Murder 
ಕಲಬುರಗಿ

ಮಾಜಿ ಸೈನಿಕನ ಬರ್ಬರ ಕೊಲೆ

ಕಲಬುರಗಿ: ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ ಮಾಜಿ ಸೈನಿಕನನ್ನು ಕಬ್ಬಿಣದ ರಾಡ್​, ಕಲ್ಲಿನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಟನೆ ನಗರದ ರಾಮ ಮಂದಿರದ ಬಳಿ ಭಾನುವಾರ ನಡೆದಿದೆ.
ಮೂಲತ@ ಆಳಂದ ತಾಲೂಕಿನ ಹಡಲಗಿ ಗ್ರಾಮದ, ಪ್ರಸ್ತುತ ನಗರದ ರಾಣೇಶ ಪೀರ್​ ದರ್ಗಾದ ಬಳಿ ನಿವಾಸಿ ರವಿಚಂದ್ರ ಖೇಡ (45) ಕೊಲೆಯಾದವ. ಶಹಾಬಾದ್​ ಹತ್ತಿರದ ಇಂಡಿಯನ್​ ಆಯಿಲ್​ ಪೆಟ್ರೋಲ್​ ಬಂಕ್​ನಲ್ಲಿ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಶನಿವಾರ ರಾತ್ರಿ ಬೇರೆ ಕಡೆ ಹೆಚ್ಚುವರಿ ಕೆಲಸವಿದೆ ಎಂದು ಮನೆಯಿಂದ ಹೊರ ಬಂದಿದ್ದು, ಭಾನುವಾರ ಬೆಳಗ್ಗೆ ಕೊಲೆಯಾದ ಮಾಹಿತಿ ತಿಳಿದು ಬಂದಿದೆ. ಖಾಸಗಿ ಸ್ಥಳದಲ್ಲಿ ದುಷ್ಕರ್ಮಿಗಳು ರವಿಚಂದ್ರ ಅವರ ತಲೆಗೆ ಕಬ್ಬಿಣದ ರಾಡ್​ನಿಂದ ಬಲವಾಗಿ ಜಜ್ಜಿ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ., ಡಿಸಿಪಿ ಶಾಲೂ, ಎಸಿಪಿ ಶರಣಪ್ಪ ಸುಬೇದಾರ, ಪಿಐ ಗುರುಲಿಂಗಪ್ಪಗೌಡ ಪಾಟೀಲ್​ ಸೇರಿ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸ್ಟೇಷನ್​ ಬಜಾರ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತರಿಂದಲೇ ಕೊಲೆ?: ರವಿಚಂದ್ರನ್​ ಸ್ನೇಹಿತರೇ ಕೊಲೆ ಮಾಡಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ಸೈನ್ಯದಿಂದ ಬಂದಿದ್ದ ರವಿಚಂದ್ರನ್​: ನಾಲ್ಕು ವರ್ಷದ ಹಿಂದೆ ಬಿಎಸ್​ಎ್​ ಕರ್ತವ್ಯದಿಂದ ಮುಕ್ತರಾಗಿ ಕಲಬುರಗಿಗೆ ಆಗಮಿಸಿ, ನಗರದಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದರು. ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದರು. ವಿವಾದಿತ ಸ್ಥಳದಲ್ಲಿ ಕೊಲೆ ನಡೆದಿದ್ದು, ಹಲವು ಅನುಮಾನಗಳನ್ನು ಮೂಡಿಸಿದೆ. ಕೊಲೆ ಸ್ಥಳದಲ್ಲಿ ರವಿಚಂದ್ರನ್​ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.