kuruba community 
ಕಲಬುರಗಿ

ಅಲ್ಪತೃಪ್ತಿಯ ದೊಡ್ಡ ರೋಗ ದೂರಾಗಲಿ: ಕುರುಬ ಸಮಾಜದ ಪ್ರತಿಭಾವಂತರಿಗೆ ಸಮ್ಮಾನ

ಪ್ರಮುಖ ಮುಖ್ಯಾಂಶಗಳು

  • ಕುರುಬ ಸಮಾಜದ ಪ್ರತಿಭಾ ಪುರಸ್ಕಾರ
ಕಲಬುರಗಿ: ಅಲ್ಪತೃಪ್ತಿ ಬಹುದೊಡ್ಡ ರೋಗವಾಗಿದ್ದು, ನಮ್ಮಲ್ಲಿ ಪೇದೆ, ಶಿಕ್ಷಕ, ಎಸ್​ಡಿಎ ಆದರೆ ಸಾಕು ಎನ್ನುವ ಅಲ್ಪ ಕನಸುಗಳಿದ್ದು, ಅದರಿಂದ ಹೊರ ಬಂದು ದೊಡ್ಡ ಕನಸು ಕಾಣಬೇಕು. ಐಎಎಸ್​ ತಯಾರಿ ಮಾಡಿದರೆ ಸಣ್ಣಪುಟ್ಟ ಪರೀೆಗಳು ಎದುರಿಸಲು ಸರಳವಾಗುತ್ತವೆ ಎಂದು ಇನ್​ಸೈಟ್​ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ವಿನಯಕುಮಾರ ಜಿ.ಬಿ.ಹೇಳಿದರು.
ನಗರದ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಪ್ರದೇಶ ಕುರುಬ ಗೊಂಡ ಸಂ ಹಾಗೂ ಕುರುಬಗೊಂಡ ನೌಕರರ ಸಂದಿಂದ ಭಾನುವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೊಚ್ಚಿಗೆದ್ದು ಪುಸ್ತಕ ಓದಬೇಕು. ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಯಾರು ಜಾಸ್ತಿ ಮಾಡಿಕೊಳ್ಳುತ್ತಾರೋ ಅವರಿಗೆ ಅವಕಾಶ ದೊರೆಯುತ್ತದೆ. ಉತ್ತಮ ಸಂಸ್ಥೆ ಆಯ್ಕೆ ಮಾಡಿಕೊಳ್ಳಿ. ಯುಪಿಎಸ್ಸಿ ಪಾಸ್​ ಆಗಲು ಓದುವ ಹವ್ಯಾಸ ಮೂಡಿಸಿಕೊಳ್ಳಬೇಕು. ನಿತ್ಯ ಪುಸ್ತಕ, ಪತ್ರಿಕೆಗಳನ್ನು ಓದಬೇಕು ಎಂದರು.
ಹಿಂದುಳಿದ ಸಮಾಜದವರಲ್ಲಿ ಅಸೂಯೆ ದೂರವಾಗಬೇಕು. ವೇದಿಕೆಗಳು ಸಿಗಲಿಲ್ಲವೆಂದರೆ ನಾಯಕತ್ವ ಸೃಷ್ಟಿಯಾಗುವುದಿಲ್ಲ. ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಬೇಕು. ದೊಡ್ಡ ಸಮಾಜದವರಿಗೆ ಮನವರಿಕೆ ಮಾಡಿ, ನಮ್ಮ ಅವಕಾಶವನ್ನು ಪಡೆಯಬೇಕು ಎಂದರು.
ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಮಾತನಾಡಿ, ಮಕ್ಕಳಿಗೆ ಪ್ರೋತ್ಸಾಹ ಅಗತ್ಯವಿದೆ. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ ತೀವ್ರವಾಗಿದ್ದು, ಮಕ್ಕಳಿಗೆ ಒತ್ತಡ ಜಾಸ್ತಿ ಇದೆ. ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಮದ್ದಾಗಿದೆ. ಯಾವುದೇ ಆಸ್ತಿ ಗಳಿಕೆಗೆ ಶಿಕ್ಷಣವೇ ಅಸ್ತ್ರವಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳು ನವೋದ್ಯಮ ಮಾಡಲು ಹಣ, ಪ್ರೋತ್ಸಾಹ ನೀಡುತ್ತಿದ್ದು, ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್​ ಮಾತನಾಡಿ, ಹಿಂದಿನ ಕಾಲದಲ್ಲಿ ಶಾಲೆ ಕಲಿಯದೇ ಕಾಳಿದಾಸ, ಕನಕದಾಸರಂತ ಜ್ಞಾನಿಗಳು ಕುರುಬ ಸಮಾಜದಲ್ಲಿ ಇದ್ದರು. ಇದೇ ಸಮಾಜದ ಸಿದ್ದರಾಮಯ್ಯ ಇಡೀ ದೇಶಕ್ಕೆ ಮಾದರಿಯಾದ ಆಡಳಿತ ನೀಡಿದರು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಸಾಮಾಜಿಕ ಕಳಕಳಿ ಇರುವ ವ್ಯಕ್ತಿ ಚುಕ್ಕಾಣಿ ಹಿಡಿದಿದ್ದಕ್ಕೆ ಸಮಾಜದ ಶಿಕ್ಷಣಕ್ಕೆ ಬಲ ಬಂದಿದೆ ಎಂದರು.
ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಮಾತನಾಡಿ, ಶಿಕ್ಷಣವೇ ಅಸ್ತ್ರ ಮಾಡಿ ಅತ್ಯುನ್ನತ ಸ್ಥಾನ ಪಡೆದು ಮುಂದೆ ಸಾಗಬೇಕು. ದೊಡ್ಡ ದೊಡ್ಡ ಹುದ್ದೆಗೆ ಏರಬೇಕು. ಕುರುಬ ಸಮಾಜದ ಸಂಟನೆ ಗಟ್ಟಿಯಾಗಿ ಬೆಳೆಯಬೇಕು ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಿಂಡಿಕೇಟ್​ ಸದಸ್ಯ ಮಹಾಂತೇಶ ಕೌಲಗಿ ಮಾತನಾಡಿ, ಕುರುಬ ಸಮಾಜದವರಿಗೆ ಜಿಲ್ಲೆಯಲ್ಲಿ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂದರು.
ಶ್ರೀ ಲಿಂಗಬೀರದೇವರು ಸಾನ್ನಿಧ್ಯ ವಹಿಸಿದ್ದರು. ಎಂಎಲ್​ಸಿ ಜಗದೇವ ಗುತ್ತೇದಾರ, ಕುರಿ ಉಣ್ಣೆ ನಿಗಮದ ದೇವಿಂದ್ರಪ್ಪ ಮರತೂರ, ಪ್ರದೇಶ ಕುರುಬಗೊಂಡ ಸಮಾಜದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಪ್ರಮುಖರಾದ ಮಹಾಂತೇಶ ಕೌಲಗಿ, ಭಗವಂತರಾಯ ಪಾಟೀಲ್​, ಈರಣ್ಣ ಝಳಕಿ, ಮಲ್ಲಿಕಾರ್ಜುನ ಪೂಜಾರಿ ಭಂಕೂರ, ಗಣಪತಿ ಮಿಣಜಗಿ, ಈರಣ್ಣ ಆಶಾಪುರ, ರಮೇಶ ದೊಡ್ಡಮನಿ, ಕೃಷ್ಣಾ ರಡ್ಡಿ, ಬೈಲಪ್ಪ ನೆಲೋಗಿ, ರೇವಣಸಿದ್ದಪ್ಪ ಸಾತನೂರ, ಸಿಎಲ್​ ರವಿಕುಮಾರ, ಸುಭಾಷ ರಾಠೋಡ, ಸಂಗೀತಾ ಕೆ.ಪೂಜಾ ಇತರರಿದ್ದರು. ಯಲಗೊಂಡ ಹಿರೇಕುರುಬ ಸ್ವಾಗತಿಸಿದರು.