ಕಲಬುರಗಿಯಲ್ಲಿ ಉಗ್ರರ ಜೊತೆ ಸಂಪರ್ಕ ಹೊಂದಿದ ಶಂಕಿತ ವಶಕ್ಕೆ 
ಕಲಬುರಗಿ

ಕಲಬುರಗಿಯಲ್ಲಿ ಉಗ್ರ ನಂಟು ಹೊಂದಿದವ ವಶಕ್ಕೆ

ಕಲಬುರಗಿ: ನಗರದ ಹೃದಯ ಭಾಗದಲ್ಲಿರುವ ಸರಾಫ್ ಬಜಾರ್​ನ ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತ ಉಗ್ರರೊಂದಿಗೆ ಸಂಪರ್ಕ ಹೊಂದಿದ ಶಂಕಿತನೊಬ್ಬನನ್ನು ಕೇಂದ್ರೀಯ ಗುಪ್ತಚರ ಸಂಸ್ಥೆ, ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಶನಿವಾರ ವಶಕ್ಕೆ ಪಡೆದಿದ್ದಾರೆ.. ಪಶ್ಚಿಮ ಬಂಗಾಳ ಮೂಲದ ​ ಮಲೀಕ್​ ಬಂಧಿತ ಆರೋಪಿ.

ಭಯೋತ್ಪಾದಕ ಸಂಟನೆ ಲಷ್ಕರ್​ ಇ ತಯ್ಯಬಾದ ಉಗ್ರರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಹೊಂದಿದ್ದ ಎಂಬ ಆಧಾರದ ಮೇಲೆ ಕೇಂದ್ರೀಯ ಗುಪ್ತಚರ ಸಂಸ್ಥೆ ಅಧಿಕಾರಿಗಳು, ನಗರ ಪೊಲೀಸರು ನಿಗಾ ಇಟ್ಟಿದ್ದು, ಪರಿಶೀಲನೆ ಬಳಿಕ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಸರ್​ಾ ಬಜಾರ್​ನಲ್ಲಿ ಚಿನ್ನಾಭರಣ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಮಮ್ತಾಜ್​ವುಲ್​ ಮಲೀಕ್​ ಬಂಧಿತ ಶಂಕಿತ. ಸಹೋದರನ ಜತೆಗೆ ಕಳೆದ ಎರಡು ವರ್ಷದಿಂದ ನಗರದಲ್ಲಿ ಚಿನ್ನಾಭರಣ ಅಂಗಡಿಯಲ್ಲಿ ಆಭರಣ ತಯಾರಿಕೆ ಕೆಲಸ ಮಾಡುತ್ತಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಲಷ್ಕರ್​ ಇ ತಯ್ಯಬಾದ ಖಾತೆದಾರರೊಂದಿಗೆ ಸಂಪರ್ಕ ಹೊಂದಿದ್ದ. ಹಲವು ಮಹತ್ವದ ವಿಷಯಗಳನ್ನು ಮೆಸೇಜ್​ ಮೂಲಕ ಹಂಚಿಕೊಂಡಿದ್ದ ಎಂದು ತಿಳಿದು ಬಂದಿದೆ. ಬ್ರಹ್ಮಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಎರಡು ತಿಂಗಳಲ್ಲೇ ಮತ್ತೊಬ್ಬ ಪತ್ತೆ: ಆಗಸ್ಟ್​ನಲ್ಲಿ ಕಲಬುರಗಿ ಹೊರವಲಯದ ಮಾಲಗತ್ತಿ ಬಳಿಯ ಕಸಾಯಿ ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲಕ ಮೊಹ್ಮದ್​ ಸಮೀರ್​ ಎಂಬಾತನನ್ನು ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಕ್ಕೆ ಬಂಧಿಸಲಾಗಿತ್ತು. ಇದೀಗ ಮತ್ತೊಬ್ಬ ಶಂಕಿತನನ್ನು ಬಂಧಿಸಲಾಗಿದೆ.