ಕಲಬುರಗಿ : ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಲಬುರಗಿ ನಗರ ಮತ್ತು ಜಿಲ್ಲೆಯಲ್ಲಿ ಬಿರುಸಿನಿಂದ ಮತದಾನ ನಡೆದಿದೆ.ಇಂದು ಸಂಜೆ ವೇಳೆಗೆ ಶೇ.50 ರಷ್ಟು ಮತದಾನ ಆಗಿದೆ.
ಪದವೀಧರ ಮತದಾರರು ಹುರುಪಿನಿಂದ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.
ಶಹಾಬಾದ ಮತಗಟ್ಟೆ ಸಂ.16ರಲ್ಲಿ ಮತದಾರರಿಂದ ಮತದಾನ ಜಿನುಗುತ್ತಿರುವ ಮಳೆ ನಡುವೆ ಕೊಡೆ ಹಿಡಿದುಕೊಂಡು ಬಂದು ಮತ ಚಲಾಯಿಸಿದರು.
ಕಲಬುರಗಿ ನಗರದ ತಹಶೀಲ್ದಾರ ಕಚೇರಿ ಮತಗಟ್ಟೆ ಸಂ. 32/ 32ಎ ನಲ್ಲಿ ಒಟ್ಟು 1,810 ಮತದಾರರ ಪೈಕಿ 12 ಗಂಟೆಗೆ ಹೊತ್ತಿಗೆ 278 ಜನ ಮತ ಚಲಾಯಿಸಿದ್ದಾರೆ.
ಈ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತ ನೀಡಲು ಅವಕಾಶ ಹಿನ್ನೆಲೆಯಲ್ಲಿ ಮತದಾನದ ಸರಿಯಾದ ಕ್ರಮ, ಮತ ಮೌಲ್ಯ ಮತ್ತು ಅಪಮೌಲ್ಯದ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸುವ ಪೋಸ್ಟರ್ ಮತಗಟ್ಟೆ ಹೊರಗೆ ಅಳವಡಿಸಲಾಗಿತ್ತು.