಜಾವ ನಡೆದಿವೆ ಎನ್ನಲಾದ ಸರಣಿ ಕಳ್ಳತನಗಳು ಅಂಗಡಿಕಾರರ ಆತಂಕ ಹೆಚ್ಚಿಸಿವೆ.
ಅಕ್ಕಿಮರಡಿ ಕಾಂಪ್ಲೆಕ್ಸ್‌ನಲ್ಲಿರುವ ವೆಂಕಟೇಶ ಸಾಲಾಪುರ ಎಂಬುವವರ ವೆಂಕಟೇಶ್ವರ ಸೂಪರ್ ಮಾರ್ಕೆಟ್‌ನ ಶಟರ್ಸ್ ಕೀಲಿ ಕತ್ತರಿಸಿ ನಸುಕಿನ ಜಾವ 2.10 ಗಂಟೆ ವೇಳೆಗೆ ಒಳಗೆ ನುಗ್ಗಿರುವ ಕಳ್ಳನೊಬ್ಬ 16700 ರೂ. ಹಣ ಎಗರಿಸಿದ್ದಾನೆ.
ಒಳಹೋಗುವ ಮುನ್ನ ಅಂಗಡಿ ಮುಂದಿದ್ದ ಸಿಸಿ ಕ್ಯಾಮರಾವನ್ನು ತಾನು ಕಾಣದಂತೆ ಬೇರೆಡೆಗೆ ಕಳ್ಳ ತಿರುಗಿಸಿದ್ದಾನೆ. ಆದರೂ ಅಂಗಡಿ ಒಳಗಿರುವ ಸಿಸಿ ಕ್ಯಾಮರಾದಲ್ಲಿ ಆತನ ಕರಾಮತ್ತು ಸಂಪೂರ್ಣವಾಗಿ ಸೆರೆಯಾಗಿದೆ.
ವೆಂಕಟೇಶ್ವರ ಸೂಪರ್ ಮಾರ್ಕೆಟ್ ಕಳ್ಳತನಕ್ಕೆ ಸಂಬಂಧಿಸಿ ಅದರ ಮಾಲೀಕರು ನೀಡಿರುವ ದೂರಿನನ್ವಯ ಬುಧವಾರ ರಾತ್ರಿ 9 ಗಂಟೆ ವೇಳೆಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನಿತರ ಕಡೆ ನಡೆದಿವೆ ಎನ್ನಲಾದ ಕಳ್ಳತನಗಳ ಬಗ್ಗೆ ಯಾವುದೇ ದೂರುಗಳು ದಾಖಲಾಗಿಲ್ಲ.
EndFragment