thief arrested 
ಕಲಬುರಗಿ

16 ವರ್ಷದಿಂದ ಪರಾರಿಯಾಗಿದ್ದ ಕಳ್ಳನ ಬಂಧನ

ಪ್ರಮುಖ ಮುಖ್ಯಾಂಶಗಳು

  • 2008ರಲ್ಲಿ ಕಳ್ಳತನ ಮಾಡಿ, ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿ
ಕಲಬುರಗಿ: ಅಪರಾಧ ಎಸಗಿ 16 ವರ್ಷದಿಂದ ಪೊಲೀಸರಿಂದ ತಲೆ ಮರೆಸಿಕೊಂಡ ಆರೋಪಿಯನ್ನು ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಾಡಿ ಜಂಕ್ಷನ್​ನ ಸೋನಾಬಾಯಿ ಪ್ರದೇಶದ ಲಾಲ್​ಬಾಷಾ ಸೈಯದ್​ ಹುಸೇನ್​ ಬಂಧಿತ ಆರೋಪಿ.
2008ರಲ್ಲಿ ವಾಡಿ ಪಟ್ಟಣದಲ್ಲೇ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜಾಮೀನು ಪಡೆದುಕೊಂಡು ಹೋದವ 16 ವರ್ಷದಿಂದ ಪರಾರಿಯಾಗಿದ್ದ. ಆರೋಪಿಯನ್ನು ಪತ್ತೆ ಹಚ್ಚಲು ಪಿಎಸ್​ಐಗಳಾದ ತಿರುಮಲೇಶ, ರೇಣುಕಾ, ಸಿಬ್ಬಂದಿ ಯೂಸ್​ೂ, ಬಸಲಿಂಗಪ್ಪ, ಸಂಗಮೇಶ, ಆರ್​ೀ, ರವೀಂದ್ರ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಬೆಂಗಳೂರು, ನಾಲವಾರ, ಕುಂಬಾರಹಳ್ಳಿ, ವಾಡಿ, ಪಟ್ಟಣ ಸೇರಿ ವಿವಿಧೆಡೆ ತನಿಖೆ ನಡೆಸಿದ್ದು, ಮೇ 19ರಂದು ವಾಡಿ ಪಟ್ಟಣದಲ್ಲೇ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.