ಲಿಂಗಸುಗೂರು ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ನೂತನ ನ್ಯಾಯಾಲಯ ಕಟ್ಟಡ ಸಂಕೀರಣವನ್ನು ಕುಲಬುರ್ಗಿ ವಿಭಾಗೀಯ ಪೀಠದ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ರವಿ ವಿ.ಹೊಸಮನಿ ವೀಕ್ಷಣೆ ಮಾಡಿದರು. ಜಿಲ್ಲಾ ಸತ್ರ ನ್ಯಾಯಾಧೀಶ ಮಾರುತಿ ಬಗಾಡೆ, ಸ್ಥಳೀಯ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಚಂದ್ರಶೇಖರ್ ದಿಡ್ಡಿ, ಪ್ರಥಮ ಸಿವಿಲ್ ನ್ಯಾಯಾಧೀಶ ವಿನಾಯಕ ಮಾಯಣ್ಣನವರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಿವಕುಮಾರ ದೇಶಮುಖ್, ವಕೀಲರ ಸಂಘದ ಅಧ್ಯಕ್ಷ ಆಶಿಕ್ ಅಹ್ಮದ್ ಇದ್ದರು. 
ಜಿಲ್ಲೆ

ನ್ಯಾಯಾಲಯ ಕಟ್ಟಡ ಅವಧಿಯೊಳಗಡೆ ಪೂರ್ಣಗೊಳಿಸಿ

ಲಿಂಗಸುಗೂರು: ಪಟ್ಟಣದ ಸಾರಿಗೆ ಡಿಪೋ ಮುಂಭಾಗ ನೂತನವಾಗಿ ನಿರ್ಮಿಸುತ್ತಿರುವ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಯನ್ನು ಕಲಬುರ್ಗಿ ವಿಭಾಗೀಯ ಪೀಠದ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ರವಿ ವಿ.ಹೊಸಮನಿ ಭಾನುವಾರ ವೀಕ್ಷಿಸಿದರು.

ಕಾಮಗಾರಿ ನೀಲನಕ್ಷೆ ವೀಕ್ಷಣೆ

ನೂತನ ಕಟ್ಟಡದಲ್ಲಿ ಕೋರ್ಟ್ ಹಾಲ್‌ಗಳು, ನ್ಯಾಯಾಧೀಶ ವಸತಿ ಗೃಹ, ವಕೀಲರ ಸಂಘದ ಸಭಾಂಗಣ, ಕಚೇರಿ ಸೇರಿ ಇತರೆ ಕಾಮಗಾರಿಗಳ ನೀಲನಕ್ಷೆ ವೀಕ್ಷಿಸಿದ ಬಳಿಕ ಪಿಡಬ್ಲುೃಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪಟ್ಟಣದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯದ ಕಾರ್ಯಕಲಾಪ ನಡೆಸಲು ಸ್ಥಳಾವಕಾಶ ದೊರೆಯುವುದೇ ಎಂಬುದನ್ನು ಚರ್ಚಿಸಿದರು.

ಎರಡು ಅಂತಸ್ತುಗಳನ್ನು ನಾಲ್ಕು ಕೋರ್ಟ್ ಹಾಲ್‌ಗಳು 15.80 ಕೋಟಿ ವೆಚ್ಚದಲ್ಲಿ , 3 ಕೋಟಿ ವೆಚ್ಚದಲ್ಲಿ ವಕೀಲರ ಬಾರ್ ಸಂಘ, 2 ಕೋಟಿ ವೆಚ್ಚದಲ್ಲಿ ನ್ಯಾಯಾಧೀಶರ ನಾಲ್ಕು ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪಿಡಬ್ಲುೃಡಿ ಎಇಇ ಗೋಪಾಲರಡ್ಡಿ ಮಾಹಿತಿ ನೀಡಿದರು. ಕಕ್ಷಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೀಘ್ರ ಗುಣಮಟ್ಟದ ಕಟ್ಟಡ ಕಾಮಗಾರಿ ನಿರ್ಮಿಸಬೇಕು. ಅಲ್ಲದೆ ಸಾರ್ವಜನಿಕ ಸೇವೆಗೆ ಅನುಕೂಲ ಕಲ್ಪಿಸಬೇಕೆಂದು ನ್ಯಾಯಾಧೀಶ ರವಿ ವಿ.ಹೊಸಮನಿ ಸೂಚಿಸಿದರು.

ಜೆಇ ಲಕ್ಷ್ಮೀಕಾಂತ ಗುಂಟಿ, ಸಂದೀಪ ಯಾದವ್, ವಕೀಲರಾದ ಎ.ನಾಗಪ್ಪ, ನಾಗರಾಜ ಗಸ್ತಿ, ಎಚ್.ಮುದುಕಪ್ಪ, ಕುಪ್ಪಣ್ಣ ಮಾಣಿಕ್, ಮಹಾಲಿಂಗಪ್ಪ, ಸೂರ್ಯಚಂದ್ರ, ಕುಪ್ಪಣ್ಣ ಕೋಠಾ, ಪ್ರಭುಗೌಡ, ಪ್ರಲ್ಹಾದ್ ದಿಗ್ಗಾವಿ, ಪರಶುರಾಮ, ನಂದೀಶ, ವಿಶ್ವನಾಥ, ಹಾಜಿಬಾಬು ಇತಇತರರು ಇದ್ದರು.