ಜಿಲ್ಲೆ

ಕಲಬುರಗಿ ಕೋಟೆ ಸುಲ್ತಾನರು ನಿರ್ಮಿಸಿಲ್ಲ ವಿಜಯನಗರ ಅರಸರ ಕಾಲದಲ್ಲಿ ಕಟ್ಟಿಸಿದ್ದು

ರಘುನಂದನಜಿ ಪ್ರತಿಪಾದನೆ | ಹಿಂದು ಮಹಾಗಣಪತಿ ಉತ್ಸವದಲ್ಲಿ ಸನಾತನ ಧರ್ಮ ಕುರಿತು ಉಪನ್ಯಾಸ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ ನಗರದಲ್ಲಿರುವ ಐತಿಹಾಸಿಕ ಕೋಟೆಯನ್ನು ನಿರ್ಮಿಸಿದ್ದು ವಿಜಯನಗರ ಸಾಮ್ರಾಜ್ಯದ ಅರಸರು ಎಂದು  ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ್‌ಜಿ ಹೇಳಿದರು. ಅದಕ್ಕೆ  ಪೂರಕವಾಗಿರುವ ಕೆಲ ಸಾಕ್ಷಿಗಳಿವೆ ಎಂದು ಪ್ರತಿಪಾದಿಸಿದರು.
ನಗರದ ಕೋಟೆಯ ಮುಂಭಾಗದಲ್ಲಿ ಹಿಂದು ಜಾಗರಣ ವೇದಿಕೆಯಿಂದ ಪ್ರತಿಷ್ಠಾಪಿಸಿರುವ  ಹಿಂದು ಮಹಾಗಣಪತಿಯ ಸಮಿತಿ ವತಿಯಿಂದ ಆಯೋಜಿಸಿದ್ದ  ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸನಾತನ ಧರ್ಮದ ಕುರಿತು ಗುರುವಾರ ರಾತ್ರಿ ವಿಶೇಷ ಉಪನ್ಯಾಸ ನೀಡಿ. ಆದರೆ, ಇದುವರೆಗೂ ಕೋಟೆ ನಿರ್ಮಿಸಿದ್ದಾರೆ ಎಂಬ ಹೆಸರುಗಳನ್ನು ಹೇಳುವ ರಾಜರು ಕೋಟೆಗಳನ್ನು, ಐತಿಹಾಸಿಕ ಸ್ಥಳಗಳಲ್ಲಿ ನಿರ್ಮಿಸುವ ಕೆಲಸ ಮಾಡಿಲ್ಲ. ಬದಲಿಗೆ ಅವನ್ನು ಒಡೆದು ಹಾಕುವ ಕೆಲಸ ಮಾಡಿದ್ದಾರೆ ಅಷ್ಟೆ ಎಂದರು.
ವಿಜಯನಗರ ಅರಸರಾಗಿದದ್ದ ಪ್ರೌಢ ದೇವರಾಯರ ಕಾಲದಲ್ಲಿ ಕಲಬುರಗಿ ಕೋಟೆಯನ್ನು  ನಿರ್ಮಾಣಗೊಂಡಿದೆ. ಅಲ್ಲಿ ಹಿಂದು ದೇವಾಲಯ ಇರುವುದು ಎಲ್ಲರಿಗೂ ಗೊತ್ತಿದೆ. ಬಹುಮನಿ ಸುಲ್ತಾನರು, ಬರಿದ್ ಶಾಹಿಗಳು, ಕುತುಬುದ್ದೀನ್ ನಿರ್ಮಿಸಿದ್ದಾರೆ ಎಂದು ಹೇಳುವುದೆಲ್ಲ ಸುಳ್ಳು. ೧೪ನೇ ಶತಮಾನದಲ್ಲಿ ಪ್ರೌಢ ದೇವರಾಯರ ಕಾಲದಲ್ಲಿ ಕೋಟೆ ನಿರ್ಮಾಣಗೊಂಡಿದೆ. ಹೀಗಾಗಿ ವಿಜಯನಗರ ಅರಸರು, ಶಿವಾಜಿ ಮಹಾರಾಜ ಮೊದಲಾದವರನ್ನು ಸ್ಮರಿಸಬೇಕು ಎಂದು ರಘುನಂದನ ಹೇಳಿದರು.
