ಕಲಬುರಗಿ: ಕೆಪಿಎಸ್ಸಿ ನೇಮಕಾತಿ ಪೂರ್ವಭಾವಿ ಪರೀೆಯೂ ನಗರದ 29 ಪರೀಾ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್, ತೀವ್ರ ನಿಗಾವಣೆ ಮಧ್ಯೆ ಭಾನುವಾರ ನಡೆದಿದ್ದು, ನಿಗದಿಯಾಗಿದ್ದ 23,490 ಅಭ್ಯರ್ಥಿಗಳ ಪೈಕಿ, 13,647 ಜನ ಹಾಜರಾಗಿದ್ದು, 9,843 ಜನರು ಗೈರಾದರು.
ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ನಡೆದ ಮೊದಲ ಅವಧಿಯಲ್ಲಿ 11,745 ಅಭ್ಯರ್ಥಿಗಳ ಪೈಕಿ 6,849 ಜನ ಹಾಜರಾಗಿದ್ದು, 4,896 ಮಂದಿ ಗೈರಾಗಿದ್ದರು. ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ನಡೆದ ಎರಡನೇ ಅವಧಿಯಲ್ಲಿ 11,745 ಅಭ್ಯರ್ಥಿಗಳ ಪೈಕಿ 6,798 ಮಂದಿ ಹಾಜರಾಗಿದ್ದು, 4,947 ಮಂದಿ ಗೈರಾಗಿದ್ದರು.
ಪರೀಕ್ಷಾ ಕೇಂದ್ರಗಳ ಸುತ್ತ ಬೆಳಗ್ಗೆ 9ರಿಂದ ಸಂಜೆ 5ರವರೆಗೆ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಭ್ಯರ್ಥಿಗಳ ತಪಾಸಣೆಗೆ ಮೆಟಲ್ ಡಿಟೆಕ್ಟರ್ ಹಾಗೂ ಮುಖ ಗುರುತಿಸುವ ತಂತ್ರಜ್ಞಾನ ಬಳಸಲಾಯಿತು. ಪ್ರತಿ ಕೇಂದ್ರದಲ್ಲಿ ಒಂದು ಡಿಎಫ್ಎಂಡಿ ಹಾಗೂ ಎರಡು ಎಚ್ಎಚ್ಎಂಡಿಗಳನ್ನು ಅಳವಡಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವೆಬ್ಕಾಸ್ಟಿಂಗ್ ವೀಕ್ಷಣಾ ಕೇಂದ್ರ ಸ್ಥಾಪಿಸಿ ಎಲ್ಲ ಕೇಂದ್ರಗಳ ಮೇಲೆ ನಿಗಾ ವಹಿಸಲಾಯಿತು. ಪ್ರತಿ ಕೇಂದ್ರದ ಮೇಲ್ವಿಚಾರಣೆಗೆ ಎ ವೃಂದದ ಅಧಿಕಾರಿಯನ್ನು ನೇಮಿಸಲಾಗಿತ್ತು. ಪರೀಕ್ಷೆ ಬಳಿಕ ಒಎಂಆರ್ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಕೇಂದ್ರ ಸ್ಥಾಪಿಸಲಾಗಿತ್ತು.
ಕಲಬುರಗಿಯ 29 ಕೇಂದ್ರಗಳಲ್ಲಿ ಬಿಗಿ ಭದ್ರತೆ, ನಿಗಾದೊಂದಿಗೆ ಕೆಪಿಎಸ್ಸಿ ಪರೀೆ ನಡೆದಿದ್ದು, ಇಡೀ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಟನೆಗಳು ನಡೆದಿಲ್ಲ. ಹಿಂದೆ ವಿವಿಧ ಪರೀೆಗಳಲ್ಲಿ ಅಕ್ರಮ ಪ್ರಕರಣದ 25 ಆರೋಪಿಗಳನ್ನು ಠಾಣೆಗಳಲ್ಲಿ ನಿಗಾದಲ್ಲಿ ಇಡಲಾಗಿತ್ತು.
> ಡಾ.ಶರಣಪ್ಪ ಎಸ್.ಡಿ.,
ನಗರ ಪೊಲೀಸ್ ಆಯುಕ್ತ
ಅಭ್ಯರ್ಥಿಗಳಲ್ಲೇ ಗೊಂದಲ ತಪ್ಪಿದ ಪರೀೆಕ್ಷೆ
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರವೊಂದರಲ್ಲಿ ಯುವತಿಯೊಬ್ಬರು ಕೆಎಎಸ್ ಪರೀಕ್ಷೆಯ ಹಾಲ್ ಟಿಕೆಟ್ ಬದಲಿಗೆ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯ ಪ್ರವೇಶ ಪತ್ರ ತಂದಿದ್ದರಿಂದ ಪರೀಕ್ಷೆ ಬರೆಯಲಾಗದೆ ವಾಪಸಾದರು. ಮತ್ತೊಬ್ಬ ಅಭ್ಯರ್ಥಿ ಬೇರೆ ಕೇಂದ್ರಕ್ಕೆ ಹೋಗುವುದ ಬಿಟ್ಟು, ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿಗೆ ಆಗಮಿಸಿ, ಪಟ್ಟಿಯಲ್ಲಿ ಹೆಸರು ಹುಡುಕಾಡಿದ್ದರು. ಕೊನೇ ವೇಳೆ ಕೇಂದ್ರದ ಬಗ್ಗೆ ಮಾಹಿತಿ ದೊರಕಿದ್ದು, ಸಮಯ ಮೀರಿ ಹೋಗಿತ್ತು. ಮತ್ತೊಬ್ಬ ಅಭ್ಯರ್ಥಿ ನಿಗದಿತ ಸಮಯದ ಬಳಿಕ ಕೇಂದ್ರಕ್ಕೆ ಆಗಮಿಸಿದರೂ ಪರಿಶೀಲನೆ ಬಳಿಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು.
ಬರಿಗಾಲಲ್ಲಿ ಪರೀಕ್ಷೆ ಬರೆದರು
ಅಕ್ರಮಕ್ಕೆ ಅವಕಾಶ ನೀಡದಂತೆ ಅಭ್ಯರ್ಥಿಗಳ ಪ್ರವೇಶಕ್ಕೂ ಮುನ್ನ ಮೂರು ಹಂತಗಳಲ್ಲಿ ತಪಾಸಣೆ ನಡೆಸಲಾಯಿತು. ಶೂ, ಸಾಕ್ಸ್ ಹಾಗೂ ಚಪ್ಪಲಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಕೊಂಡೊಯ್ಯುವುದಕ್ಕೂ ರ್ನಿಬಂಧವಿದ್ದರಿಂದ ಹಲವು ಅಭ್ಯರ್ಥಿಗಳು ಬರಿಗಾಲಿನಲ್ಲೇ ಪರೀಕ್ಷೆ ಬರೆದರು. ಇನ್ನು ಎಂಪಿಎಚ್ಎಸ್ ಶಾಲೆಯ ಕೇಂದ್ರದ ಬಳಿ ಜೀನ್ಸ್ ಪ್ಯಾಂಟ್ ನಿಷೇಧವಿದೆ ಎಂದು ವಾಪಸ್ ಕಳಿಸಿದ್ದಕ್ಕೆ ದೂರ ಊರಿನಿಂದ ಬಂದ ಅಭ್ಯರ್ಥಿಗಳು ಕಣ್ಣೀರಿಟ್ಟರು.