- ಕಲಬುರಗಿ ನಗರದಲ್ಲಿ ಘಟನೆ
- ಕಿಟಕಿ ಅಳವಡಿಸುವ ವೇಳೆ ದುರಂತ, ಸ್ಥಳದಲ್ಲೇ ಸಾವು
ಕಲಬುರಗಿ: ಹಳೇ ಕಟ್ಟಡವೊಂದರ ಕಿಟಕಿ ಗ್ರಿಲ್ ಅಳವಡಿಸುತ್ತಿದ್ದ ಕರ‍್ಮಿಕನೊಬ್ಬ ಎತ್ತರದಿಂದ ಬಿದ್ದು ಮೃತಪಟ್ಟ ಟನೆ ನಗರದ ಟಿಪ್ಪು ಚೌಕ್ ಹತ್ತಿರದ ಅಕ್ಬರ್ಬಾಗ್ ಕಾಲನಿಯಲ್ಲಿ ನಡೆದಿದೆ. ಮಿಜಗುರಿ ನಿವಾಸಿ ಮಹಮ್ಮದ ತೌಫಿಕ್ ಅಹಮ್ಮದ್(೨೦) ಮೃತ ಕರ‍್ಮಿಕ. ಗುತ್ತಿಗೆದಾರ ಮಹಮ್ಮದ ಖಾಜಾ ಮೈನೋದ್ದೀನ್ ಮತ್ತು ಮನೆ ಮಾಲೀಕನ ವಿರುದ್ಧ ದೂರು ದಾಖಲಾಗಿದೆ.
ಗುತ್ತಿಗೆದಾರ ಮಹಮ್ಮದ ಖಾಜಾ ಮೈನೋದ್ದೀನ್ ಬಳಿ ಒಂದು ತಿಂಗಳಿನಿಂದ ಮಹಮ್ಮದ ತೌಫಿಕ್ ಅಹಮ್ಮದ್ ಕೆಲಸಕ್ಕೆ ಹೋಗುತ್ತಿದ್ದ. ಮೇ ೧೩ರಂದು ಬೆಳಗ್ಗೆ ಟಿಪ್ಪು ಚೌಕ್ ಹತ್ತಿರದ ಹಳೇ ಮನೆಯೊಂದರ ಕಿಟಕಿಗೆ ಗ್ರಿಲ್ ಅಳವಡಿಸುವ ಕೆಲಸಕ್ಕೆ ತೌಫಿಕ್ ತೆರಳಿದ್ದನು. ಸಂಜೆ ಸ್ಟೂಲ್ ಮೇಲೆ ನಿಂತು ಕಿಟಕಿ ಗ್ರಿಲ್ ಅಳವಡಿಸುತ್ತಿದ್ದ ವೇಳೆ ಕೆಳಗೆ ಬಿದ್ದಿದ್ದಾನೆ.
ಗಂಭೀರ ಗಾಯಗಳಾಗಿದ್ದರು. ಸಹ ಕಾರ್ಮಿಕರು ಖಾಸಗಿ ಆಸ್ಪತ್ರೆಗೆ ಒಯ್ದಿದ್ದು, ಆಸ್ಪತ್ರೆ ತಲುಪುವ ವೇಳೆಗೆ ಕರ‍್ಮಿಕ ತೌಫಿಕ್ ಅಹಮ್ಮದ್ ಮೃತಪಟ್ಟಿದ್ದ. ಕಾರ್ಮಿಕನ ಸಾವಿಗೆ ಗುತ್ತಿಗೆದಾರ ಮಹಮ್ಮದ ಖಾಜಾ ಮೈನೋದ್ದೀನ್ ಮತ್ತು ಮನೆ ಮಾಲೀಕ ಸುರಾ ಪರಿಕರ ಒದಗಿಸದೆ ರ‍್ನಿಲಕ್ಷ$್ಯ ಕಾರಣ ಎಂದು ಮೃತನ ತಂದೆ ದಾದೆ ಪಟೇಲ್ ನೀಡಿದ ದೂರಿನಂತೆ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.