ವಿಜಯವಾಣಿ ಸುದ್ದಿಜಾಲ ಗದಗ
ಅಸಂಖ್ಯ ಆಕರ್ಷಣೆಗಳಿಂದ ಆವೃತ್ತವಾಗಿರುವ ಈ ಆಧುನಿಕೋತ್ತರ ಕಾಲಟ್ಟದಲ್ಲಿ ಅವುಗಳಿಗೆ ಮಾರುಹೋಗದೇ ವಿಮರ್ಶೆಯ ಮುಖೇನ ಸತ್ಯಾನೇಶ್ವಣೆ ಮಾಡುವುದು ಅಗತ್ಯವಾಗಿದೆ ಎಂದು ನಟ, ಚಿಂತಕ ಕೆ. ಸುಚೇಂದ್ರ ಪ್ರಸಾದ್ ಹೇಳಿದರು.
ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ಕಲಾಚೇತನ ಆಕಾಡೆಮಿಯ 26 ನೇ ವಾಷಿರ್ಕೋತ್ಸವದ ಅಂಗವಾಗಿ ರವಿವಾರ ಹಮ್ಮಿಕೊಂಡಿದ್ದ "ನಾದ ಬೋಧ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಿಥ್ಯೆ ಮತ್ತು ಮಂಜುಗಳಿಂದ ನಮ್ಮ ಕಣ್ಣುಗಳು ಕುಡುರಾಗಿವೆ. ಯುವ ಜನಾಂಗಕ್ಕೆ ನಮ್ಮತನ, ಸಂಸತಿ ಪರಂಪರೆಗಳ ಅರಿವೇ ಇಲ್ಲವಾಗಿದೆ. ಭವಿಷ್ಯದ ತಲೆಮಾರಿಗೆ ಏನನ್ನು ನಾವು ದಾಟಿಸಬೇಕು ಎಂಬುದೇ ಗೋಂದಲವಾಗಿದೆ. ಅಸಡ್ಡೆ, ಅನಾದರ, ಅಗೌರವದಿಂದಲೇ ಎಲ್ಲವನ್ನೂ ನೋಡುವ ಸ್ಥಿತಿಗೆ ಯುವಕರು ತಲುಪಿದ್ದಾರೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಮುಂದಿನ ತಲೆಮಾರಿನ ಆಯ್ಕೆಗಳನ್ನು ಉತ್ತಮಪಡಿಸುವಂಥ ಕಾರ್ಯಕ್ರಮ ಹಮ್ಮಿಕೊಂಡಿರುವ ಕಲಾಚೇತನದ ಶ್ರಮ ನಿಜಕ್ಕೂ ಶ್ಲಾನೀಯ ಎಂದರು.
ಉಸಿರು ೌಂಡೇಶನ್ ಅಧ್ಯ ಶರಣ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ನಲ್ಲಿ ಉಲ್ಲೇಖಿಸಿದ ನಮ್ಮ ಗದುಗಿನ ಡಾ.ಕಾವೆಂಶ್ರೀ ಅವರು ಕಲಾಚೇತನ ಸಂಸ್ಥೆ ಮೂಲಕ ನಗರದಲ್ಲಿ ಸಂಸತಿಯನ್ನು ಉಳಿಸುವ ಪ್ರಯತ್ನಿ ಮಾಡುತ್ತಿರುವರಲ್ಲಿ ಒಬ್ಬರಾಗಿದ್ದಾರೆ. ಹೋಟೆಲ್ ಕಾಮಿರ್ಕರಾಗಿ, ನಂತರ ಮಾಲೀಕರಾಗಿ ಕಲಾಚೇತನದಂಥ ವೇದಿಕೆಯನ್ನು ಕಟ್ಟಿಬೆಳೆಸಿದ ಅವರ ಕಲಾಪ್ರೀತಿ ಅನನ್ಯವಾಗಿದೆ ಎಂದರು.
ಕೃಷಿ ಪಂಡಿತ ಮಧುಕೇಶ್ವರ ಹೆಗಡೆ ಮಾತನಾಡಿ, ಗದುಗಿನ ಬಂದು ನೆಲೆಗೊಂಡು ಇಲ್ಲಿನ ಸ್ಥಳಿಯರೇ ಆಗಿರುವ ಕಾವೆಂಶ್ರೀ ಕಲಾಚೇತನ ಸಂಸ್ಥೆಯನ್ನು ಸತತ 25 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದ್ದು ಹೆಮ್ಮೆಯ ವಿಷಯ, ಬದುಕಿನಲ್ಲಿ ಎಲ್ಲವೂ ಶೂನ್ಯವಾದ ಕಷ್ಟದ ಕಾಲದಲ್ಲಿ ನಾನು ಆರಂಭಿಸಿದ ಜೇನು ಕೃಷಿ ನನ್ನ ಕೈ ಹಿಡಿದು ಈಗ ಯಶಸ್ವಿ ಉದ್ಯಮಿಯಾಗಿದ್ದೇನೆ. ಶ್ರಮ ಶ್ರದ್ಧೆ ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂದರು.
ಕಲಾಚೇತನದ ಸಂಸ್ಥಾಪಕ ಡಾ. ಕಾವೆಂಶ್ರೀ ಪ್ರಾಸ್ತಾವಿಕ ಮಾತನಾಡಿದರು. ಶಿರಸಿಯ ಜೇನು ಕೃಷಿ ಪಂಡಿತ ಮಧುಕೇಶ್ವರ ಹೆಗಡೆ ಹಾಗೂ ಖ್ಯಾತ ಸಿತಾರ್ ವಾದಕ ಉಸ್ತಾದ್ ಮೊಹಸಿನ್ಖಾನ್ ಇವರಿಗೆ ಕಲಾಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಂದ್ರಶೇಖರ ವಸ್ತ್ರದ, ದತ್ತಪ್ರಸನ್ನ ಪಾಟೀಲ ಇತರರು ಇದ್ದರು.