gims convocation 
ಕಲಬುರಗಿ

ಸೇವೆಗೆ ಅತ್ಯುತ್ತಮ ಅವಕಾಶ ವೈದ್ಯಕಿಯ

ಪ್ರಮುಖ ಮುಖ್ಯಾಂಶಗಳು

  • ಡಾ.ಪಿ.ಎಸ್​.ಶಂಕರ ಹೇಳಿಕೆ
  • ಜಿಮ್ಸ್​ 2020ರ ಬ್ಯಾಚ್​ನ ಘಟಿಕೋತ್ಸವ
ಕಲಬುರಗಿ: ವೈದ್ಯರಿಗೆ ರೋಗಿಗಳ ಬಗ್ಗೆ ನಿರಂತರ ಕಾಳಜಿ, ಸಂಯಮ ಇರಬೇಕು. ವೈದ್ಯಕಿಯ ಕ್ಷೇತ್ರವೂ ನಿಸ್ವಾರ್ಥ ಸೇವೆ ಮಾಡಲು ಇರುವ ಅತ್ಯುತ್ತಮ ಅವಕಾಶವಾಗಿದ್ದು, ಇದನ್ನು ಪ್ರೀತಿಯಿಂದ ಮಾಡಬೇಕು ಎಂದು ನಾಡೋಜ, ಹಿರಿಯ ವೈದ್ಯ ಡಾ.ಪಿ.ಎಸ್​.ಶಂಕರ ಸಲಹೆ ನೀಡಿದರು.
ನಗರದ ಗುಲ್ಬರ್ಗ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್​) ಶನಿವಾರ ಏರ್ಪಡಿಸಿದ್ದ 2020ನೇ ಎಂಬಿಬಿಎಸ್​ ಬ್ಯಾಚ್​ನ (ಅಥರ್ವನ್ಸ್​ ) ಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇದೊಂದು ಅತ್ಯಂತ ಬಲಿಷ್ಠ, ಶಕ್ತಿಯುತ ಮಾರ್ಗವಾಗಿದೆ. ಸ್ಪಷ್ಟ ಗುರಿ, ಸೃಜನಶೀಲತೆ, ಸಂಯಮ, ಕಾಳಜಿ, ವೈದ್ಯ ವೃತ್ತಿಯ ಬಗ್ಗೆ ಪ್ರೀತಿ ಇರಬೇಕು ಎಂದು ಹೇಳಿದರು.
ರೋಗವನ್ನು ಕೂಲಂಕಷವಾಗಿ ಅರಿತು, ಪರಿಶೀಲಿಸಿ, ತಪಾಸಣೆ ನಡೆಸಿ, ಪೂರ್ವಾಪರ ಅರಿತು ಅತ್ಯಾಧುನಿಕ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಬೇಕು. ವೈದ್ಯರಾದವರು ರೋಗಿ, ನರ್ಸ್​, ರೋಗಿಯ ಪಾಲಕರು, ಆಸ್ಪತ್ರೆಯ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುವ ಜವಾಬ್ದಾರಿ ಇದೆ. ಕಾಲಕ್ಕೆ ತಕ್ಕಂತೆ ಬದಲಾಗುವ ಜ್ಞಾನವನ್ನು ಅರಿತು, ಕೌಶಲ ವೃದ್ಧಿಸಿಕೊಂಡು ಮುಂದಡಿ ಇಡಬೇಕು ಎಂದರು.
ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಅವರು ವಿಡಿಯೋ ಸಂದೇಶ ಕಳುಹಿಸಿ, ನಿಸ್ವಾರ್ಥ ಸೇವೆಯನ್ನು ಸಲ್ಲಿಸಬೇಕು. ವೈದ್ಯಕಿಯ ವೃತ್ತಿಯು ಜವಾಬ್ದಾರಿಯುತವಾಗಿದ್ದು, ಎಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಜಿಮ್ಸ್​ ನಿರ್ದೇಶಕ ಡಾ.ಉಮೇಶ ಎಸ್​.ಆರ್​., ವೈದ್ಯಕಿಯ ಅಧೀಕ್ಷಕ ಡಾ.ಶಿವಕುಮಾರ ಸಿ.ಆರ್​., ಪ್ರಾಂಶುಪಾಲ ಡಾ.ಅಜಯಕುಮಾರ ಜಿ., ಲೆಕ್ಕಶಾಕೆಯ ಭಾರತಿ, ಡಾ.ಉಷಾ ದೊಡ್ಡಮನಿ, ಡಾ.ಸಂದೀಪ, ಡಾ.ಚಂದ್ರಶೇಖರ ಕರಪೂರ, ಡಾ.ಗಿರೀಶ ದೇಸಾಯಿ, ಡಾ.ಪ್ರಿಯದರ್ಶಿನಿ ದೇವದುರ್ಗ, ಡಾ.ರೇಣುಕಾ ಮೆಳಕುಂದಿ, ಡಾ.ರೇವಣಸಿದ್ದಪ್ಪ ಭೋಸಗಿ, ಡಾ.ರಾನೋಜಿ ಮಾನೆ ಇತರರಿದ್ದರು.
