ಕಲಬುರಗಿಯಲ್ಲಿ ಗುರುವಾರ ಆಯೋಜಿಸಿದ್ದ ಗಾಂಧಿ ಸ್ಮತಿ ಜನಜಾಗೃತಿ ಸಮಾವೇಶದಲ್ಲಿ ಸಿ.ಎನ್​.ಬಾಬಳಗಾಂವ್​ ಅವರು ಡಿಸಿ ಇಕ್ರಮ್​ ಶರೀಫ್​ ಅವರಿಗೆ ಹಕ್ಕೋತ್ತಾಯ ಮನವಿ ಸಲ್ಲಿಸಿದರು. ಮಾತೋಶ್ರೀ ಡಾ.ದಾಾಯಿಣಿ ಎಸ್​.ಅಪ್ಪ, ಸತ್ಯನಾಥ ಶೆಟ್ಟಿ, ಅಮಿತ್​ ಶೆಟ್ಟಿ, ದಿನೇಶ ಪೂಜಾರಿ, ಅನಿಲಕುಮಾರ, ಡಾ.ಸದಾನಂದ ಪೆರ್ಲ, ನರಸಿಂಹ ಮೆಂಡನ್​,ಗಣಪತಿ ಮಾಳಂಜೆ, ಚಂದ್ರಶೇಖರ ಕರ್ಜಗಿ, ಮಾಲತಿ ರೇಷ್ಮಿ ಇತರರಿದ್ದರು. 
ಕಲಬುರಗಿ

ಮದ್ಯಪಾನ ದುಷ್ಪರಿಣಾಮ ಜಾಗೃತಿಗೆ ಸಾಥ್​

ಕಲಬುರಗಿ: ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಅದರಲ್ಲೂ ವಿಶೇಷವಾಗಿ ಮದ್ಯಪಾನ ದುಷ್ಪರಿಣಾಮ ಕುರಿತಾದ ಜನ ಜಾಗೃತಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಹೇಳಿದರು.

ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿನ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಾಂಧಿ ಸ್ಮತಿ ಹಾಗೂ ಬೃಹತ್​ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಅವರು ಪಾನ ಮುಕ್ತ ಸಮಾಜ ಬಯಸಿದ್ದರು. ಪ್ರಮುಖವಾಗಿ ಅವರು ಬೋಧಿಸಿದ ಸತ್ಯ, ಅಹಿಂಸೆ, ಸತ್ಯಾಗ್ರಹ ಗ್ರಾಮಸ್ವರಾಜ್​ ಇಡೀ ಜಗತ್ತಿಗೆ ಆದರ್ಶವಾಗಿದೆ. ಅವರು ಸ್ವಾಭಿಮಾನಿ, ಸ್ವಾವಲಂಬನೆಯ ಸಮೃದ್ಧ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್​ ಚೇತನ ಎಂದು ಶ್ಲಾಘಸಿದರು.

ಪಾನ ನಿಷೇಧ ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಸರ್ಕಾರಕ್ಕೆ ಎರಡನೇ ಅತ್ಯಧಿಕ ಆದಾಯ ಮೂಲ ಕೊಡುವ ಅಬಕಾರಿ ಇಲಾಖೆ ಗಳಿಕೆಯ ಮೂಲಕ ಅಭಿವೃದ್ಧಿಗೆ ಹಣ ಬಳಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಜಾರಿ ಮಾಡಿದ ಹೊಸ ಅಬಕಾರಿ ನೀತಿಯ ಪ್ರಕಾರ ಹೆಚ್ಚು ಆಲ್ಕೋಹಾಲ್​ ಹೊಂದಿರುವ ಮದ್ಯಕ್ಕೆ ಅಧಿಕ ತೆರಿಗೆ ಹಾಕುವ ಮೂಲಕ ಮದ್ಯಪಾನಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯರೂ ಆದ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ ದಾಕ್ಷಾಯಿಣಿ ಎಸ್​.ಅಪ್ಪ ಸಾನ್ನಿಧ್ಯ ವಹಿಸಿದ್ದರು.

ರಾಜ್ಯ ಹೋಟೆಲ್​ ಸಂದ ಉಪಾಧ್ಯ ಸತ್ಯನಾಥ ಶೆಟ್ಟಿ, ಬ್ಯಾಂಕ್​ ಆಫ್​ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಅಮಿತ್​ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್​ ಯಡ್ರಾಮಿ ಮಾತನಾಡಿದರು.

ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಸಿ.ಎನ್​. ಬಾಬಳಗಾಂವ್​ ಅಧ್ಯತೆ ವಹಿಸಿದ್ದರು. ಜನ ಜಾಗೃತಿ ವೇದಿಕೆಯ ಅನಿಲ್​ಕುಮಾರ, ಡಾ.ಸದಾನಂದ ಪೆರ್ಲ, ಚಂದ್ರಶೇಖರ ಕರ್ಜಗಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಶಾಂತಪ್ಪ ಕೋರೆ, ಮಾಲತಿ ರೇಷ್ಮಿ, ಸಿದ್ದು ಹಿರೇಮಠ, ನರಸಮ್ಮ ಅವಂಟಿ ಇತರರಿದ್ದರು.

