police constable asi suspend
- ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಆದೇಶ
ಕಲಬುರಗಿ: ಪೋಕ್ಸೋ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಸಂತ್ರಸ್ತೆಯ ತಾಯಿ ಬಳಿ ಲಂಚಕ್ಕೆ ಕೈಒಡ್ಡಿ, ಸಾ ಸಮೇತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಪೇದೆ, ಎಎಸ್ಐಯನ್ನು ಅಮಾನತು ಮಾಡಿ, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಆದೇಶಿಸಿದ್ದಾರೆ.
ಮಹಿಳಾ ಹೆಡ್ ಕಾನ್ಸ್ಟೇಬಲ್ ಜ್ಯೋತಿ, ಎಎಸ್ಐ ಶಿವಶರಣಪ್ಪ ಅಮಾನತು ಆದ ಲಂಚಕೋರ ಪೊಲೀಸರು. ಸ್ಟೇಷನ್ ಬಜಾರ್ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿ ಬಳಿ 10 ಸಾವಿರ ರೂ.ಗೆ ಬೇಡಿಕೆ ಇಟ್ಟು, ಜೂ.7ರಂದು ಹಣ ಪಡೆಯುವ ವೇಳೆ ಸಾ ಸಮೇತ ಲೋಕಾಯುಕ್ತರ ಬಲೆಗೆ ಜ್ಯೋತಿ ಬಿದ್ದಿದ್ದಳು. ಅದರಲ್ಲಿ ಎಸ್ಐ ಶಿವಶರಣಪ್ಪನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.
ಪೋಕ್ಸೋ ಪ್ರಕರಣದಲ್ಲಿ ಸಹಾಯ ಮಾಡುವ ನೆಪದಲ್ಲಿ ಹಣದ ಬೇಡಿಕೆ ಇಟ್ಟಿದ್ದು, ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ರಾಜ್ಯ ಪೊಲೀಸ್ ನಿಯಮದಂತೆ ಇಲಾಖಾ ಶಿಸ್ತು ಕ್ರಮ ಬಾಕಿ ಇರಿಸಿ, ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಿ, ಆದೇಶ ಹೊರಡಿಸಲಾಗಿದೆ.