156 ವಿದ್ಯಾರ್ಥಿಗಳಿಗೆ ಪದವಿ
ಜಿಮ್ಸ್​ ಆರನೇ ಟಿಕೋತ್ಸವದಲ್ಲಿ 2020ನೇ ಬ್ಯಾಚ್​ನ 156 ವಿದ್ಯಾರ್ಥಿಗಳಿಗೆ ಎಂಬಿಬಿಎಸ್​ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಭಾಗಗಳಲ್ಲಿ ಪ್ರಥಮ ರ್ಯಾಂಕ್​ ಪಡೆದ ಡಾ.ಜಾಹ್ನವಿ ಮಾನೆ, ಡಾ.ಮನೋಜ, ಡಾ.ಸುಮಯಾ ನಶೀನ್​, ಡಾ.ಸೈಯದಾ ನಸ್ರೀನ್​ ಾತಿಮಾ, ಡಾ.ವಿಶ್ವಾಸ ರಡ್ಡಿ ಸೇರಿ ಹಲವು ಪದವಿದರರಿಗೆ ಟಾಪರ್​ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೋಟ್​
ಚರಕ ಹೇಳಿದಂತೆ ಹಣಕ್ಕಾಗಿ ಅಲ್ಲ ಜೀವ ಉಳಿಸುವ ಮಹತ್ಕಾರ್ಯವಾಗಿದ್ದು, ರೋಗಿಯ ಬಗ್ಗೆ ಸಹಾನುಭೂತಿ ಹೊಂದಿರಬೇಕು. ಜೀವಿಗಳ ಉಳಿಸುವ, ರಕ್ಷಣೆಯ ಈ ಕಾರ್ಯವೂ ಎಲ್ಲ ಧರ್ಮಕ್ಕಿಂತ ಶ್ರೇಷ್ಠವಾದದ್ದು. ಸೇವೆಯಲ್ಲಿ ಸಂತೃಪ್ತಿ ಸಾಧಿಸಿದಾಗ ನೆಮ್ಮದಿ ಸಾಧ್ಯ.
> ಡಾ.ಪಿ.ಎಸ್​.ಶಂಕರ
ಹಿರಿಯ ವೈದ್ಯರು
ಡಾ.ಸೃಷ್ಟಿ ಶಾಸ್ತ್ರಿ ಟಾಪರ್​
ನಗರದ ಪಿ ಆ್ಯಂಡ್​ ಟಿ ನಿವಾಸಿ ಡಾ.ಸೃಷ್ಟಿ ಶಾಸ್ತ್ರಿ ಅವರು ಏಳು ವಿಷಯಗಳಲ್ಲಿ ರ್ಯಾಂಕ್​ ಪಡೆದು, ಜಿಮ್ಸ್​ಗೆ ಸಮಗ್ರ ಟಾಪರ್​ ಆಗಿ ಹೊರಹೊಮ್ಮಿದರು. ಸೃಷ್ಟಿ ಶಾಸ್ತ್ರಿ ಅವರ ತಂದೆ ಶಿವಕುಮಾರ ಉದ್ಯಮಿಯಾಗಿದ್ದು, ತಾಯಿ ಸರಳಾ ಶಾಸ್ತ್ರಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ನಗರದ ಗುರುಕುಲ ಕಾಲೇಜಿನಲ್ಲಿ ಓದಿದ್ದು, ಪಿಯುಸಿಯಲ್ಲೂ ಶೇ.97 ಅಂಕ ಪಡೆದಿದ್ದರು. ಇದೀಗ ಜಿಮ್ಸ್​ನಲ್ಲಿ ಮೂರು ವರ್ಷ ಸತತ ಟಾಪರ್​ ಆಗಿದ್ದು, ಅಂತಿಮ ಸೆಮ್​ನಲ್ಲಿ ಅನಾಟೊಮಿ, ಫಿಸಿಯೋಲಾಜಜಿ, ಪ್ಯಾಥೋಲಾಜಿ, ಮೆಡಿಸಿನ್​, ಇಎನ್​ಟಿ, ೋರೆನ್ಸಿಕ್​, ಆಥೋರ್ಪೆಡಿಕ್ಸ್​ ಸೇರಿ ಒಟ್ಟು 7 ವಿಷಯದಲ್ಲಿ ರ್ಯಾಂಕ್​ ಪಡೆದು, ಟಾಪರ್​ ಆಗಿದ್ದಾರೆ. ಶ್ರೀ ರಾವೇಂದ್ರ ಮೇಳಕುಂದಿ ಅವರ ಸ್ಮರಣಾರ್ಥ ನೀಡುವ 10 ಸಾವಿರ ರೂ. ಪ್ರಶಸ್ತಿಯನ್ನು ಬಾಚಿಕೊಂಡರು.