ಕಲಬುರಗಿ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಗಲಿಂಗಯ್ಯ ಮಠಪತಿ ಮಾತನಾಡಿದರು. ಪೂಜ್ಯ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಗುರುಬಸವ ಸ್ವಾಮಿಗಳು, ರಾಜು ಲೇಂಗಟಿ, ಪ್ರೊ.ಶಿವರಾಜ ಪಾಟೀಲ್ ಇದ್ದರು. 
ಕಲಬುರಗಿ

ವಿವಿಧ ಧಾರ್ಮಿಕ ಕಾರ್ಯಕ್ರಮ ೧೬ರಿಂದ

ಪ್ರಮುಖ ಮುಖ್ಯಾಂಶಗಳು

  • ಶ್ರೀಶೈಲ ಸಾರಂಗ ಮಠದಲ್ಲಿ ಯುಗಾದಿ ಮಹೋತ್ಸವ
ಕಲಬುರಗಿ: ಆಂಧ್ರಪ್ರದೇಶದ ಶ್ರೀಶೈಲಂನ ಜಗದ್ಗುರು ಸಾರಂಗಧರೇಶ್ವರ ರಾಷ್ಟಿçÃಯ ಸೇವಾ ಪೀಠದಲ್ಲಿ ಯುಗಾದಿ ಮಹೋತ್ಸವ ನಿಮಿತ್ತ ಮಾ.೧೬ರಿಂದ ೧೯ರವರೆಗೆ ಪುರಾಣ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿ¯್ಲÁ ಕಾರ್ಯದರ್ಶಿ ನಾಗಲಿಂಗಯ್ಯ ಮಠಪತಿ, ಪ್ರೊ.ಶಿವರಾಜ ಪಾಟೀಲ ಹೇಳಿದರು.
೧೬ರಂದು ಸಂಜೆ ೬.೩೦ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ, ನೆಲೋಗಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಮ್ಮುಖ ವಹಿಸುವರು. ಕೆಕೆಆರ್‌ಡಿಬಿ ಮಾಜಿ ಅಧ್ಯP್ಷÀ ದತ್ತಾತ್ರೇಯ ಪಾಟೀಲ ರೇವೂರ ಜ್ಯೋತಿ ಬೆಳಗಿಸುವರು. ಕೆಕೆಆರ್‌ಟಿಸಿ ಅಧ್ಯP್ಷÀ ಅರುಣಕುಮಾರ ಪಾಟೀಲ್ ಅಧ್ಯP್ಷÀತೆ ವಹಿಸುವರು. ಲಾಡಮುಗಳಿ ಶ್ರೀ ಅಭಿನವ ಬಸವಲಿಂಗ ಸ್ವಾಮೀಜಿ ಪ್ರವಚನ ನೀಡುವರು ಎಂದರು.
ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯP್ಷÀ ರಾಜು ಲೇಂಗಟಿ ಮಾತನಾಡಿ, ೧೭ರಂದು ಸಂಜೆ ೬.೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸೊನ್ನದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ, ಶಹಾಪುರ ಪ್ರಥಮ ದರ್ಜೆ ಗುತ್ತಿಗೆದಾರ ದೇವಿಂದ್ರಪ್ಪಗೌಡ ಗೌಡಗೇರ ಅಧ್ಯP್ಷÀತೆ ವಹಿಸುವರು. ೧೮ರ ಕಾರ್ಯಕ್ರಮದಲ್ಲಿ ಉದ್ಯಮಿ ಶಿವಕಾಂತ ಮಹಾಜನ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಹೋರಾಟಗಾರ ಲಚ್ಚಪ್ಪ ಜಮಾದಾರ್ ಮುಖ್ಯ ಅತಿಥಿಗಳಾಗಿರುವರು. ೧೯ರಂದು ಬೆಳಗ್ಗೆ ೧೦ಕ್ಕೆ ಜಗದ್ಗುರು ಪರಮಶಿವ ರಾಜದೇಶಿಕೇಂದ್ರ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ, ಶಿವಾಷ್ಟೋತ್ತರ ನಾಮಾವಳಿ, ಮಂಗಳಾರತಿ, ಶ್ರೀಗಳ ಪ್ರವಚನ ಜತೆ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಇರಲಿದೆ ಎಂದು ವಿವರಿಸಿದರು.
ಶ್ರೀ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಗುರುಬಸವ ಸ್ವಾಮೀಜಿ ಇದ್ದರು.