pu lectures meet 
ಕಲಬುರಗಿ

ಶಿಕ್ಷಣ, ಆರೋಗ್ಯ ನೀಡದ ಸರ್ಕಾರವೇಕೆ?: ತಿಮ್ಮಯ್ಯ ಫುರ್ಲೆ ಪ್ರಶ್ನೆ

ಪ್ರಮುಖ ಮುಖ್ಯಾಂಶಗಳು

  • ತಿಮ್ಮಯ್ಯ ಪುರ್ಲೆ ಕಿಡಿ
  • ಪದವಿಪೂರ್ವ ಉಪನ್ಯಾಸಕರ ಸಂದಿಂದ ಸಮಾರಂಭ

ಕಲಬುರಗಿ:

ರಾಜ್ಯದಲ್ಲಿ ಕೆಪಿಎಸ್​ ಶಾಲೆ ಸ್ಥಾಪನೆಯಿಂದ ಸಾವಿರಾರು ಸರ್ಕಾರಿ ಶಾಲೆ, ಕಾಲೇಜುಗಳು ಮುಚ್ಚುತ್ತಿವೆ. ಆರೋಗ್ಯ, ಶಿಕ್ಷಣವನ್ನು ಖಾಸಗಿಯವರಿಗೆ ಕೊಡುವುದಾದರೆ ಸರ್ಕಾರಗಳು ಇರುವುದಾದರೂ ಏಕೆ? ಎಂದು ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂದ ಗೌರವಾಧ್ಯಕ್ಷ ತಿಮ್ಮಯ್ಯ ಪುರ್ಲೆ ಕಿಡಿಕಾರಿದರು.

ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ನಗರದ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕರಿಗೆ ಒಂದೊಳ್ಳೆ ಶಾಲೆ, ಕಪ್ಪು ಬೋರ್ಡ್​, ಕಟ್ಟಡ ಕೊಟ್ಟು ಸ್ವಾತಂತ್ರ ನೀಡಿ, ಎಡ, ಬಲ ಪಂಥದಿಂದ ದೂರವಿಟ್ಟರೆ ಇತಿಹಾಸವೇ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ವೋಟ್​ ಾರ್​ ಓಪಿಎಸ್​ ಎಂದು ಮತ ಪಡೆದು, ಅಧಿಕಾರಕ್ಕೆ ಬಂದವರು ಅದನ್ನು ಮರೆತುಬಿಟ್ಟಿದ್ದು, ಸರ್ಕಾರ ಮಾತುಕೊಟ್ಟಂತೆ ನಡೆದುಕೊಳ್ಳುತ್ತಿಲ್ಲ ಎಂದರು.
ವಿಧಾನ ಪರಿಷತ್​ ಸದಸ್ಯ ಶಶೀಲ ನಮೋಶಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ 28 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರಿದ್ದು, ದಣ ಕರ್ನಾಟಕದಲ್ಲಿ 10, 11, 12 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ನಮ್ಮ ಭಾಗದ ಮಕ್ಕಳಿಗೆ ಅನ್ಯಾಯ ಆಗುತ್ತಿದೆ. ಜನಸಂಖ್ಯೆ ಆಧಾರಿತ ಸರ್ಕಾರದಲ್ಲಿ ಶೇ.19 ಹುದ್ದೆ ನಮ್ಮ ಭಾಗದವರಿಗೆ ದೊರೆಯಬೇಕು. 371 ಜೆ ಬಡ್ತಿ, ನೇಮಕ, ಇತರೆ ಜಿಲ್ಲೆಗಳಲ್ಲಿ ಮೀಸಲು, ನಮ್ಮ ಜಿಲ್ಲೆಗಳಲ್ಲಿ ಶೇ.20 ಮೀಸಲು ಸಾಮಾನ್ಯ ಕೆಟೆಗರಿ ಎಂದು ಪರಿಗಣಿಸದೇ ಮೋಸ ಮಾಡಲಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷರಾದ ನರಸಪ್ಪ ರಂಗೋಲಿ ಪ್ರಾಸ್ತಾವಿಕ ಮಾತನಾಡಿದರು. ಸಂದ ಅಧ್ಯಕ್ಷ ನಿಂಗೇಗೌಡ ಎ.ಎಚ್​. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ದೇವನಗೌಡ ಪಾಟೀಲ್​, ಸಂದ ಪ್ರಧಾನ ಕಾರ್ಯದರ್ಶಿ ಡಾ.ಶರಣಗೌಡ ಪಾಟೀಲ್​, ಕಾರ್ಯದರ್ಶಿ ಭೀಮಪ್ಪ ಗೊಲ್ಲರ, ರಾಜ್ಯ ಪರಿಷತ್​ ಸದಸ್ಯ ಧರ್ಮರಾಯ ಜವಳಿ, ಖಜಾಂಚಿ ವೆಂಕಟೇಶ, ಪ್ರಮುಖರಾದ ಪಂಡಿತರಾವ ಪವಾರ, ಅಶೋಕ ಶಾಸ್ತ್ರಿ, ಬಸವರಾಜ ಬಿರಾದಾರ, ಶಿವರಾಜ ಮಾಲಿ ಪಾಟೀಲ್​, ಜೆ.ಮಲ್ಲಪ್ಪ, ಮಲ್ಲಿಕಾರ್ಜುನ ಆನಂದಕರ್​ ಇತರರಿದ್ದರು.
ಕಾರ್ಯಾಧ್ಯಕ್ಷ ಡಾ.ಭಗವಂತರಾಯ ಬಳೂಂಡಗಿ ಸ್ವಾಗತಿಸಿದರು. ವಿದ್ಯಾರ್ಥಿನಿ ಗಾಯತ್ರಿ ಪ್ರಾರ್ಥನಾ ಗೀತೆ ಹಾಡಿದರು.