ಕಲಬುರಗಿ

ಐ ಲವ್ ಪಾಕಿಸ್ತಾನ: ಪಾಕ್ ಉಗ್ರರ ಕಮಾಂಡರ್ ಜತೆ ಸಂಪರ್ಕ: ಕಲಬುರಗಿಯಲ್ಲಿ ಸೆರೆಸಿಕ್ಕ ಶಂಕಿತ ಡೇಂಜರ್ ಲಿಂಕ್

ಕಲಬುರಗಿ: ನಗರದ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದ ಶಂಕಿತನ ತನಿಖೆ ವೇಳೆ ಆಘಾತಕಾರಿ ಅಂಶಗಳು ಬಹಿರಂಗವಾಗಿದ್ದು, ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತಯ್ಯಬಾ ಕಮಾಂಡರ್ ಜೊತೆ ಸಂಪರ್ಕದಲ್ಲಿ ಇರುವುದಲ್ಲದೇ ಐ ಲವ್ ಪಾಕಿಸ್ತಾನ, ಐ ಲವ್ ಕಾಶ್ಮೀರ ಪೋಸ್ಟ್ ಹಾಕುವ ಮೂಲಕ ಪಾಕಿಸ್ತಾನ ಪ್ರೇಮ ಮೆರೆದಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದಾನೆ ಎಂಬ ಶಂಕೆ ಮೇರೆ ಕೇಂದ್ರ ಗುಪ್ತಚರ ಇಲಾಖೆ, ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳದ ಮುಮ್ತಾಜುಲ್ ಮಲೀಕ್ ನನ್ನು ಬಂಧಿಸಲಾಗಿತ್ತು.

ವಿಚಾರಣೆ ವೇಳೆ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಮಲೀಕ್ ಮೊಬೈಲ್ ನಲ್ಲಿ ಅನ್ಸರ್ ಇಕ್ವಾನ್ ಎಂಬ ಇನ್ ಸ್ಟಾಗ್ರಾಮ್ ಖಾತೆ ಮೂಲಕ ಲಷ್ಕರ್ ಇ ತಯ್ಯಬಾ ಸಂಘಟನೆಯ ಮೇಜರ್ ಇಕ್ಬಾಲ್ ಐಎಸ್ ಐ ಎಂಬಾತನ ಖಾತೆಗೆ ಫಾಲೋ, ಲೈಕ್ ಮಾಡಿದ್ದು, ಪಾಕ್ ಪ್ರೇಮಿ ವಿಷಯಗಳನ್ನು ಹಂಚಿಕೊಂಡಿದ್ದ ಎಂದು ತಿಳಿದು ಬಂದಿದೆ.

ಪಾಕಿಗಳ ವಾಟ್ಸಾಪ್ ಗ್ರೂಪ್ ಸದಸ್ಯ: ಮಲೀಕ್ ನೂ ಪಾಕಿಸ್ತಾನದ ಸಂಖ್ಯೆಗಳಿರುವ ಇಮಾಮ್ ಮೇಂದಿ ಹಾಗೂ ಮತ್ತೊಂದು ಉರ್ದು ಹೆಸರಿನ ಗ್ರೂಪ್ ನ ಸದಸ್ಯನಾಗಿ ದೇಶವಿರೋಧಿ ವಿಷಯಗಳಿಗೆ ಬೆಂಬಲಿಸುತ್ತಿದ್ದ.

ಲಷ್ಕರ್ ತಯ್ಯಬ್ಬಾ ಕಮಾಂಡರ್ ಸಂಪರ್ಕ: ಮಲೀಕ್ ನನ್ನು ಪಾಕಿಸ್ತಾನದ ಲಷ್ಕರ್ ಇ ತಯ್ಯಬ್ ಸಂಘಟನೆಯ ಕಮಾಂಡರ್ ಜೈನುಲುದ್ದೀನ್ ಅಬೀನ್ ನನು ವಾಟ್ಸಾಪ್ ಗ್ರೂಪ್ ಗೆ ಸೇರಿಸಿದ್ದ ಎಂದು ಮಲೀಕ್ ತಿಳಿಸಿದ್ದಾನೆಂದು ತಿಳಿದು ಬಂದಿದ್ದು, ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.