- ಅರುಣ ಭರಣಿ ವಿರುದ್ಧ ಪ್ರಕರಣ ದಾಖಲು
ಕಲಬುರಗಿ: ಅಕ್ರಮ ಮರಳುಗಾರಿಕೆ ದೂರು ನೀಡಿದ್ದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ಮೇಲೆ ಹಲ್ಲೆ ಮಾಡಿ, ಬೆದರಿಕೆ ಒಡ್ಡಲಾಗಿದೆ ಎಂದು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರುಣ ಭರಣಿ ಮತ್ತು ಸಂಗಡಿಗರು ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ಕೇಸ್ ಮಾಡಿದ್ದಾರೆ.
ಕರವೇ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿಯೂ ಶಹಾಬಾದ್ ತಾಲೂಕಿನ ಕಡೆಹಳ್ಳಿಯಲ್ಲಿ ನಿರ್ಮಿಸುತ್ತಿರುವ ಭೀಮಾ ಬ್ಯಾರೇಜ್ ಬಳಿ ಹಡಗುಗಳ ಮೂಲಕ ಅಕ್ರಮ ಮರಳು ತೆಗೆದು, ಸಾಗಿಸಲಾಗುತ್ತಿದ್ದು, ಇದನ್ನು ತಡೆಯಿರಿ ಎಂದು ಶಹಾಬಾದ್ ತಹಸೀಲ್ದಾರ್ಗೆ ದೂರು ನೀಡಿದ್ದರು. ದೂರು ಆಧರಿಸಿ ತಹಸೀಲ್ದಾರ್ ಸ್ಥಳ ಪರಿಶೀಲಿಸಿದ್ದರು. ಇದನ್ನು ತಿಳಿದು ಅರುಣ ಭರಣಿಯೂ ಆನಂದನನ್ನು ನಗರದ ಹೊಟೇಲ್ಒಂದಕ್ಕೆ ಕರೆಸಿ, ಗುಂಡಾಗಳ ಜತೆಗೆ ಕೂಡಿ ಎಳೆದಾಡಿ, ಹಲ್ಲೆ ಮಾಡಿದ್ದಲ್ಲದೇ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದು, ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.