ಕಲಬುರಗಿ ಎನ್ವಿ ಸಂಸ್ಥೆಯಿಂದ ನಡೆಯಲಿರುವ ಕ್ರಿಕೆಟ್ ಟೂರ್ನಿ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಟ್ರೋಫಿಗಳೊಂದಿಗೆ ಡಾ.ಗಿರೀಶ ಗಲಗಲಿ, ಅಭಜಿತ್ ದೇಶಮುಖ, ಸುಹಾಸ ಖಣಗೆ, ಡಾ.ಸದಾಶಿವ ಜಿಡಗೇಕರ್, ಪ್ರಹ್ಲಾದ್ ಪೂಜಾರಿ, ಅನಂತ ಗುಡಿ, ರಾಮ್ ಶಾನಭಾಗ್ ಇದ್ದಾರೆ
- ಎನ್ವಿ ಮಾಜಿ ವಿದ್ಯಾರ್ಥಿಗಳ ಸಂದ ಅಧ್ಯಕ್ಷ ಡಾ.ಗಲಗಲಿ ಹೇಳಿಕೆ
- 12 ತಂಡ ಭಾಗಿ, 28ರಂದು ಫೈನಲ್
ಕಲಬುರಗಿ: ನಗರದ ನೂತನ ವಿದ್ಯಾಲಯ ಸಂಸ್ಥೆಯ ಮಾಜಿ ವಿದ್ಯಾರ್ಥಿಗಳ ಸಂವು ಜನವರಿ 17ರಿಂದ ನವಿಲೆ ಹೋಮಿ ಇರಾನಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದೆ.
ಈ ಕುರಿತು ಸಂಸ್ಥೆಯ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂದ ಅಧ್ಯಕ್ಷ ಡಾ.ಗಿರೀಶ ಗಲಗಲಿ, ಜನವರಿ 17ರಂದು ಸಂಸ್ಥೆಯ ಕ್ರೀಡಾಂಗಣದಲ್ಲಿ ಟೂರ್ನಿ ಆರಂಭವಾಗಿ 28ರಂದು ಪೂರ್ಣಗೊಳ್ಳಲಿದೆ. ಕೆಎಸ್ಸಿಎ ನಿಯಮವಾಳಿ ಅಡಿ ಈ ಕ್ರೀಡಾಕೂ ನಡೆಯಲಿದೆ ಎಂದು ಹೇಳಿದರು.
20 ಓವರ್ ಮ್ಯಾಚ್ ಇರಲಿದ್ದು, ಲೆದರ್ ಬಾಲ್ ಬಳಕೆ ಮಾಡಲಾಗುತ್ತಿದೆ. ಸೊಲ್ಲಾಪುರ, ಬಾಗಲಕೋಟ್, ಕೊಪ್ಪಳ, ಜೇವರ್ಗಿ, ಉಸ್ಮಾನಾಬಾದ್ ಸೇರಿ ಒಟ್ಟು 12 ತಂಡಗಳು ಭಾಗವಹಿಸಲಿವೆ. ಇದರಲ್ಲಿ ಜಿಮ್ಖಾನಾ, ಗ್ಯಾಲಕ್ಸಿ, ಎನ್ವಿ ಪದವಿ ಕಾಲೇಜು, ಕೆಸಿಸಿ, ಎಚ್ಕೆಸಿಸಿಐ, ಸಿಯುಕೆ, ಸರ್ಕಾರಿ ನೌಕರರ ಸಂ ಸೇರಿ ಸ್ಥಳಿಯ ಏಳು ತಂಡಗಳು ಇರಲಿವೆ. ಪ್ರತಿ ದಿನ 2 ಮ್ಯಾಚ್ಗಳು ನಡೆಯಲಿವೆ. ಮೊದಲು ಲೀಗ್ ಮ್ಯಾಚ್, ನಂತರ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ 28ರಂದು ನಡೆಯಲಿದೆ ಎಂದು ಹೇಳಿದರು.
ನಿತ್ಯ ಬೆಳಗ್ಗೆ 8.30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಕ್ರೀಡಾಕೂಟದಲ್ಲಿ 9 ಜನ ಅಂಪೈರ್ಗಳು, 12 ಜನ ಸ್ಕೋರರ್ಗಳು ಇರಲಿದ್ದಾರೆ. ವಿನ್ನರ್ 1 ಲಕ್ಷ ರೂ. ನಗದು, ಟ್ರೋಫಿ ಹಾಗೂ ರನ್ನರ್ಗೆ 75 ಸಾವಿರ ರೂ.ನಗದು, ಟ್ರೋಫಿ ನೀಡಲಾಗುತ್ತಿದೆ ಎಂದರು.
ನೂತನ ವಿದ್ಯಾ ಪೋಷಣ ನಿಧಿ
ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂವು 2021ರಲ್ಲಿ ನೂತನ ವಿದ್ಯಾ ಪೋಷಣ ನಿಧಿ ಸ್ಥಾಪಿಸಿದೆ. ಸಂಸ್ಥೆಯ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವುದು ಇದರ ಉದ್ದೇಶ. ಈ ನೆರವು ಪಡೆದುಕೊಳ್ಳಲು ವಿದ್ಯಾರ್ಥಿ ಕನಿಷ್ಠ ಶೇ.75 ಅಂಕ ಗಳಿಸಿರಬೇಕು, ಬಿಪಿಎಲ್ ಕಾರ್ಡ್ ಹೊಂದಿರಬೇಕು, ಎನ್ವಿ ಸಂಸ್ಥೆಯ ವಿದ್ಯಾರ್ಥಿಯಾಗಿರಬೇಕು ಎಂದು ಹೇಳಿದರು.
