Cattle theives chincholli
- ಐನಾಪೂರ ಗ್ರಾಮದಲ್ಲಿ ಮಧ್ಯರಾತ್ರಿ ಕಳ್ಳರ ಓಡಾಟ ಗ್ರಾಮಸ್ಥರಲ್ಲಿ ಆತಂಕ
ಚಿಂಚೋಳಿ: ತಾಲೂಕಿನ ಐನಾಪೂರ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಇಬ್ಬರು ಜಾನುವಾರು ಕಳ್ಳತನಕ್ಕೆ ರಾತ್ರಿಯ ವೇಳೆ ಗ್ರಾಮದಲ್ಲಿ ಸಂಚರಿಸುವ ವೇಳೆ ಗ್ರಾಮಸ್ಥರು ಗಮನಿಸಿ ವಿಚಾರಿಸುತ್ತಿದ್ದಂತೆ ಒರ್ವ ಓಡಿ ಹೋಗಿದ್ದು, ಇನ್ನೋರ್ವನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ಜರುಗಿದೆ.
ಜಾನುವಾರು ಕಳ್ಳತನಕ್ಕೆ ಯತ್ನಿಸಿರುವ ಕಳ್ಳರು ಮೂಲತಹ ಬೀದರ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬಗದಲ್ ತಾಂಡಾ ನಿವಾಸಿಗಳಾಗಿದ್ದು, ಬಾಬುರಾವ ತಂದೆ ಲಕ್ಷ್ಮಣ ರಾಠೋಡ ಎಂಬಾತನನ್ನು ಗ್ರಾಮಸ್ಥರು ಕೂಡಿ ಹಾಕಿದ್ದು, ಇನ್ನೋರ್ವ ಪೋಮ್ಮ ಚವ್ಹಾಣ ಓಡಿ ಹೋಗಿದ್ದಾನೆ ಎಂದು ಕಳ್ಳತನಕ್ಕೆ ಬಂದ ವ್ಯಕ್ತಿ ಗ್ರಾಮಸ್ಥರಿಗೆ ತಿಳಿಸಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ : ಬೆಳ್ಳಂಬೆಳಗ್ಗೆ ಕಳ್ಳರು ಬಂದಿದ್ದಾರೆ ಎಂಬ ಸುದ್ದಿ ಗ್ರಾಮದಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾವಣೆಗೊಂಡರು.
ತಕ್ಷಣವೇ ಪೋಲಿಸರಿಗೆ ಮಾಹಿತಿ : ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಚಿಂಚೋಳಿ ಪಿಎಸ್ಐ ಗಂಗಮ್ಮ ಅವರು ಆಗಮಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆಸಿದ್ದಾರೆ.
ಐನಾಪೂರದಲ್ಲಿ ಪೋಲಿಸ್ ಠಾಣೆಗೆ ಆಗ್ರಹ: ಚಿಂಚೋಳಿ ತಾಲೂಕಿನಿಂದ 40 ಕಿ. ಮಿ ಅಂತರ ವಿದ್ದು, ಈ ಹಿಂದೆಯು ಹಲವು ಬಾರಿ ಪೋಲಿಸ್ ಠಾಣೆ ಸ್ಥಾಪಿಸುವಂತೆ ಚುನಾಯಿತ ಪ್ರತಿನಿಧಿಗಳಿಗೆ ಮನವಿ ಮಾಡಲಾಗಿದ್ದು, ಕೂಡಲೇ ಸರಕಾರವು ಗಂಭೀರವಾಗಿ ಪರಿಗಣಿಸಿ ನೂತನ ಪೋಲಿಸ್ ಠಾಣೆ ಸ್ಥಾಪನೆಗೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.