farmers suicide 
ಕಲಬುರಗಿ

ಸಾಲಬಾಧೆ ಇಬ್ಬರು ರೈತರು ಆತ್ಮಹತ್ಯೆ

ರಮೇಶ ಮೇಳಕುಂದಾ
ಕಲಬುರಗಿ: ಸಾಲಬಾಧೆ ತಾಳದೆ ಮೇಳಕುಂದಾ ಬಿ ಗ್ರಾಮದ ರೈತ ಭಾಗಪ್ಪ ನರೋಣಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ಕೆ$ದು ರ‍್ಷದಿಂದ ಜಮೀನುಗಳು ಸರಿಯಾಗಿ ಬೆಳೆಯದೇ ಮಾಡಿದ್ದ ಸಾಲ ತೀರಿಸಲು ಆಗದ್ದಕ್ಕೆ ನೊಂದಿದ್ದರು. ಎಸ್​ಬಿಐ ಬ್ಯಾಂಕ್​ ಮತ್ತು ಖಾಸಗಿಯಾಗಿ ೧೧ ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಪ್ರಸಕ್ತ ರ‍್ಷವೂ ಅತಿವೃಷ್ಟಿಯಿಂದ ಬೆಳೆ ಸರಿಯಾಗಿ ಬೆಳೆಯದಿದ್ದಕ್ಕೆ, ಸಾಲ ತೀರಿಸುವುದು ಕಷ್ಟಕರವೆಂದು ರಾತ್ರಿ ಮನೆಯಿಂದ ಹೊರ ಹೋಗಿದ್ದು, ಬೆಳಗ್ಗೆ ಹುಡುಕಾಡಿದಾಗ ರೇಷ್ಮಿ ಶೆಡ್ಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದಿದೆ. ರಹತಾಬಾದ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿ ರೈತ ಸಾವು: ಸಾಲಬಾಧೆ ತಾಳದೆ ಕುಸನೂರ ತಾಂಡಾದ ರೈತ ತಾರಾಸಿಂಗ್​ ಜಾಧವ್​ ವಿಷಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಟನೆ ನಡೆದಿದೆ. ೧ ಎಕರೆ ಜಮೀನಿದ್ದು, ಪಾಲಿನಂತೆ ಬೇರೆಯವರ ಜಮೀನು ಪಡೆದು, ಕೃಷಿ ಮಾಡುತ್ತಿದ್ದ. ಪ್ರಸಕ್ತ ರ‍್ಷ ನೈರ‍್ಗಿಕ ವಿಕೋಪಕ್ಕೆ ಬೆಳೆ ಸರಿಯಾಗಿ ಬಂದಿರಲಿಲ್ಲ. ಬೆಳೆಗಾಗಿ ಸಾಲ ಮಾಡಿದ್ದು, ತೀರಿಸಲು ಆಗುವುದಿಲ್ಲ ಎಂಬ ಕೊರಗಿನಲ್ಲಿ ಹುಲ್ಲಿಗೆ ಹೊಡೆಯುವ ಔಷಧ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಲ್ರ‍್ಗ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.