ಹುಮನಾಬಾದ್​ ತಾಲೂಕಿನ ಹಳ್ಳಿಖೇಡ (ಬಿ)ದಲ್ಲಿ ವಿಶ್ವಕರ್ಮ ಸಮಾಜದಿಂದ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಮಾಜಿ ಸಚಿವ ರಾಜಶೇಖರ ಪಾಟೀಲ್​ ಉದ್ಘಾಟಿಸಿದರು. ಶ್ರೀ ಶ್ರೀನಿವಾಸ ಸ್ವಾಮೀಜಿ, ಮನೋಹರ ವಿಶ್ವಕರ್ಮ, ಕೇಶವರಾವ ತಳಘಟ್ಕರ್​, ಲಕ್ಷ$್ಮಣರಾವ ಬುಳ್ಳಾ, ಮಾಂತಯ್ಯ ತೀರ್ಥಾ, ಸಂತೋಷ ಪಾಟೀಲ್​, ನಾಗರಾಜ ಹಿಬಾರೆ, ಮಲ್ಲಿಕಾರ್ಜುನ ಪ್ರಭಾ, ರಾಘವೇಂದ್ರ ಪಂಚಾಳ ಇತರರಿದ್ದರು. 
ಕಲಬುರಗಿ

ಸಮಾಜದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರ

ಹುಮನಾಬಾದ್​: ಕಲೆ ಹಾಗೂ ಶಿಲ್ಪಕಲಾ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ವಿಶ್ವಕರ್ಮರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್​ ಹೇಳಿದರು.

ತಾಲೂಕಿನ ಹಳ್ಳಿಖೇಡ (ಬಿ)ದಲ್ಲಿ ವಿಶ್ವಕರ್ಮ ಸಮಾಜದಿಂದ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತು ಬೆರಗುಗೊಳ್ಳುವಂತಹ ದೇವಸ್ಥಾನಗಳು, ಶಿಲ್ಪಗಳು ಹಾಗೂ ಐತಿಹಾಸಿಕ ಸ್ಮಾರಕಗಳ ನಿಮಾರ್ಣದಲ್ಲಿ ವಿಶ್ವಕರ್ಮ ಸಮುದಾಯದವರ ಕಲೆ, ಕೌಶಲ ಮತ್ತು ಪರಿಶ್ರಮ ಸ್ಮರಣೀಯವಾಗಿದೆ. ಸಮಾಜಕ್ಕೆ ಅಗತ್ಯವಾದ ವಿವಿಧ ಉಪಕರಣಗಳು, ವಿಗ್ರಹಗಳು ಹಾಗೂ ಪೀಠೋಪಕರಣಗಳ ಸೃಷ್ಟಿಯ ಹಿಂದೆ ವಿಶ್ವಕರ್ಮರ ಕೊಡುಗೆ ಮಹತ್ವದ್ದಾಗಿದೆ ಎಂದರು.

ಸಮುದಾಯದವರು ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜತೆಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಭವಿಷ್ಯ ರೂಪಿಸಬೇಕು ಎಂದು ಸಲಹೆ ನೀಡಿದರು.

ವಿಶ್ವಕರ್ಮ ಏಕದಂಡಗಿ ಮಠದ ಪೀಠಾಧಿಪತಿ ಶ್ರೀ ಶ್ರೀನಿವಾಸ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು ಆಶೀರ್ವಚನ ನೀಡಿದರು.

ಪ್ರಮುಖರಾದ ಮನೋಹರ ವಿಶ್ವಕರ್ಮ, ಕೇಶವರಾವ ತಳಘಟ್ಕರ್​, ಲಕ್ಷ$್ಮಣರಾವ ಬುಳ್ಳಾ, ಮಾಂತಯ್ಯ ತೀರ್ಥಾ, ಸಂತೋಷ ಪಾಟೀಲ್​, ನಾಗರಾಜ ಹಿಬಾರೆ, ಮಲ್ಲಿಕಾರ್ಜುನ ಪ್ರಭಾ, ರಾಘವೇಂದ್ರ ಪಂಚಾಳ, ಸೋಮನಾಥ ಪಂಚಾಳ, ಉಮೇಶ ಜಮಗಿ, ದೇವರಾಜ ಪ್ರಭಾ, ಮುಬಿನ್​ ಸೌದಾಗರ, ಸುರೇಶ ಘಾಂಗ್ರೆ, ಶಿವಕುಮಾರ ಬೆಳಕೇರಾ, ಶಾಂತಕುಮಾರ ಅರಳಿ, ಸಂತೋಫಿ ಅತಿವಾಳ, ಶಿವಾನಂದ ಕಟ್ಟಿಮನಿ, ಶಂಕರನಾಗ ಸಾಹುಕಾರ, ಅರುಣ ಬಾವಗಿ, ಗುಂಡಾರೆಡ್ಡಿ ರಂಗಾರಡ್ಡಿ ಇತರರಿದ್ದರು.