- ಗುಲ್ಬರ್ಗ ವಿವಿ ಠಾಣೆಯಲ್ಲಿ ಪ್ರಕರಣ ದಾಖಲು
- ಹಿಂಸಾತ್ಮಕವಾಗಿ ಕಟ್ಟಿಕೊಂಡು ಸಾಗುತ್ತಿದ್ದ ಘಟನೆ
ಕಲಬುರಗಿ: ಅತ್ಯಂತ ಕ್ರೂರ ಮತ್ತು ಹಿಂಸಾತ್ಮಕವಾಗಿ ಕಟ್ಟಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಹತ್ತು ಗೋವುಗಳನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ರಸಿ, ಪ್ರಕರಣ ದಾಖಲಿಸಿದ್ದಾರೆ. ಶುಕ್ರವಾರ ತಡರಾತ್ರಿ ಠಾಣೆ ಪೊಲೀಸರು ಪೆಟ್ರೋಲಿಂಗ್ನಲ್ಲಿದ್ದಾಗ ಬಂದ ಮಾಹಿತಿಯಂತೆ ಬುಲೇರೋ ಪಿಕಪ್ ವಾಹನವನ್ನು ತಡೆದಿದ್ದು, ಅದರಲ್ಲಿ ಅಂದಾಜು ನಾಲ್ಕು ಲಕ್ಷ ಮೌಲ್ಯದ ಆಕಳು, ಹೋರಿ, ಮಣಕಾ ಸೇರಿ ಒಟ್ಟು ಹತ್ತು ಗೋವುಗಳನ್ನು ಬಿಗಿಯಲಾಗಿತ್ತು.
ಚಾಲಕನ್ನು ವಿಚಾರಿಸಿದ ಗೋವುಗಳನ್ನು ಸಣ್ಣೂರ ಗ್ರಾಮದಲ್ಲಿ ಖರೀದಿಸಿ ತೆಗೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಈ ಕುರಿತು ಸೂಫಿ ಬಾಬಾ, ಮಾಲನಬಿ ಸೂಫಿಬಾಬಾ, ಮಹ್ಮದ್ ಅನಾನ್, ಶೇಖ್ ಮಹ್ಮದ್ ಮುಸ್ತಾ ವಿರುದ್ಧ ಪ್ರಕರಣ ದಾಖಲಾಗಿದೆ. ಬಜರಂಗದಳ ಕಾರ್ಯಕರ್ತರು ಗೋವುಗಳ ರಕ್ಷಣೆಯಲ್ಲಿ ಕೈ ಜೋಡಿದ್ದಾರೆ ಎಂದು ತಿಳಿದು ಬಂದಿದೆ.