ಜಾತಿ, ವೃತ್ತಿಯಲ್ಲಿ  ಬೇರೆಯಾದರೂ ನಮ್ಮೆಲ್ಲರದ್ದು  ಒಂದೇ ಹಿಂದು ಧರ್ಮ.  ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಧರ್ಮ ಅಂದರೆ ಕೇವಲ ಪೂಜೆಗೆ ಸಂಬAಧಿಸಿದ್ದು ಅಲ್ಲ. ನಮ್ಮ ಜೀವನ ಭಾಗವಾಗಿದೆ. . ಧರ್ಮ ಅಂದರೆ ನಾವು ನಿಯತ್ತಿನಿಂದ ಪಾಲನೆ ಮಾಡುವುದಾಗಿದೆ. ಎಲ್ಲರಿಗೂ ಅನ್ನ ನೀಡುವುದು. ಹೀಗಾಗಿ ಸನಾತನ ಧರ್ಮದ ಬಗ್ಗೆ ಇಲ್ಲದ್ದನ್ನು  ಮಾತನಾಡಿದರೆ ಸಹಿಸಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಹಿಂದು ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ ಎನ್ನುವವರು ಅರ್ಥಮಾಡಿಕೊಳ್ಳಲಿ ಶಿವನೇ ತಂದೆ ಎಂದು ತಿರುಗೇಟು ನೀಡಿದರು. ಹಿಂದು ಧರ್ಮ ಎಂದಿಗೂ ಇರುತ್ತದೆ. ಯಾರಿಂದಲೂ ಏನು ಮಾಡಲು ಆಗಲ್ಲ. ಸನಾತನಕ್ಕೆ ಏನಾದರೂ ಮಾಡುತ್ತಿನಿ ಅನ್ನುವವರಿಗೆ ಬುದ್ದಿ ಇಲ್ಲ. ವಿಶ್ವಗುರು ಬಸವಣ್ಣ ಹೇಳಿದಂತೆ ನಾವೆಲ್ಲರು ಒಂದೇ ಎಂದರು.
ಪಾಕಿಸ್ತಾನಿಗಳಿದ್ದು ಬಾಂಬ್ ಹಾಕುವ ಸಂಸ್ಕೃತಿಯಾಗಿದೆ.  ಗುಳ್ಳೆನರಿ ಬುದ್ದಿ ಹೊಂದಿವವರು ಮಾಡುವುದೇ ಅದನ್ನೇ ಹೊರತು ಬೇರೆನು ಅಲ್ಲ. ಲವ್ ಜಿಹಾದ್ ಮುಗಿಸಿ ಹಾಕಬೇಕಾಗಿದೆ.  ಜಿಹಾದಿಗಳ ವಿರುದ್ಧ ಹೋರಾಡಲು ಹುಟ್ಟಿದ್ದು ಆರ್ಯ ಸಮಾಜ. ಸನಾತನ ಧರ್ಮ ಉಳಿಸಲು ಎಲ್ಲರೂ ಸಂಘಟಿತರಾಗಿ ಸಂರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದು ರಘುನಂದನ ಕರೆ ನೀಡಿದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘದಿAದ ಘೋಷ ವಾದ್ಯಗಳೊಂದಿಗೆ  ಗಣೇಶ ವಂದನೆ ಕಾರ್ಯಕ್ರಮ ನಡೆಯಿತು. ಹಿಂದೂ ಜಾಗರಣ ವೇದಿಕೆ ಜಿ¯್ಲÁಧ್ಯP್ಷÀ ನಾಗೇಂದ್ರ ಕಬಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಯರ್ ವಿಶಾಲ್ ದರ್ಗಿ, ಚಿರಾಯು ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ ದೊಶೆಟ್ಟಿ, ಪ್ರಮುಖರಾದ  ಸುರೇಶ ಟೆಂಗಳಿ ಮೊದಲಾದವರಿದ್ದರು. ನಗರದ ವಿವಿಧ ಕಡೆಗಳಿಂದ ಆಗಮಿಸಿದ್ದ ಸಹಸ್ರಾರು ಹಿಂದುಗಳು. ಅಭಿಮಾನಿಗಳು ಭಾಗಿಯಾಗಿದ್ದರು.