PSI siddann 
ಕಲಬುರಗಿ

ಟೇಲರ ಸಿದ್ದಣ್ಣನ ಪುತ್ರ ಇದೀಗ ಪಿಎಸ್ಐ

ರಮೇಶ ಮೇಳಕುಂದಾ
ಚಿಂಚೋಳಿ: ಪಟ್ಟಣದ ಚಂದಾಪೂರದ ಸಿದ್ದಣ್ಣ ಶಿವಪ್ಪ ಎನ್ನುವವರು ಟೇಲರ ವೃತ್ತಿಯಲ್ಲಿಯೇ ತನ್ನ ಕುಟುಂಬ ನಿರ್ವಹಣೆಯೊಂದಿಗೆ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡುವ ಮೂಲಕ ಬಡತನದಲ್ಲಿಯೇ ಬದುಕು ಕಟ್ಟಿಕೊಂಡ ಕುಟುಂಬದಲ್ಲಿ ಹಿರಿಯ ಪುತ್ರ ರಾಜೇಂದ್ರ ಪಾಟೀಲ್ ಅವರು ಸರಕಾರಿ ಶಾಲೆಯಲ್ಲಿಯೇ ಶಿಕ್ಷಣ ಪಡೆದು ದೇಶ ಸೇವೆಗಾಗಿ ಆರ್ಮಿಯಲ್ಲಿ 18 ವರ್ಷ ಸೇವೆ ಸಲ್ಲಿಸಿದರು.
ಇದೀಗ ನಿರಂತರವಾಗಿ ಛಲ ಬಿಡದೆ ಸರಕಾರಿ ಹುದ್ದೆ ಪಡೆಯಬೇಕು ಎಂದು ಹಗಲಿರುಳು ಅಭ್ಯಾಸ ಮಾಡಿದ್ದು, 8 ಸರಕಾರಿ ಹುದ್ದೆಗಳಿಗೆ ಪರಿಕ್ಷೆ ಬರೆದು ಪಾಸಾಗಿದ್ದು, ಇದರಲ್ಲಿ ಕಂದಾಯ, ಆರ್ಥಿಕ ಸಂಖಾಕಿಕ, ಕಾರ್ಮಿಕ ಇಲಾಖೆ, ಜೆಸ್ಕಾಂ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಹುದ್ದೆಗೆ ನಡೆದ ಸ್ಪರ್ದಾತ್ಮಕ ಪರಿಕ್ಷೆಯಲ್ಲಿ ಉತ್ತಿರ್ಣರಾಗಿದ್ದರು, ಅದರಂತೆ ಕರ್ನಾಟಕ ಪೋಲಿಸ್ ಪರಿಕ್ಷೆಯಲ್ಲಿ ಉತ್ತಿರ್ಣರಾಗಿ ಕರ್ನಾಟಕ ಪೋಲಿಸ್ ಅಕಾಡೆಮಿ ಮೈಸೂರಿನಲ್ಲಿ 46 ನೇ ಬ್ಯಾಚ್​ನಲ್ಲಿ ಸುಮಾರು 327 ಜನ 14 ತಿಂಗಳು ತರಬೇತಿ ಪಡೆದಿದ್ದು, ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ 22 ಜನರಲ್ಲಿ ರಾಜೇಂದ್ರ ಪಾಟೀಲ್ ಒಬ್ಬರಾಗಿದ್ದು, ಇದೀಗ ಬೀದರ ಜಿಲ್ಲೆ ಗಂಜ ಪೋಲಿಸ್ ಠಾಣೆಗೆ ನಿಯೋಜನೆಗೊಂಡಿದ್ದು, ಭಾನುವಾರದಂದು ತರಬೇತಿ ಅಕಾಡೆಮಿಯಿಂದ ಬಿಳ್ಕೋಡುಗೆ ಸಮಾರಂಭದಲ್ಲಿ ಮಗನನ್ನು ಪಿಎಸ್ಐ ಸಮವಸ್ತ್ರದಲ್ಲಿ ಕಂಡ ಹೆತ್ತವರ ಭಾವುಕರಾದ ಪ್ರಸಂಗ ಜರುಗಿದೆ.
ಚಿಂಚೋಳಿ ಗಡಿ ತಾಲೂಕಿನ ಬಡ ಕುಟುಂಬದಲ್ಲಿ ಜನಿಸಿ ಸರಕಾರಿ ಶಾಲೆಯಲ್ಲಿಯೇ ಶಿಕ್ಷಣ ಪಡೆದು ದೇಶ ಸೇವೆ ಸಲ್ಲಿಸಿ ಇದೀಗ ನಾಡ ಸೇವೆಗೆ ಸಜ್ಜಾದ ರಾಜೇಂದ್ರ ಪಾಟೀಲ್ ಇಂದಿನ ಯುವ ಪೀಳಿಗೆಗೆ ಪ್ರೇರಣದಾಯಕರಾಗಿದ್ದಾರೆ.