ಕಲಬುರಗಿ: ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಕಲಬುರಗಿಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ (ಕೃಷಿ) ಓದುತ್ತಿರುವ ವಿದ್ಯಾರ್ಥಿಗಳ ಕೃಷಿ ಗ್ರಾಮೀಣ ಕಾರ್ಯಾನುಭವ ಶಿಬಿರ ಜರುಗಿತು.
ಶಿಬಿರ ಉದ್ಘಾಟಿಸಿದ ಪ್ರಗತಿಪರ ರೈತ ಶರಣಗೌಡ ಅಣ್ಣಾರಾವ ಪಾಟೀಲ್ ಮಾತನಾಡಿ, ಅವೈಾನಿಕ ಕೃಷಿಯಿಂದ ವೈಾನಿಕ ಕೃಷಿಯ ಕಡೆಗೆ ಸಾಗಬೇಕು ಎಂದರು.
ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಬಿ.ಎಂ.ದೊಡ್ಡಮನಿ ಮಾತನಾಡಿ, ಕೃಷಿ ವಿದ್ಯಾರ್ಥಿಗಳಿಗೆ ಕೇವಲ ತರಗತಿಯ ಪಠ್ಯ ಾನವಷ್ಟೇ ಸಾಲದು, ಗ್ರಾಮೀಣ ಭಾಗದ ನೈಜ ಪರಿಸ್ಥಿತಿ ಮತ್ತು ರೈತರು ಎದುರಿಸುತ್ತಿರುವ ಕೃಷಿ ಸವಾಲು ಪ್ರಾಯೋಗಿಕವಾಗಿ ಅರ್ಥ ಮಾಡಿಕೊಳ್ಳಲು ರಾಯಚೂರು ಕೃಷಿ ವಿಶ್ವವಿದ್ಯಾಲಯ ಈ ಶಿಬಿರ ಆಯೋಜಿಸುತ್ತಿದೆ.ವಿದ್ಯಾರ್ಥಿಗಳು ಗ್ರಾಮದಲ್ಲಿ ತಂಗುವ ಅವಧಿಯಲ್ಲಿ ಆಧುನಿಕ ತಂತ್ರಾನ ಹಾಗೂ ವೈಾನಿಕ ಕೃಷಿ ಪದ್ಧತಿ ರೈತರಿಗೆ ತಲುಪಿಸುವ ಮೂಲಕ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾಲೇಜಿನ ಬೋಧಕರಾದ ಡಾ.ಸಂಜೀವ ಬೆಲ್ಲದ, ಡಾ.ಸಿದ್ಧರಾಮ ಯಾಳವಾರ ಮತ್ತು ಡಾ.ಮಹಾಂತೇಶ ಜೋಗಿ ತೋಟಗಾರಿಕೆ ಬೆಳೆಗಳ ಮಹತ್ವದ ಕುರಿತು ಮಾತನಾಡಿದರು. ಭೈರಾಮಡಗಿ ಗ್ರಾಪಂ ಮಾಜಿ ಅಧ್ಯ ಈರಣ್ಣ ಬಿರಾದಾರ, ಶಿವಾನಂದ ಪೊಲೀಸ್ ಪಾಟೀಲ್ ಇತರರಿದ್ದರು. ಶಿಬಿರದ ವಿದ್ಯಾರ್ಥಿ ಅಭಿಷೇಕ್ ಕುಲಕರ್ಣಿ ನಿರೂಪಿಸಿದರು. ಭಾಗ್ಯಲಕ್ಮಿ ಸ್ವಾಗತಿಸಿದರು. ಡಿ.ನವೀನ್ ಪ್ರಾಸ್ತಾವಿಕ ಮಾತನಾಡಿದರು. ಕಾವೇರಿ ವಂದಿಸಿದರು.
ಕೃಷಿ ಕಾಲೇಜಿನ ಪ್ರಾಧ್ಯಾಪಕರು ಮಾತನಾಡಿ, ಶಿಬಿರದ ಮುಖ್ಯ ಉದ್ದೇಶಗಳಾದ ಮಣ್ಣಿನ ಪರೀೆ, ಸಮಗ್ರ ಕೀಟ ನಿರ್ವಹಣೆ ಮತ್ತು ಕೃಷಿ ಆರ್ಥಿಕತೆಯ ಸುಧಾರಣೆ ಕುರಿತು ವಿದ್ಯಾರ್ಥಿಗಳು ರೈತರೊಂದಿಗೆ ಹೇಗೆ ಕೆಲಸ ಮಾಡಲಿದ್ದಾರೆ ಎಂಬುದನ್ನು ವಿವರಿಸಿದರು. ಭೈರಾಮಡಗಿ ಗ್ರಾಮದ ಹಿರಿಯ ಪ್ರಗತಿಪರ ರೈತರು ಮಾತನಾಡಿ, ನಮ್ಮ ಗ್ರಾಮಕ್ಕೆ ಕೃಷಿ ವಿದ್ಯಾರ್ಥಿಗಳು ಆಗಮಿಸಿರುವುದು ಸಂತಸ ತಂದಿದೆ. ಇವರಿಂದ ಹೊಸ ತಂತ್ರಾನ ಕಲಿಯಲು ನಾವು ಉತ್ಸುಕರಾಗಿದ್ದೇವೆ ಎಂದರು. ಶಿಬಿರಾರ್ಥಿ ವಿದ್ಯಾರ್ಥಿಗಳು ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮದ ಪ್ರತಿ ಕೃಷಿ ಕುಟುಂಬದೊಂದಿಗೆ ಬೆರೆತು, ಅವರ ಸಮಸ್ಯೆ ಆಲಿಸಿ ಕೃಷಿ ವಿಸ್ತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.