ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ೫ ಸಾವಿರ ಮೀ ನಡಿಗೆ ಸ್ಪರ್ಧೆಯಲ್ಲಿ ಸೇಡಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಂದ್ರಕಾಂತ , ಭಗವಂತ ಪ್ರಥಮ ಸ್ಥಾನ ಗಳಿಸಿದ್ದು, ೧೦೦ ಮೀಟರ್ ಓಟದಲ್ಲಿ ಕಲಬುರಗಿ ಎಂಪಿಎಚ್‌ಎಸ್ ಕಾಲೇಜಿನ ಎಂ.ಡಿ.ಫಾರೂಕ್ ಮೊದಲ ಸ್ಥಾನ ಗಳಿಸಿದ್ದಾರೆ.
ನಡಿಗೆಯಲ್ಲಿ ಸೇಡಂ ಸರ್ಕಾರಿ ಪಿಯು ಕಾಲೇಜಿನ ಸೂರ್ಯಕಾಂತ ಭಗವಂತ ದ್ವಿತೀಯ ಮತ್ತು ಕಲಬುರಗಿ ಸ್ಟೇಷನ್ ಬಜಾರ್‌ನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪವನಕುಮಾರ್ ಶ್ರೀಮಂತ ತೃತೀಯ ಸ್ಥಾನ ಗಳಿಸಿದ್ದಾನೆ. ೧೦೦ ಮೀಟರ್ ಓಟದಲ್ಲಿ ಸುದೀಪ ಡಿ ದ್ವಿತೀಯ ಮತ್ತು ವೆಂಕಟೇಶ ಲಕ್ಷö್ಮಣ ತೃತೀಯ ಸ್ಥಾನ ಪಡೆದಿದ್ದಾನೆ.
ಬಾಲಕರ ವಿಭಾಗ
೨೦೦ ಮೀಟರ್ ಓಟದಲ್ಲಿ ಭರತ್ ದೀಪಕ್ ಪ್ರಥಮ, ಸಚಿನ್ ಹೀರಾನಾಯಕ ದ್ವಿತೀಯ ಮತ್ತು ವೆಂಕಟೇಶ ಲಕ್ಷö್ಮಣ ತೃತೀಯ ಸ್ಥಾನ, ೪೦೦ ಮೀಟರ್ ಓಟದಲ್ಲಿ ವಿಜಯ ಪ್ರಥಮ, ನಿರಗುಂಡ ದ್ವಿತೀಯ, ಸಮವಿನಯ ಪೂಜಾರಿ ತೃತೀಯ ಸ್ಥಾನ, ೮೦೦ ಮೀಟರ್ ಓಟದಲ್ಲಿ ಮೊಹ್ಮದ್ ಚಾಂದಸಾಬ್ ಪ್ರಥಮ, ಸೂರ್ಯಕಾಂತ ಭಗವಂತ ದ್ವಿತೀಯ, ವಿಶಾಲ ರವೀಂದ್ರ ತೃತೀಯ, ೧೫೦೦ ಮೀ. ಓಟದಲ್ಲಿ ಸಂತೋಷ ಪ್ರಥಮ, ಯೋಗೇಶ ದ್ವಿತೀಯ ಮತ್ತು ವೆಂಕಟರಾವ್ ತೃತೀಯ ಸ್ಥಾನ ಗಳಿಸಿದ್ದಾನೆ.
೩೦೦೦ ಮೀ. ಓಟದಲ್ಲಿ ಸುಭಾಷ ಸಿದ್ದರಾಮ ಪ್ರಥಮ, ಸೂರ್ಯಕಾಂತ ಭಗವಂತ ದ್ವಿತೀಯ, ಕಿರಣ್ ಸೋಮಶೇಖರ್ ತೃತೀಯ, ೫೦೦೦ ಮೀ.ಓಟದಲ್ಲಿ ಯೋಗೇಶ ಸಿದ್ದರಾಮ ಪ್ರಥಮ, ಬಸವರಾಜ ರಾಮು ದ್ವಿತೀಯ, ಅಮೀನ್ ಗೋಪಾಲ್ ತೃತೀಯ ಸ್ಥಾನ ಗಳಿಸಿದ್ದಾನೆ. ಗುಂಡು ಎಸೆತದಲ್ಲಿ ಕಿಶೋರ ರಾಜಶೇಖರ ಪ್ರಥಮ, ಇಸ್ಮಾಯಿಲ್ ಚಾಂದಪಾಶಾ ದ್ವಿತೀಯ ಮತ್ತು ರೇಹಾನ್ ಪಟೇಲ್ ತೃತೀಯ ಸ್ಥಾನ ಗಳಿಸಿದ್ದಾನೆ.