ಶಿಕ್ಷಣ ಮತ್ತು ಕ್ರೀಡೆ ಎಂಬ ಎರಡು ಪ್ರಮುಖ ಕ್ಷೇತ್ರಗಳ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವುದು ಈ ನಿಧಿಯ ಮುಖ್ಯ ಉದ್ದೇಶ. ಈ ಆಶಯದ ಮುಂದುವರಿದ ಭಾಗವಾಗಿ ಇರಾನಿ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಈ ಮೂಲಕ ನಿಧಿಯನ್ನು ಮತ್ತಷ್ಟು ಬಲಪಡಿಸುವುದೂ ಆಗಿದೆ. ಉತ್ತರ ಕರ್ನಾಟಕದ ಯುವ ಬಾಲಕ, ಬಾಲಕಿಯರಲ್ಲಿ ಅಡಗಿರುವ ಕ್ರೀಡಾ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದು, ಕ್ರೀಡಾ ಮನೋಭಾವನೆ ಬೆಳೆಸುವುದು ಈ ಟೂರ್ನಿಯ ಮಹತ್ವದ ಆಶಯ ಎಂದರು.
ನವಿಲೆ ಹೋಮಿ ಇರಾನಿ ಸ್ಮರಣಾರ್ಥ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಇದಕ್ಕಾಗಿ ನೋಶ್ಯಾದ್ ಇರಾನಿ ಆರ್ಥಿಕ ನೆರವು ಒದಗಿಸಿದ್ದಾರೆ ಎಂದರು.
ಟೂರ್ನಿ ಉದ್ಘಾಟನೆ
ಜನವರಿ 17ರಂದು ಬೆಳಗ್ಗೆ 8ಕ್ಕೆ ನೂತನ ವಿದ್ಯಾಲಯ ಕ್ರೀಡಾ ಮೈದಾನದಲ್ಲಿ ಟೂರ್ನಿಗೆ ಚಾಲನೆ ನೀಡಲಾಗುತ್ತಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತಾಲಯದ ಅಪರ ಆಯುಕ್ತ ರಾಹುಲ್ ತುಕಾರಾಮ ಪಾಂಡ್ವೆ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಿಂಧೆ ಅವಿನಾಶ ಸಂಜೀವನ್, ಕೆನ್ಬ್ರಿಜ್ ಶಾಲೆ ನಿರ್ದೇಶಕ ನೋಶಾದ್ ನವಿಲೆ ಇರಾನಿ ಮುಖ್ಯ ಅತಿಥಿಗಳಾಗಿದ್ದಾರೆ.
ಎನ್.ವಿ.ಸಂಸ್ಥೆಯ ಅಧ್ಯಕ್ಷ ಡಾ.ಗೌತಮ್ ಜಹಾಗೀರದಾರ್, ಎನ್ವಿ ಬೋರ್ಡ್ ಆಫ್ ಟ್ರಸ್ಟಿ ಅಧ್ಯಕ್ಷ ಸುರೇಂದ್ರ ಜಾಜಿ ಅತಿಥಿಗಳಾಗಿದ್ದಾರೆ. ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಎನ್ವಿ ಸಂಸ್ಥೆಯ ಕಾರ್ಯದರ್ಶಿ ಅಭಿಜಿತ್ ದೇಶಮುಖ, ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂದ ಕಾರ್ಯದರ್ಶಿ ಸುಹಾಸ ಖಣಗೆ, ಪಾಂಡುರಂಗ ದೇಶಮುಖ, ಪ್ರಹ್ಲಾದ್ ಪೂಜಾರಿ, ಮಾಧ್ಯಮ ಪ್ರತಿನಿಧಿ ಅನಂತ ಗುಡಿ, ಡಾ.ಸದಾಶಿವ ಜಿಡಗೇಕರ್, ರಾಮ ಶಾನಭೋಗ್ ಇತರರಿದ್ದರು.
ಈ ಟೂರ್ನಿಯಲ್ಲಿ ಮೂರು ಮಹಿಳಾ ತಂಡಗಳು ಭಾಗವಹಿಸುತ್ತಿರುವುದು ವಿಶೇಷ. ಕಲಬುರಗಿ, ಯಾದಗಿರಿ ಮತ್ತು ಶಿವಮೊಗ್ಗ ತಂಡಗಳು ಭಾಗವಹಿಸಲಿವೆ. ಈ ಪಂದ್ಯವೂ ಕೆಎಸ್ಸಿಎ ರೂಲ್ಸ್ ಅಡಿ ನಡೆಯಲಿದ್ದು, ವಿನ್ನರ್ಗೆ 25 ಸಾವಿರ ರೂ. ನಗದು, ಟ್ರೋಫಿ, ರನ್ನರ್ಗೆ 15 ಸಾವಿರ ರೂ.ನಗದು, ಟ್ರೋಫಿ ನೀಡಲಾಗುತ್ತಿದೆ.
ಡಾ.ಗಿರೀಶ ಗಲಗಲಿ,ಅಧ್ಯಕ್ಷ, ಎನ್ವಿ ಮಾಜಿ ವಿದ್ಯಾರ್ಥಿಗಳ ಸಂ, ಕಲಬುರಗಿ.