ಕಲಬುರಗಿ: ಕಾನೂನು ಎಂಬುದು ನಮ್ಮ ಹಕ್ಕುಗಳನ್ನು ರಕ್ಷಿಸುವ ಒಂದು ಶಕ್ತಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಹೇಳಿದರು.
ಉಪಳಾಂವ್ ಗ್ರಾಮದ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜೈ ಹಿಂದ್ ಬಿ.ಇಡಿ ಕಾಲೇಜು ಸಹಯೋಗದಡಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮಗುವಿಗೂ ಶಿಣ ಪಡೆಯುವ, ಸುರತ ಬದುಕುವ ಹಕ್ಕಿದೆ ಎಂದರು.
ಯಾರಿಗಾದರೂ ಅನ್ಯಾಯವಾದಾಗ, ಅವರಿಗೆ ಸಹಾಯ ಮಾಡುವ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶಗಳಲ್ಲಿ ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು&ಅರಿವು ನೀಡುವುದು ಮುಖ್ಯವಾಗಿದೆ. ನಿಮ್ಮ ಹಕ್ಕುಗಳ ಜತೆ ಕರ್ತವ್ಯಗಳನ್ನೂ ತಿಳಿದುಕೊಳ್ಳಬೇಕು. ನಿಮ್ಮಲ್ಲಿ ದೊಡ್ಡ ಕನಸುಗಳಿವೆ. ಈ ಕಾರ್ಯಕ್ರಮ ನಿಮ್ಮಲ್ಲಿ ಕಾನೂನು, ಹಕ್ಕುಗಳ ಅರಿವು ಮತ್ತು ಜವಾಬ್ದಾರಿ ಭಾವನೆ ಬೆಳೆಸಲಿ ಎಂದು ಆಶಿಸಿದರು.
ಪ್ಯಾನಲ್ ವಕೀಲ ಹಣಮಂತರಾಯ ಅಟ್ಟೂರ್ ಕಾನೂನು ಅರಿವು&ನೆರವು ಕುರಿತು ಮಾಹಿತಿ ನೀಡಿದರು. ಜಿಲ್ಲಾ ಮಹಿಳಾ ಆರಕ ನಿರೀಕ ಕುಬೇರ ರಾಯಮಾನೆ ಮಹಿಳಾ ಕಾನೂನು ಬಗ್ಗೆ ಮಾತನಾಡಿದರು.
ಶಾಲಾ ಸಂಸ್ಥಾಪಕ ಗೌಡೇಶ ಬಿರಾದಾರ ಅಧ್ಯತೆ ವಹಿಸಿದ್ದರು. ಗ್ರಾಮೀಣ ಠಾಣೆ ಪಿಎಸ್ಐ ಶಶಿಕಲಾ ನಿರ್ಮಲಕರ್, ಜೈ ಹಿಂದ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಹಣಮಂತ ಯು.ಕೊಂಡಾ, ವಕೀಲರಾದ ಮಲ್ಲಯ್ಯ ಎಸ್.ಸ್ವಾಮಿ, ಉಪನ್ಯಾಸಕರಾದ ಡಾ.ವಾಣಿ ಸಂಕಗೊಂಡ, ಗ್ರಾಮೀಣ ಎಎಸ್ಐ ಪುಂಡಲೀಕ ಜಮಾದಾರ, ಜ್ಯೋತಿ ಪಾಟೀಲ್, ಶಿಕ್ಷಕ ಕುಪೇಂದ್ರ ಇತರರಿದ್ದರು.