ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಶ್ಲಾಘನೆ
ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಸಂಘದ ರಜತೋತ್ಸವ
ಕಲಬುರಗಿ: ದೇಶದ ಅಭಿವೃದ್ಧಿಗೆ ಇಂಜಿನಿಯರ್ಸ್ ಕೊಡುಗೆ ಅಪಾರ. ಇಂಜಿನಿಯರ್ಗಳು ಉತ್ತಮ ಕೆಲಸ ಮಾಡುತ್ತಿರುವುದರಿಂದಲೇ ನವಭಾರತ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.
ನಗರದ ಎಂಆರ್ಎಂಸಿ ಸ್ಯಾಕ್ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಸಂಘದ ರಜತ ಮಹೋತ್ಸವ ಮತ್ತು ಇಂಜಿನಿಯರ್ಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಕಂಡ ಶ್ರೇಷ್ಠ ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯನವರ ಆದರ್ಶ, ಮೌಲ್ಯ, ಪ್ರಾಮಾಣಿಕತೆ, ಜನಪರ ಕಾಳಜಿ ನಮಗೆ ದಾರಿದೀಪವಾಗಿದೆ. ಈ ತಲೆಮಾರಿನ ಇಂಜಿನಿಯರ್ಗಳು ಸಹ ವಿಶ್ವೇಶ್ವರಯ್ಯನವರಷ್ಟೇ ದ, ಬುದ್ಧಿವಂತರಾಗಿದ್ದಾರೆ ಎಂದು ಕೊಂಡಾಡಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ರೈಲ್ವೆ, ಹೆದ್ದಾರಿ ಸೇರಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇಂಜಿನಿಯರ್ಗಳ ಕೊಡುಗೆ ಅಪ್ರತಿಮವಾಗಿದೆ ಎಂದು ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಉದ್ಘಾಟಿಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ ಸುಭಾಷ ಶಿಣಕರ್, ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ಗಳ ಪರಿಷತ್ ಅಧ್ಯ ಶ್ರೀಕಾಂತ ಚನ್ನಾಳ, ಸದಸ್ಯ ಮುರಳೀಧರ ಜಿ.ಕರಲಗಿಕರ್, ಕೆಪಿಸಿಇಎ ಕಾರ್ಯದರ್ಶಿ ಸಿದ್ರಾಮ ನಿರೋಣಿ ಮಾತನಾಡಿದರು.
ಸಂದ ಅಧ್ಯ ಜಿತೇಂದ್ರ ಮಿಶ್ರಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅನಿಲಕುಮಾರ ಗಂಗಾಣೆ, ಕಾರ್ಯದರ್ಶಿ ಮನೀಶ ವೈಕುಂಠ, ಜಾಲ್ನಾದ ರಾಜುರಿ ಸ್ಟೀಲ್ ನಿರ್ದೇಶಕ ಸಂತೋಷ ಮುಂದಡಾ, ವಿಜಯಕುಮಾರ ಮೇಳಕುಂದಿ, ಜಗನ್ನಾಥ ಜೋಶಿ, ವಿಜಯೀಂದ್ರ ಕಲ್ಲೂರ, ಸಮೀರ್ ದೇಶಪಾಂಡೆ, ನರಸಿಂಹಲು ಪತ್ತಿ, ದಶರಥ ಅಕ್ಕಾ, ಲಿಂಗರಾಜ ವಾಲಿ, ಅಮರ ಹಿರೋಜಿಕರ್, ವಿನಯ ಪಾಟೀಲ್, ಶ್ರೀಶೈಲ ದೇವಣಿ, ಶರದ ಚೌಕಾ, ನಿಖಿಲರೆಡ್ಡಿ ಶೇರಿಕಾರ, ಅನಿಲ ಮಂಗಲಗಿ, ಅನಿಲ ನಾಗನಹಳ್ಳಿ, ನಿಜಗುಣಿ ದೇವಣಗಾಂವ, ಅಬ್ದುಲ್ಲಾ ಬೇಲಿಫ್, ಆಬೀದ್ ಹುಸೇನ್ ಪಟೇಲ್, ಇಫ್ತೇಕಾರ್ ಹುಸೇನ್, ಸುಮಿತ ಬಳಬಟ್ಟಿ, ರವಿಕಾಂತ ಬಾಸೂತಕರ್, ಬಂಡೇಶರೆಡ್ಡಿ, ವಿಶ್ವನಾಥ ಗುಬ್ಬೇವಾಡ, ಜಯಕುಮಾರ ಮಾಡಗಿ, ರಮೇಶ ಮಹಾದಾಪ್, ಶ್ರೀನಿವಾಸ ಬೋರಾಳಕರ್, ರಾಜುರಿ ಸ್ಟೀಲ್ ಮಾರುಕಟ್ಟೆ ಅಧಿಕಾರಿ ಸಂದೀಪ್ ಇತರರಿದ್ದರು.
ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಇಂಜಿನಿಯರ್ಗಳ ಪ್ರತಿಭಾವಂತ ಮಕ್ಕಳು, ಸೆಂಟ್ರಿಂಗ್ ಇತರ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ನೀರಾವರಿ ಇಲಾಖೆ ನಿವೃತ್ತ ಮುಖ್ಯ ಇಂಜಿನಿಯರ್ ವಿಜಯ ಸಂಗನ್, ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ರಫಿಯುದ್ದಿನ್ ಅವರನ್ನು ಸತ್ಕರಿಸಲಾಯಿತು.
ಕಲಬುರಗಿ ಸಿವಿಲ್ ಇಂಜಿನಿಯರ್ಗಳ ಸಂಘದ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನ ನೀಡುವುದರ ಜತೆಗೆ ರಾಜ್ಯ ಸರ್ಕಾರದಿಂದಲೂ ನೆರವು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