ಚಿಂಚೋಳಿ: 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಕಾಯಕ ತತ್ವ, ಸಂಸ್ಕಾರ, ಸಂಸ್ಕೃತಿ ಪ್ರತಿಕವಾಗಿ ಮಠ ಮಾನ್ಯಗಳ ಸ್ಥಾಪನೆಯಾಗಿವೆ ಎಂದು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಆರ್. ಜಿ. ಶಟಗಾರ ಹೇಳಿದರು.
ಮತಕ್ಷೇತ್ರದ ರಟಕಲ್ ಗ್ರಾಮದಲ್ಲಿ ಲಿಂ. ಶ್ರೀ ಮುರುಘೇಂದ್ರ ಶಿವಯೋಗಿ ವೀರಕ್ತಮಠದ ಪೂಜ್ಯ ಶ್ರೀ ನೀಲಕಂಠ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ಲಿಂ. ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ಮಹಾ ಪುರಾಣ ಸಮಾರಂಭದ 11 ನೇ ದಿನದ ಪುಸ್ತಕ ದಿನದಂದು ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಸರಳ, ಆದರ್ಶಪ್ರಾಯ ಮೂರ್ತಿ ಪೂಜ್ಯರಾಗಿದ್ದು, ರಟಕಲ್ ವಿರಕ್ತ ಮಠಕ್ಕೆ ಭಕ್ತರೇ ಆಸ್ತಿಯಂದು ಬಂದಿದ್ದು, ಈ ಭಾಗದ ಭಕ್ತರ ಹೃದಯ ಪರಿವರ್ತನೆ ಮಾಡುವ ಮೂಲಕ ಶ್ರೀಮಠದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಲೋಕ ಕಲ್ಯಾಣಕ್ಕಾಗಿ ದೊರೆತ ಶ್ರೀಗಳು ನಿಮಗೆ ದೊರೆತಿದ್ದು ಸುದೈವ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮಿ, ಭರತನೂರಿನ ಮನಿಪ್ರ ಚಿಕ್ಕಗುರು ನಂಜೇಶ್ವರ ಮಹಾಸ್ವಾಮಿ, ಷ.ಬ್ರ ಶ್ರೀ ರೇವಣಸಿದ್ಧ ಶಿವಾಚಾರ್ಯ, ಪೂಜ್ಯ ರೇವಣಸಿದ್ಧ ಶರಣರು, ಆರ್. ಜೆ ಶಟಗಾರ, ಬಸವರಾಜ ಕೋಣಿನ್, ಗೋಪಾಲ ಎಂ.ಪಿ, ಶಿವಾನಂದ ಮಾಲಿ ಪಾಟೀಲ್, ಧನರಾಜ ಸ್ವಾಮಿ, ಮೈಬೂಬ ಅಲಿ, ವೀರಣ ಗಂಗಾಣಿ, ಮುರಗೇಪ್ಪ ನಾಗೂರ, ಚಂದ್ರಶೇಖರ ಚೌಕಾ, ರವೀಂದ್ರ ಕಿಣ್ಣಿ, ಗೌರಿಶಂಕರ ಕಿಣ್ಣಿ, ಬಸವಂತರಾವ ಏರಿ, ಹಣಮಂತರಾವ ಪಾಟೀಲ್, ಶಿಶಶರಣಪ್ಪ, ಅಶೋಕ ಗೂಳಿ, ಚಂದ್ರಕಾತ ಬೀದರ, ಸಿದ್ದು ಪಾಟೀಲ್ ಕಂದಗೂಳ, ಲಿಂಗರಾಜ ಬೆಂಗಳೂರ, ಸೃಷ್ಟಿ ಬೀಜನಳ್ಳಿ, ಪ್ರಕಾಶ ವಿಶ್ವಕರ್ಮ ಸೇರಿದಂತೆ ಅನೇಕರು ಇದ್ದರು.