ಆಳಂದನಲ್ಲಿ ವಿಧಾನ ಪರಿಷತ್​ ಸದಸ್ಯ ಎನ್​.ರವಿಕುಮಾರ್​ ಅವರು ಹಿಂದೂ ಮಹಾಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ಬೃಹತ್​ ಶೋಭಾಯಾತ್ರೆಗೆ ಚಾಲನೆ ನೀಡಿದರು. ಅಶೋಕ ಬಗಲಿ, ಹರ್ಷಾನಂದ ಗುತ್ತೇದಾರ್​, ಮಹೇಶ ಗೌಳಿ ಇತರರಿದ್ದರು. 
ಕಲಬುರಗಿ

ಗಣೇಶ ಉತ್ಸವಕ್ಕಿದೆ ಜನರ ಒಗ್ಗೂಡಿಸುವ ಶಕ್ತಿ

ಆಳಂದ: ಗಣಪತಿ ಉತ್ಸವ ಕೇವಲ ಧಾರ್ಮಿಕ ಆಚರಣೆಯಾಗದೆ, ದೇಶದ ಜನರನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ವಿಧಾನ ಪರಿಷತ್​ ಸದಸ್ಯ ಎನ್​.ರವಿಕುಮಾರ್​ ಹೇಳಿದರು.

ಶ್ರೀ ರಾಮ ಮಾರ್ಕೇಟ್​ನಲ್ಲಿ ಹಿಂದೂ ಮಹಾಗಣಪತಿ ಸಮಿತಿಯ 11ನೇ ವರ್ಷದ ಭವ್ಯ ಶೋಭಾಯಾತ್ರೆಗೆ ಭಾನುವಾರ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಾಲಗಂಗಾಧರ ತಿಲಕ್​ ಅವರು ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡುವ ಮೂಲಕ ಜನರಲ್ಲಿ ರಾಷ್ಟ್ರೀಯ ಪ್ರೆ ಹಾಗೂ ದೇಶಭಕ್ತಿ ಭಾವನೆ ಮೂಡಿಸಿದರು ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್​ ಮಾತನಾಡಿ, ಗಣೇಶ ಉತ್ಸವವೂ ಸರ್ವಧರ್ಮದವರನ್ನು ಒಗ್ಗೂಡಿಸುವುದರ ಜತೆಗೆ ಎಲ್ಲರಲ್ಲೂ ಸಹೋದರತೆ ಭಾವನೆ ಮೂಡಿಸುತ್ತದೆ ಎಂದು ಹೇಳಿದರು.

ಹಿಂದೂ ಮಹಾ ಗಣಪತಿ ಅಧ್ಯಕ್ಷ ಮಹೇಶ ಗೌಳಿ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಬಾಬಾ ಸಾಹೇಬ್​ ಪಾಟೀಲ್​, ಆನಂದ ಪಾಟೀಲ್​ ಕೊರಳಿ, ಸಂತೋಷ ಹಾದಿಮನಿ, ಸುಜ್ಞಾನಿ ಪೊದ್ದಾರ, ನಾಗನಾಥ ಏಟೆ, ಗಣೇಶ ಭೋಸಲೆ, ಶರಣು ಕುಂಬಾರ ಇತರರಿದ್ದರು.

ಬೃಹತ್​ ಮೆರವಣಿಗೆ

ಆಳಂದನಲ್ಲಿ ಹಿಂದೂ ಮಹಾಗಣಪತಿಯ ವಿಸರ್ಜನೆ ನಿಮಿತ್ತ ಭಾನುವಾರ ಅದ್ದೂರಿ ಮೆರವಣಿಗೆ ನಡೆಯಿತು. ಶ್ರೀರಾಮ ಮಾರ್ಕೆಟ್​ನಿಂದ ಶುರುವಾದ ಶೋಭಾಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಯುವಕರಿಂದ ದೇಶಭಕ್ತಿ ೂಷಣೆಗಳು ಮೊಳಗಿದವು. ಲೆಜಿಮ್​ ಹಾಗೂ ಭರತನಾಟ್ಯ ಪ್ರದರ್ಶಿಸಿ ಗಮನಸೆಳೆದರು. ಯಾವುದೇ ಅಹಿತಕರ ಟನೆ ನಡೆಯದಂತೆ ಸಿಪಿಐ ಜಗದೀಶ ಕೆ.ಜಿ ನೇತೃತ್ವದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಕಲ್ಪಿಸಲಾಗಿತ್ತು. 2 ಡಿವೈಎಸ್ಪಿ, 5 ಪಿಐ, ಸಿಪಿಐ, ಆರ್​ಪಿಐ, 7 ಪಿಎಸ್​ಐ, 83 ಎಚ್​ಸಿಪಿಸಿ, 30 ಗೃಹರಕ್ಷಕ ದಳವನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿತ್ತು.