horrific accident 
ಕಲಬುರಗಿ

ಭೀಕರ ಅಪಘಾತಕ್ಕೆ ಮಹಿಳೆ ಸಾವು: ಕಲಬುರಗಿಯಲ್ಲಿ ದುರ್ಘಟನೆ

ಪ್ರಮುಖ ಮುಖ್ಯಾಂಶಗಳು

  • ಲಾರಿ ಕಾರ್​ ಡಿಕ್ಕಿ
  • ಇಬ್ಬರಿಗೆ ಗಂಭೀರ ಗಾಯ
ಕಲಬುರಗಿ: ನಗರದ ಹೈಕೋರ್ಟ್​ ಕ್ರಾಸ್​ ಸಮೀಪ ಅಫಜಲಪುರ ರಸ್ತೆಯಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಲಾರಿ ಮತ್ತು ಕಾರ್​ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಟನೆ ನಡೆದಿದೆ.
ಬೆಂಗಳೂರಿನ ಸುನಿತಾ ಬಿ ಮೃತ ಮಹಿಳೆ. ಕಲಬುರಗಿಯ ಮೃತಳ ಸಂಬಂಧಿ ವಿಮಲಾಬಾಯಿ, ಮೃತಳ ಪತಿ ಬಸವರಾಜ ಗಂಭೀರವಾಗಿ ಗಾಯಗೊಂಡವರು.
ಬೆಂಗಳೂರಿನ ಸುನಿತಾ ಮತ್ತು ಬಸವರಾಜ ದಂಪತಿಯೂ ಬಸವಕಲ್ಯಾಣ ತಾಲೂಕಿನಲ್ಲಿ ಮದುವೆ ಮುಗಿಸಿ, ಕಲಬುರಗಿ ನಗರಕ್ಕೆ ಆಗಮಿಸಿ, ದೇವಲಗಾಣಗಾಪುರ, ತ್ತರಗಿಗೆ ದೇವರ ದರ್ಶನಕ್ಕೆ ಹೋಗಿ ವಾಪಸ್​ ಆಗುವ ವೇಳೆ ಅಪಘಾತ ಸಂಭವಿಸಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡವರನ್ನು ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಟನೆ ಸ್ಥಳಕ್ಕೆ ಡಿಸಿಪಿ ಶಾಲೂ, ಸಂಚಾರಿ ಎಸಿಪಿ ಪ್ರಭು ಡಿ.ಟಿ, ಪಿಐ ಶಕೀಲ ಅಂಗಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸಂಚಾರ ಠಾಣೆ 1ರಲ್ಲಿ ಪ್ರಕರಣ ದಾಖಲಾಗಿದೆ.