ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಚನ ಸಂಶೋಧನಾ ಪಿತಾಮಹ ಡಾ.ಫ.ಗು.ಹಳಕಟ್ಟಿ ಬದುಕು-ಸಾಧನೆ ಕುರಿತ ವಿಚಾರಗೋಷ್ಠಿಯಲ್ಲಿ ಹಲವು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ವಿಜಯಕುಮಾರ ತೇಗಲತಿಪ್ಪಿ, ಡಾ.ಜಯಶ್ರೀ ಚಟ್ನಳ್ಳಿ, ಮಂಜುನಾಥ ಅಂಜುಟಗಿ, ಮಹೇಶ ಆಲೇಗಾಂವ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ಜಯಶ್ರೀ ಜಮಾದಾರ್ ಇತರರಿದ್ದರು. 
ಕಲಬುರಗಿ

ವಚನ ಸಾಹಿತ್ಯಕ್ಕೆ ಡಾ.ಹಳಕಟ್ಟಿ ಮರು ಚೈತನ್ಯ

ಪ್ರಮುಖ ಮುಖ್ಯಾಂಶಗಳು

  • ಡಾ.ಮಲ್ಲಿಕಾರ್ಜುನ ವಡ್ಡನಕೇರಿ ಹೇಳಿಕೆ
  • ೨೦೨೬ನೇ ಸಾಲಿನ ಡಾ. ಫ.ಗು.ಹಳಕಟ್ಟಿ ಪ್ರಶಸ್ತಿ ಪ್ರದಾನ
ಕಲಬುರಗಿ: ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ಸಂರಕ್ಷಿಸುವಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಪರಿಶ್ರಮ, ತ್ಯಾಗ ಸದಾ ಸ್ಮರಣೀಯ. ಹಳ್ಳಿ ಹಳ್ಳಿಗೂ ಸಂಚರಿಸಿ ವಚನ ಸಂಗ್ರಹಿಸಿ, ಸಂಶೋಧಿಸಿ, ಪ್ರಕಟಿಸಿದ ಕಾರ್ಯ ಇಂದು ವಚನಗಳನ್ನು ಅರಿಯಲು ಸಾಧ್ಯವಾಗಿದೆ. ಜತೆಗೆ ವಚನ ಸಾಹಿತ್ಯಕ್ಕೆ ಡಾ.ಹಳಕಟ್ಟಿ ಮರು ಚೈತನ್ಯ ನೀಡಿದ್ದಾರೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಚನ ಸಂಶೋಧನಾ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಬದುಕು-ಸಾಧನೆ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಗೋಳ ಗುಮ್ಮಟಕ್ಕಿಂತ ವಚನ ಗುಮ್ಮಟ ನೋಡಲು ಬಂದಿರುವೆ ಎಂದು ಬಿಎಂಶ್ರೀ ಅವರ ಮಾತುಗಳು ನಮ್ಮ ವೈಚಾರಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ. ಇಂದು ಎಲ್ಲಾ ಜಾತಿ ಧರ್ಮದವರಿಗೆ ವಚನ ಸಾಹಿತ್ಯ ಸಂಗ್ರಹಿಸಿ ಕೊಟ್ಟ ಕೀರ್ತಿ ಡಾ. ಫ.ಗು. ಹಳಕಟ್ಟಿಯವರಿಗೆ ಮಾತ್ರ ಸಲ್ಲುತ್ತದೆ., ಈ ದಿಸೆಯಲ್ಲಿ ಯುವಕರಿಗೆ ನಾವೆಲ್ಲ ವಚನಗಳ ಮಹತ್ವ ತಿಳಿಸಿಕೊಡಬೆಕಾಗಿದೆ ಎಂದರು.
ಹಳಕಟ್ಟಿ ಸಾಧನೆ ಅಮೋಘ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಬಸವಾದಿ ಶರಣರ ವಚನ ಸಾಹಿತ್ಯವನ್ನು ಬೆಳಕಿಗೆ ತರುವಲ್ಲಿ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಶ್ರಮ ಅಮೋಘ. ಒಂದು ವಿಶ್ವವಿದ್ಯಾಲಯ ಸಾಧಿಸಿದಷ್ಟು ಕೆಲಸವನ್ನು ಏಕಾಂಗಿಯಾಗಿ ಮಾಡಿದ್ದಾರೆ. ವೈಚಾರಿಕ ನೆಲೆಯಲ್ಲಿ ಬದುಕು ರೂಪಿಸಿಕೊಂಡ ಹಳಕಟ್ಟಿ ಅವರ ಸಾಧನೆ ಇಂದು ನಮಗೆಲ್ಲರಿಗೂ ಮಾದರಿ ಎಂದರು.
ಶರಣ ಚಿಂತಕಿ ಡಾ.ಜಯಶ್ರೀ ಚಟ್ನಳ್ಳಿ, ಕಲಬುರಗಿ ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಅಫಜಲಪೂರ ಭಾರತೀಯ ಬಸವ ಬಳಗದ ಮಹೇಶ ಆಲೇಗಾಂವ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ಜಯಶ್ರೀ ಜಮಾದಾರ ಮಾತನಾಡಿದರು. ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ಸೋಮಶೇಖರಯ್ಯ ಹೊಸಮಠ, ದಿನೇಶ ಮದಕರಿ, ಜಗದೀಶ ಮರಪಳ್ಳಿ, ಜೆ.ವಿನೋದ, ಜ್ಯೋತಿ ಕೋಟನೂರ, ಶಿವಲೀಲಾ ಕಲಗುರ್ಕಿ, ಶಿವನಂದ ಸುರವಸೆ, ಬಂಗಾರಪ್ಪ ಆಡಿನ್, ಬಸವರಾಜ ಪಾಟೀಲ, ರವಿ ಶಹಾಪೂರಕರ್ ಇತರರಿದ್ದರು.
೨೦೨೬ನೇ ಸಾಲಿನ ಡಾ.ಹಳಕಟ್ಟಿ ಪ್ರಶಸ್ತಿ: ಶರಣ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡುತ್ತಿರುವ ಗಣ್ಯರಾದ ಚಿದಂಬರರಾವ ಪಾಟೀಲ ಮರಗುತ್ತಿ, ಬೈಲಪ್ಪ ನೇದಲಗಿ ನೆಲೋಗಿ, ಪ್ರೊ.ಶಿವರಾಜ ಪಾಟೀಲ, ಬಂಡಪ್ಪ ಕೇಸೂರ, ಜಗನ್ನಾಥ ರಾಚೋಟ್ಟಿ, ಕಮಲಾ ಬಿ ಪಾಟೀಲ್ ಹೇರೂರ, ಅಶೋಕ ಘೂಳಿ, ಡಾ.ಶ್ರೀಮಂತ ಹೋಳಕರ್, ಡಾ.ಆನಂದ ಸಿದ್ಧಾಮಣಿ ಅವರಿಗೆ ೨೦೨೬ನೇ ಸಾಲಿನ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
"

ನಿತ್ಯವೂ ವಿನೂತನ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ ಕಸಾಪ ದ ಚಟುವಟಿಕೆಗಳು ರಾಜ್ಯಕ್ಕೆ ಮಾದರಿಯಾಗಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣ ಸಾಹಿತ್ಯ ಪರಿಷತ್ತು ಇವು ಒಂದು ನಾಣ್ಯದ ಎರಡು ಮುಖಗಳು. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಬಹು ದೊಡ್ಡದು.

ಡಾ.ಜಯಶ್ರೀ ಚಟ್ನಳ್ಳಿಶರಣ ಚಿಂತಕಿ