ಪುಣ್ಯಸ್ಮರಣೆ ನಿಮಿತ್ತ ಚಿಂಚೋಳಿಯಲ್ಲಿ ಮಾಜಿ ಸಚಿವ ವೈಜನಾಥ ಪಾಟೀಲ್​ ಅವರ ಸ್ಮಾರಕಕ್ಕೆ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಡಾ. ವಿಕ್ರಮ ಪಾಟೀಲ್​, ಗೌತಮ ಪಾಟೀಲ್​, ಡಾ.ಬಸವೇಶ ಪಾಟೀಲ್​, ಉಮೇಶ ಪಾಟೀಲ್​, ಗಜೇಂದ್ರ ಪಾಟೀಲ್​ ಇತರರಿದ್ದರಿ. 
ಕಲಬುರಗಿ

ಹಿಂದುಳಿದ ಪ್ರದೇಶದ ಧ್ವನಿಯಾಗಿದ್ದ ವೈಜನಾಥ ಪಾಟೀಲ್​

ಚಿಂಚೋಳಿ: ವೈಜನಾಥ ಪಾಟೀಲ್​ ಅವರು ಕೇವಲ ನಾಯಕರಾಗಿರದೆ, ಹಿಂದುಳಿದ ಪ್ರದೇಶದ ಧ್ವನಿಯಾಗಿದ್ದರು. ಈ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ ಹಾಗೂ ಮೂಲಸೌಕರ್ಯಗಳಲ್ಲಿ ನ್ಯಾಯ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ಸಂವಿಧಾನದ 371(ಜೆ) ವಿಧಿ ಅನುಷ್ಠಾನಕ್ಕಾಗಿ ತಮ್ಮ ಜೀವನವನ್ನೇ ಧಾರೆ ಎರೆದವರು ಎಂದು ಪ್ರೊ.ಶಾಂತವೀರ ಹೀರಾಪುರ ಬಣ್ಣಿಸಿದರು.

ಪಟ್ಟಣದ ಮಾಜಿ ಸಚಿವ ವೈಜನಾಥ ಪಾಟೀಲ್​ ಅವರ ಸ್ಮಾರಕ ಸ್ಥಳದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 6ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ಪಾಟೀಲ್​ ಅವರು ಸತತ ಹೋರಾಟ ಮತ್ತು ನಿಸ್ವಾರ್ಥ ಸೇವೆಯ ಫಲವಾಗಿ ಇಂದು ಕಲ್ಯಾಣ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಲಭಿಸಿದೆ. ಸರಳತೆ, ನೇರ ನುಡಿ ಹಾಗೂ ಜನಪರ ಕಾಳಜಿಯಿಂದ ಪಾಟೀಲ್​ ಅವರು ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.

ಡಾ.ವಿಕ್ರಮ ಪಾಟೀಲ್​, ಗೌತಮ ಪಾಟೀಲ್​, ಡಾ.ಬಸವೇಶ ಪಾಟೀಲ್​, ಉಮೇಶ ಪಾಟೀಲ್​, ಗಜೇಂದ್ರ ಪಾಟೀಲ್​, ಭಾರತಿ ಪಾಟೀಲ್​, ಆರತಿ ಪಾಟೀಲ್​, ರವಿರಾಜ ಕೊರವಿ, ಚಂದ್ರಶೇಖರ ಹರಸೂರ, ಪ್ರಭುಲಿಂಗ ಲೇವಡಿ, ಅಬ್ದುಲ್​ ಬಾಸೀದ್​, ಕೆ.ಎಂ. ಬಾರಿ, ಸುಭಾಷ ಸೀಳಿನ್​, ಶಂಕರಗೌಡ ಅಲ್ಲಾಪುರ, ಭವಾನಿ ಪಾಟೀಲ್​, ವಿರೂಪಾಪ್ಪ ಯಂಪಳ್ಳಿ, ಮಲ್ಲಿಕಾರ್ಜುನ ಪಾಲಾಮೂರ, ಕುಮಾರ ದೇಸಾಯಿ, ಆನಂದ ತಡಕಲ್​, ಗೋಪಾಲರೆಡ್ಡಿ ಕೊಳ್ಳೂರ, ವಿರೇಶ ಯಂಪಳ್ಳಿ, ರಾಮಶೆಟ್ಟಿ ಪವಾರ್​, ರಾಜು ಪವಾರ್​, ಜಗನ್ನಾಥ ಗುತ್ತೇದಾರ್​, ಅಶೋಕ ಚವ್ಹಾಣ್​, ಗೋಪಾಲ ಜಾಧವ್​, ಸಂತೋಷ ಗುತ್ತೇದಾರ್​, ಸತೀಶ ಇಟಗಿ, ದೊಡ್ಡಪ್ಪಗೌಡ, ಗೌರಿಶಂಕರ ಉಪ್ಪಿನ್​, ಆತೀಶ ಪವಾರ್​, ಎಂ.ಎಸ್​.ನರಿಬೋಳ ಇತರರಿದ್ದರು.