ವಿವಿಧ ಫಲಾನುಭವಿಗಳಿಗೆ ಮನೆ ಹಂಚಿಕೆ, ಪಿಂಚಣಿ ಪತ್ರ, ವಿದ್ಯಾರ್ಥಿ ವೇತನ, ಅಂಗವಿಕಲರಿಗೆ ವೀಲ್​ ಚೇರ್​, ಶೌರ್ಯ ವಿಪತ್ತು ಕಾರ್ಯಕರ್ತರಿಗೆ ಸಲಕರಣೆ, ಸರ್ಕಾರಿ ಶಾಲೆಗೆ ಅಧ್ಯಾಪಕರ ನೇಮಕ ಪತ್ರ ಹಸ್ತಾಂತರಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮಿ ಪ್ರಾರ್ಥನಾ ಗೀತೆ ಹಾಡಿದರು. ಯೋಜನಾಧಿಕಾರಿ ಕೇಶವ ನಿರೂಪಣೆ ಮಾಡಿದರು. ಯೋಜನಾಧಿಕಾರಿ ಸಂಗಪ್ಪ ವಂದಿಸಿದರು.

ಧರ್ಮಸ್ಥಳ -ಶರಣ ಸಂಸ್ಥಾನ ಅಣ್ಣ-ತಮ್ಮ ಇದ್ದಂತೆ

ಧರ್ಮಸ್ಥಳ ಕ್ಷೇತ್ರ ಹಾಗೂ ಶರಣಬಸವೇಶ್ವರ ಸಂಸ್ಥಾನವು ದಾಸೋಹ ತತ್ವದಡಿ ಸಮಾಜ ಸೇವೆಯಲ್ಲಿ ಅಣ್ಣ&ತಮ್ಮನಂತೆ ಕಾರ್ಯ ಸಲ್ಲಿಸುತ್ತಿರುವ ಧಾರ್ಮಿಕ ಕೇಂದ್ರಗಳಾಗಿವೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯರೂ ಆದ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್​.ಅಪ್ಪ ಬಣ್ಣಿಸಿದರು. ಧರ್ಮಸ್ಥಳ ಹಾಗೂ ಶರಣಬಸವೇಶ್ವರ ಸಂಸ್ಥೆಗಳು ಶಿಕ್ಷಣ, ಸಮಾಜ ಸೇವೆಗೆ ತನ್ನ ಸೇವೆ ಮುಡಿಪಾಗಿಟ್ಟಿವೆ. ಕಾಯಕ ದಾಸೋಹದಡಿ ಸಮಾಜ ಪರಿವರ್ತನೆಗೆ ಶ್ರಮಿಸುತ್ತಿವೆ. ಸಂಸ್ಥಾನದ ಶಿಕ್ಷಣ ಸಂಸ್ಥೆಗಳಲ್ಲಿ 300ಕ್ಕೂ ಅಧಿಕ ಮಕ್ಕಳು ಉಚಿತ ಶಿಣ ಪಡೆಯುತ್ತಿದ್ದು, ಅವರು ವೈದ್ಯ ಸೀಟು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯರು ವೈದ್ಯರಾಗುವ ಕನಸು ಈಡೇರುತ್ತಿದೆ. ಧರ್ಮಸ್ಥಳ ವ್ಯಸನಮುಕ್ತ ಸಮಾಜ ನಿರ್ಮಾಣದ ಪವಿತ್ರ ಕಾರ್ಯ ಮಾಡುತ್ತಿದೆ ಎಂದು ನುಡಿದರು.

ಜಾಗೃತಿ ಜಾಥಾ

ಕಾರ್ಯಕ್ರಮಕ್ಕೂ ಮುನ್ನ ಜಗತ್​ ವೃತ್ತದಿಂದ ಶುರುವಾದ ಬೃಹತ್​ ಜನಜಾಗೃತಿ ಜಾಥಾಕ್ಕೆ ಜಿಲ್ಲಾ ಹೋಟೆಲ್​ ಮಾಲೀಕರ ಸಂದ ಅಧ್ಯ ನರಸಿಂಹ ಮೆಂಡನ್​ ಚಾಲನೆ ನೀಡಿದರು. ಈ ಬಾರಿ ರಾಜ್ಯಮಟ್ಟದ ಗಾಂಧಿ ಜಯಂತಿ ನಿಮಿತ್ತ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಅಳಂದನ ಮಾತೋಶ್ರೀ ಅಂಬವ್ವ ರುಕ್ಮಯ್ಯ ಗುತ್ತೇದಾರ್​ ಸ್ಮಾರಕ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿಾನ ವಿಭಾಗದ ವಿದ್ಯಾರ್ಥಿ ವಿಜಯಲಕ್ಷ್ಮೀ ಪೋದ್ದಾರ್​ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವಸಹಾಯ ಗುಂಪುಗಳಿಂದ ರಾಜ್ಯದಲ್ಲಿ 53 ಲಕ್ಕೂ ಹೆಚ್ಚು ಜನರು ಬ್ಯಾಂಕ್​ ವ್ಯವಹಾರ ನಡೆಸುತ್ತಿದ್ದು, ರಿಸರ್ವ್​ ಬ್ಯಾಂಕಿನ ಮಹತ್ವಾಕಾಂಕ್ಷಿ ಆರ್ಥಿಕ ಸೇರ್ಪಡೆ ಯೋಜನೆಗೆ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮಹತ್ವದ ಕೊಡುಗೆ ನೀಡಿದೆ. ಸರ್ಕಾರ ಮತ್ತು ಬ್ಯಾಂಕ್​ ಮಾಡುವ ಕೆಲಸ ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ.
> ಅಮಿತ್​ ಶೆಟ್ಟಿ, ಪ್ರಾದೇಶಿಕ ವ್ಯವಸ್ಥಾಪಕ, ಬ್ಯಾಂಕ್​ ಆಫ್​ ಬರೋಡ