Water Man 
ಕಲಬುರಗಿ

ನಾಗರ ಪಂಚಮಿ ಹಬ್ಬ ದಿನದಂದು ಹಾವು ಕಡಿದು ವಾಟರ್ ಮ್ಯಾನ್ ಸಾವು

ಹುಲಸೂರು (ಬೀದರ್): ಹುಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೋಲ ದಾಪಕಾ ಗ್ರಾಮದ ವಾಟರ್ ಮ್ಯಾನ್ ಭೀಮ ಮಾಧವರಾವ ಜಾದವ (48) ಸೋಮವಾರ ನಾಗರ ಪಂಚಮಿ ಹಬ್ಬದ ದಿನದಂದು ಗ್ರಾಮದ ಹೋರವಲಯದ ಹಾಲಹಳ್ಳಿ ರಸ್ತೆಯ ಮಹದೇವ ಮಂದಿರ ಹತ್ತಿರದ ನೀರಿನ ಟ್ಯಾಂಕರ್ ಕೆಳಗೆ ನೀರು ಬಂದ್ ಮಾಡಲು ಹೋದಾಗ ಹಾವು ಕಾಲಿಗೆ ಕಡೆದು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಜರುಗಿದೆ.
ಗ್ರಾಮಕ್ಕೆ ಸರಬರಾಜು ಆಗುವ ಬೃಹತ್ ಆಕಾರದ ನೀರಿನ ಟ್ಯಾಂಕರ್ ಕೆಳಗೆ ಹುಲ್ಲು-ಕಂಡಿ ಬೆಳೆದಿದ್ದು, ಕಳೆದ ಎರಡು ತಿಂಗಳಿನಿಂದ ಹುಲ್ಲು ಕಟಾವು ಮಾಡಲು ಸ್ಥಳೀಯ ಗ್ರಾಮ ಪಂಚಾಯಿತಿ ಅವರಿಗೆ ಮನವಿ ಮಾಡಿದ್ದರು ಸಹ ಹಾಗೆ ಇದ್ದದ್ದರಿಂದ ಅದರಲ್ಲಿನ ಹಾವು ಕಡೆದು ಅಮಾಯಕ ವಾಟರ್ ಮ್ಯಾನ್ ಮೃತಪಟ್ಟಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ದೂರಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಹುಲಸೂರು ಠಾಣೆ ಕ್ರೈಂ ವಿಭಾಗದ ಪಿಎಸ್ಐ ಪಂಡಿತ್ ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.