ಚಿಂಚೋಳಿ: ಚಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಚಂದ್ರಂಪಳ್ಳಿ ನಿಸರ್ಗ ಧಾಮವರೆಗೆ ಗುರುವಾರ ವಾಕಥಾನ್ ಹಮ್ಮಿಕೊಳ್ಳಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ತಿಳಿಸಿದ್ದಾರೆ. ಅರಣ್ಯ ಹಾಗೂ ವನ್ಯಜಿವಿ ಸಂರಕ್ಷಣೆ ಮಹತ್ವದ ಕುರಿತು ಅರಿವು ಮೂಡಿಸುವ ಸಲುವಾಗಿ ನಮ್ಮ ಹೆಜ್ಜೆ ವನ್ಯಜಿವಿ ಸಂರಕ್ಷಣೆ ಕಡೆ ಎಂಬ ಸಂದೇಶದೊಂದಿಗೆ ಅಂದು ಬೆಳಗ್ಗೆ 6.30ಕ್ಕೆ ಸುಮಾರು 10 ಕಿಮೀ ವಾಕಥಾನ್ ನಡೆಯಲಿದೆ. ಆಸಕ್ತರು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ (90085 70173) ಹಾಗೂ ಉಪ ವಲಯ ಅರಣ್ಯಾಧಿಕಾರಿ ಸಿದ್ದಾರೂಡ (96860 44408) ಅವರನ್ನು ಸಂಪರ್ಕಿಸಬಹುದು.