ಚಿತ್ತಾಪುರ: ದೇಶದ ಭವಿಷ್ಯ ರೂಪಿಸುವ ಸಾಮರ್ಥ್ಯ ಶಿಕ್ಷಕರ ಕೈಯಲ್ಲಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಯನ್ನಾಗಿಸಬೇಕು ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.
ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ರಾಜ್ಯ ಸರ್ಕಾರಿ, ಅನುದಾನಿತ ಪ್ರಾಥಮಿಕ, ಪದವಿಧರ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ, ಮುಖ್ಯಗುರುಗಳ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ 2026-27ನೇ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ತಮ್ಮ ಮನಃ ಪರಿವರ್ತನೆ ಮಾಡಿಕೊಂಡಾಗ ಮಾತ್ರ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಲು ಸಾಧ್ಯ. ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಆದಪ್ಪ ಸಜ್ಜನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಟಿಎಪಿಸಿಎಂಎಸ್ ಅಧ್ಯಕ್ಷ ದೇವಿಂದ್ರ ಅರಣಕಲ್ ಮಾತನಾಡಿದರು.
ಮುಖಂಡ ರಾಜಶೇಖರ ತಿಮ್ಮನಾಕ, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರ ಡಾಂಗೆ, ಗ್ರೇಡ್&1 ದೈಹಿಕ ಶಿಕ್ಷಕರ ಸಂದ ಅಧ್ಯಕ್ಷ ದೇವಿಂದ್ರರೆಡ್ಡಿ ದುಗನೂರ, ಪ್ರಮುಖರಾದ ರಾಜೇಂದ್ರ ಪ್ರಸಾದ, ಚಂದ್ರಾಮ ಅಮ್ಮನಗಡೆ, ಸ್ವರ್ಣಲತಾರೆಡ್ಡಿ ದುಗನೂರ, ರಮೇಶ ಬಟಗೇರಿ, ಸುರೇಶ ಸರಾಫ, ವೀರೇಶ ಮಕಾಪ್, ಅರುಣಕುಮಾರ ಚೆಂಚನಸೂರ, ಶರಣಪ್ಪ ಐಕೂರ, ಬುದ್ದಪ್ರಿಯಾ ಕೋಮಟೆ, ಹೀರಾಲಾಲ್ ರಾಠೋಡ್, ಸೊಂದಪ್ಪ ಬಬಲಾದ, ಶರಣಪ್ಪ ಕಟ್ಟಿ, ಲಾಲ್ಅಹ್ಮದ್, ಅಪ್ಪಯ್ಯ ಹಿರೇಮಠ, ವೆಂಕಟೇಶ ಕೆ., ಕರಣಪ್ಪ ಕಟ್ಟಿಮನಿ, ಸದಾಶಿವ ದೊಡ್ಡಮನಿ ಇತರರಿದ್ದರು. ಶಿವಲೀಲಾ ಕಲಗುರ್ಕಿ ಪ್ರಾರ್ಥಿಸಿದರು. ಆದಪ್ಪ ಬಗಲಿ ಸ್ವಾಗತಿಸಿದರು. ಮಹಾಂತೇಶ ನಿರೂಪಣೆ ಮಾಡಿದರು. ಸಾಧಕ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.