ಕಲಬುರಗಿ ಗೋದುತಾಯಿ ಪದವಿ ಮಹಿಳಾ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಶರಣಬಸವ ವಿವಿ ಪ್ರಾಧ್ಯಾಪಕ ಡಾ.ಚಿದಾನಂದ ಚಿಕ್ಕಮಠ, ಪ್ರಾಚಾಯೆರ್ ಡಾ.ಸೀಮಾ ಪಾಟೀಲ್​, ಡಾ.ಪುಟ್ಟಮಣಿ ದೇವಿದಾಸ, ಡಾ.ಶಾಂತಲಿಂಗ ಘಂಟೆ, ಡಾ.ಪೂರ್ಣಿಮಾ ಇತರರಿದ್ದರು. 
ಕಲಬುರಗಿ

ಕಾವ್ಯ ಪರಿಕರಗಳ ಅಧ್ಯಯನವೇ ಮೀಮಾಂಸೆ

ಕಲಬುರಗಿ: ಕಾವ್ಯದ ಪರಿಕರಗಳಾದ ರಸ, ಧ್ವನಿ, ಶೈಲಿ, ವಕ್ರೋಕ್ತಿ, ಅಲಂಕಾರ, ವ್ಯಂಗ್ಯಾರ್ಥ, ಲಕ್ಷಣಾರ್ಥ, ವಾಚ್ಯಾರ್ಥ, ಕಾವ್ಯದ ಉಗಮ, ವಿಕಾಸ, ಲಾಕ್ಷಣಿಕರ ಸಿದ್ಧಾಂತ ಅಧ್ಯಯನ ಮಾಡುವುದೇ ಕಾವ್ಯ ಮೀಮಾಂಸೆ ಎಂದು ಶರಣಬಸವ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಚಿದಾನಂದ ಚಿಕ್ಕಮಠ ಹೇಳಿದರು.

ಭಾರತೀಯ ಕಾವ್ಯ ಮೀಮಾಂಸೆ ಕುರಿತು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಾವ್ಯ ಮೀಮಾಂಸೆಗೆ ಪೂರ್ವದಲ್ಲಿ ಕ್ರಿಯಾಕಲ್ಪ, ಅಲಂಕಾರ ಶಾಸ, ಲಕ್ಷಣಗ್ರಂಥ ಎಂದು ಕರೆಯುತ್ತಿದ್ದರು. ಕಾವ್ಯದಲ್ಲಿರುವ ರಸಗಳು ಸ್ಥಾಯಿಭಾವ, ಸಂಚಾರಿ ಭಾವ, ಕಾವ್ಯದ ಧ್ವನಿ, ವಾಕ್ಯ, ಪದ, ಶಬ್ದ, ಶೈಲಿ, ಅಲಂಕಾರ ಕುರಿತು ಶಾಸಿಯ ಅಧ್ಯಯನ ಮಾಡುವುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾಯೆರ್ ಡಾ.ಸೀಮಾ ಪಾಟೀಲ್​ ಮಾತನಾಡಿ, ಕಾವ್ಯ ಒಂದು ಶಾಸಿಯ ವಿಷಯವಾಗಿದ್ದು, ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಭಾಗದ ಮುಖ್ಯಸ್ಥೆ ಡಾ.ಪುಟ್ಟಮಣಿ ದೇವಿದಾಸ್​ ಪ್ರಾಸ್ತಾವಿಕ ಮಾತನಾಡಿದರು. ಡಾ.ಪೂರ್ಣಿಮಾ ಮಾಸಿಮಾಡೆ ಸ್ವಾಗತಿಸಿದರು. ಡಾ.ಶಾಂತಲಿಂಗ ಂಟೆ ನಿರೂಪಣೆ ಮಾಡಿ ವಂದಿಸಿದರು.