online addiction 
ಕಲಬುರಗಿ

ಆನ್​ಲೈನ್​ ಚಟಕ್ಕೆ ಯುವಕ ಬಲಿ

ಕಲಬುರಗಿ: ವಿಜಯಪುರ ಜಿಲ್ಲೆ ಕಮರ್ಷಿಯಲ್​ ಟ್ಯಾಕ್ಸ್​ ಅಧಿಕಾರಿ ಪುತ್ರನ ಶವ ನೇಣು ಬಿಗಿದ ಸ್ಥಿತಿಯಲ್ಲಿ ನಗರದ ಸೇಡಂ ರಸ್ತೆಯಲ್ಲಿರುವ ಮಾನಸ ಲೇಔಟ್​ನಲ್ಲಿ ಪತ್ತೆಯಾಗಿದೆ.
ಮಾನಸ ಲೇಔಟ್​ ನಿವಾಸಿ ಕೃಷ್ಣ ಪಾಟೀಲ್​(25) ಮನೆಯಲ್ಲೇ ಸೀರೆಯಿಂದ ನೇಣು ಬಿಗಿದುಕೊಂಡವ. ವಿಜಯಪುರ ಜಿಲ್ಲೆಯಲ್ಲಿ ಕಮರ್ಷಿಯಲ್​ ಟ್ಯಾಕ್ಸ್​ ಅಧಿಕಾರಿ ಭಾರತಿ ಅಪ್ಪಾರಾವ ಮಾಲಿಪಾಟೀಲ್​ ಪುತ್ರ ಕೃಷ್ಣ ಇಂಜಿನಿಯರಿಂಗ್​ ಮುಗಿಸಿದ್ದು, ಗೆಟ್​ ಪರೀೆಗೆ ತಯಾರಿ ನಡೆಸುತ್ತಿದ್ದ. ನೌಕರಿಗಾಗಿಯೂ ವಿವಿಧ ಪರೀೆ, ಪ್ರಯತ್ನ ನಡೆಸಿದ್ದ.
ಸಿಂಗಲ್​ ಪೇರೆಂಟ್​ ಆಗಿರುವ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಿದ್ದ ಎನ್ನಲಾಗುತ್ತಿದೆ. ನಿವಾಸಕ್ಕೆ ಪ್ರತಿ ವಾರ ತಾಯಿ ಬಂದು ಹೋಗುತ್ತಿದ್ದರು. ಜೂ.18ರಂದು ದೂರವಾಣಿಯಲ್ಲಿ ಸರಿಯಾಗಿ ಮಾತನಾಡದೆ ಕಾಲ್​ ಕಟ್​ ಮಾಡಿದ್ದ. ಎರಡು ದಿನ ಬಿಟ್ಟು ಮನೆಗೆ ಬಂದಾಗ ಬಾಗಿಲು ಮುಚ್ಚಿತ್ತು. ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದಿದೆ. ಕೊನೆ ಬಾರಿಗೆ ೋನ್​ನಲ್ಲಿ ಮಾತನಾಡಿದ್ದ ವೇಳೆಯೇ ಸಾವಿಗೆ ಶರಣಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈ ಕಟ್ಟಿಕೊಂಡು ಆತ್ಮಹತ್ಯೆ: ಯಾವ ಕಾರಣಕ್ಕೂ ಬದುಕಬಾರದು ಎಂದು ನಿಶ್ಚಯಿಸಿದ್ದ ಕೃಷ್ಣ ಪಾಟೀಲ್​ ಆತ್ಮಹತ್ಯೆಗೆ ಮುನ್ನ ಎರಡು ಕೈಗಳನ್ನು ದೇಹಕ್ಕೆ ಬಿಗಿಯಾಗಿ ಕಟ್ಟಿಕೊಂಡು ಮನೆಯಲ್ಲಿದ್ದ ಜೋಕಾಲಿ ಹಗ್ಗಕ್ಕೆ ನೇಣು ಬಿಗಿದುಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.
ಆನ್​ಲೈನ್​ ಚಟಕ್ಕೆ ದಾಸ: ಮೃತ ಕೃಷ್ಣ ತಾಯಿ ವಿಜಯಪುರ ಜಿಲ್ಲೆಯಲ್ಲಿ ಕಮರ್ಷಿಯಲ್​ ಟ್ಯಾಕ್ಸ್​ ಅಧಿಕಾರಿಯಾಗಿದ್ದು, ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದರು. ಆದರೆ ಕೃಷ್ಣ ಗೆಟ್​ ಪರೀೆ ಬರೆದು ನೌಕರಿಗೆ ಕಾಯುತ್ತಿದ್ದ. ಮೊಬೈಲ್​ ಮತ್ತು ಲ್ಯಾಪ್​ಟಾಪ್​ ಮೂಲಕ ಆನ್​ಲೈನ್​ ಗೇಮ್​ ಚಟಕ್ಕೆ ದಾಸನಾಗಿದ್ದ ಎಂದು ಹೇಳಲಾಗುತ್ತಿದೆ.