ಚಕ್ರ ಎಸೆತದಲ್ಲಿ ಇಸ್ಮಾಯಿಲ್ ಚಾಂದಪಾಶಾ ಪ್ರಥಮ, ಲಕ್ಷö್ಮಣ ತಿಪ್ಪಣ್ಣ ದ್ವಿತೀಯ, ಕರಣ ಶಾಮರಾವ್ ರಾಠೋಡ ತೃತೀಯ ಸ್ಥಾನ ಗಳಿಸಿದ್ದಾನೆ. ಭಲ್ಲೆ ಎಸೆತದಲ್ಲಿ ಇಸ್ಮಾಯಿಲ್ ಚಾಂದಪಾಶಾ ಪ್ರಥಮ, ವೆಂಕಟರಾವ್ ದ್ವಿತೀಯ, ವಿಜಯ ಅಂಬು ತೃತೀಯ, ಹ್ಯಾಮರ್ ಎಸೆತದಲ್ಲಿ ಸುಫಿಯಾನ್ ಪ್ರಥಮ, ಇಸ್ಮಾಯಿಲ್ ದ್ವಿತೀಯ, ತಬರೇಜ್ ತೃತೀಯ ಸ್ಥಾನ ಗಳಿಸಿದ್ದಾನೆ.
ಬಾಲಕಿಯರ ವಿಭಾಗ
೧೦೦ ಮೀ. ಓಟದಲ್ಲಿ ನಂದಿನಿ ಅಶೋಕ ಪ್ರಥಮ, ಪ್ರತೀಕ್ಷಾ ಚಂದ್ರಕಾಂತ ದ್ವಿತೀಯ, ಅನುಜಾ ಸಿ.ಕೆ ತೃತೀಯ, ೨೦೦ ಮೀ.ಓಟದಲ್ಲಿ ಲಿಕಿತಾ ಆನಂದ್ ಪ್ರಥಮ, ಶಶಿಕಲಾ ಸಿದ್ದರಾಮ ದ್ವಿತೀಯ, ಪಾಯಲ್ ವಾಸುದೇವ ತೃತೀಯ, ೮೦೦ ಮೀ.ನಲ್ಲಿ ಮಹಾದೇವಿ ಅಮೃತ ಪ್ರಥಮ, ಭಾಗ್ಯಶ್ರೀ ದೇವಲಾ ದ್ವಿತೀಯ, ಕಾವೇರಿ ಮೋಹನ ತೃತೀಯ, ೧೫೦೦ ಮೀ. ಓಟದಲ್ಲಿ ಪ್ರಾಜಾತ ನಾಗರಾಜ ಪ್ರಥಮ, ಮಹೇಶ್ವರಿ ಮೋಗಲ ದ್ವಿತೀಯ, ಸುಷ್ಮಾ ಚಂದ್ರಶೇಖರ ತೃತೀಯ ಸ್ಥಾನ.
೩೦೦೦ ಮೀ.ಓಟದಲ್ಲಿ ಮಂಜುಳಾ ಎಚ್ ಪ್ರಥಮ, ಸುಷ್ಮಾ ಚಂದ್ರಶೇಖರ ದ್ವಿತೀಯ, ಲಕ್ಷಿö್ಮÃ ಆಶಪ್ಪ ತೃತೀಯ, ೫೦೦೦ ಮೀ. ಓಟದಲ್ಲಿ ರಾಚಮ್ಮ ಬಸವರಾಜ ಪ್ರಥಮ, ಅಶ್ವಿನಿ ಕಾಶೀನಾಥ ದ್ವಿತೀಯ, ಭಾಗ್ಯಶ್ರೀ ರಾಜೂಗೌಡ ತೃತೀಯ, ಗುಂಡು ಎಸೆತದಲ್ಲಿ ಶಾಲಿಬಾಯಿ ಎಚ್.ಎನ್ ಪ್ರಥಮ, ಮೀನಾಕ್ಷಿ ರಮೇಶ ದ್ವಿತೀಯ, ನಂದಿನಿ ರಾಠೋಡ ತೃತೀಯ, ಚಕ್ರ ಎಸೆತದಲ್ಲಿ ದಾನೇಶ್ವರಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಭಲ್ಲೆ ಎಸೆತದಲ್ಲಿ ಮುನಿರಾಬೇಗಂ ರುಕ್ಮೋದ್ದೀನ್ ಪ್ರಥಮ, ವೈಷ್ಣವಿ ಲಿಂಗರಾಜ ದ್ವಿತೀಯ, ವೈಷ್ನವಿ ಮಲ್ಲಿಕಾರ್ಜುನ ತೃತೀಯ ಸ್ಥಾನ ಗಳಿಸಿದ್ದಾಳೆ.